PM Narendra Modi: ಕಾಶಿಗೆ ಭೇಟಿ ನೀಡಲು 10 ಕಾರಣ ಹೇಳಿದ ಪ್ರಧಾನಿ ನರೇಂದ್ರ ಮೋದಿ
ಕಾಶಿ ಎಲ್ಲರ ಆಗಮನಕ್ಕೆ ಕಾಯುತ್ತಿದೆ. ಅನೇಕ ಜನರು ಇಲ್ಲಿಗೆ ಭೇಟಿ ನೀಡಲು ಕಾತರಿಸುತ್ತಿದ್ದಾರೆ. ಒಂದು ಬಾರಿ ಭೇಟಿ ಕಾಶಿಗೆ ಭೇಟಿ ನೀಡಿದರೆ, ನಿಮ್ಮನ್ನು ಮಂತ್ರಮುಗ್ಧಗೊಳಿಸುತ್ತದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ನಲ್ಲಿ ತಮ್ಮ ಲೋಕಸಭೆ ಕ್ಷೇತ್ರವಾದ ವಾರಣಾಸಿ ಬಗ್ಗೆ ಹಾಡಿಹೊಗಳಿದ್ದಾರೆ. ಜತೆಗೆ ಮೋದಿ ಅವರು ಉತ್ತರ ಪ್ರದೇಶದ ಪ್ರಮುಖ ಧಾರ್ಮಿಕ ನಗರಕ್ಕೆ ಭೇಟಿ ನೀಡಲು 10 ಕಾರಣಗಳಿವೆ ಎಂದು ಹೇಳಿದ್ದಾರೆ. ವಾರಾಣಾಸಿಯ ಅದ್ಭುತ ಧಾರ್ಮಿಕ ಆಚರಣೆ ಮತ್ತು ಸುಂದರ ನಗರಗಳು, ಆಚರಣೆ ಬಗ್ಗೆ ಅವರು ಮಾತನಾಡಿದ್ದಾರೆ. ಕಾಶಿಯ ಧಾರ್ಮಿಕ ಕ್ಷೇತ್ರ, ಅಲ್ಲಿ ಸುತ್ತಲಿನ ಪ್ರದೇಶಗಳು ನಮ್ಮನ್ನು ಖಂಡಿತ ಮೋಡಿ ಮಾಡುತ್ತವೆ ಎಂದು ಪ್ರಧಾನಿ ಹೇಳಿದ್ದಾರೆ. ಕಾಶಿ ಎಲ್ಲರ ಆಗಮನಕ್ಕೆ ಕಾಯುತ್ತಿದೆ. ಅನೇಕ ಜನರು ಇಲ್ಲಿಗೆ ಭೇಟಿ ನೀಡಲು ಕಾತರಿಸುತ್ತಿದ್ದಾರೆ. ಒಂದು ಬಾರಿ ಭೇಟಿ ಕಾಶಿಗೆ ಭೇಟಿ ನೀಡಿದರೆ, ನಿಮ್ಮನ್ನು ಮಂತ್ರಮುಗ್ಧಗೊಳಿಸುತ್ತದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಇದರ ಜತೆಗೆ ಜೀವನದಲ್ಲಿ ಒಮ್ಮೆಯಾದರೂ, ನೀವು ಕಾಶಿಗೆ ಈ 10 ಕಾರಣಗಳಿಗಾಗಿ ಭೇಟಿ ನೀಡಬೇಕು ಎಂದು ವರ್ಟಿಗೋ ವಾರಿಯರ್ ಟ್ವಿಟರ್ನಲ್ಲಿ ಮಾಡಿರುವ ಪೋಸ್ಟ್ ಅನ್ನು ಪ್ರಧಾನಿ ಮೋದಿ ರೀ ಟ್ವೀಟ್ ಮಾಡಿದ್ದಾರೆ.

