ಕವನ ವಾಚನದ ವೇಳೆ ಕವಿಯೊಬ್ಬರು ಹೃದಯಾಘಾತ(Heart Attack)ದಿಂದ ಸಾವನ್ನಪ್ಪಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.ಕೆಲ ದಿನಗಳ ಹಿಂದೆ ರಾಮಲೀಲಾ ವೇದಿಕೆಯಲ್ಲಿ ಹನುಮಂತನ ಪಾತ್ರ ನಿರ್ವಹಿಸುತ್ತಿದ್ದ ಕಲಾವಿದ ಹೃದಯಾಘಾತದಿಂದ ಸಾವನ್ನಪ್ಪಿರುವ ವಿಡಿಯೋ ವೈರಲ್ ಆಗಿತ್ತು. ಇದೀಗ ಉತ್ತರಾಖಂಡದ ಉಧಮ್ ಸಿಂಗ್ ನಗರದಲ್ಲೂ ಇಂಥದ್ದೇ ಘಟನೆ ನಡೆದಿದೆ. ಕವನ ವಾಚಿಸುವಾಗ ಹೃದಯಾಘಾತದಿಂದ 75 ವರ್ಷದ ಕವಿ ಸಾವನ್ನಪ್ಪಿದ್ದಾರೆ.
ಜನವರಿ 28 ರಂದು ಪಂತನಗರ ಕೃಷಿ ವಿಶ್ವವಿದ್ಯಾಲಯದ ಡಾ.ಬಿ.ಬಿ.ಸಿಂಗ್ ಸಭಾಂಗಣದಲ್ಲಿ ಕವಿಗೋಷ್ಠಿ ಮತ್ತು ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿತ್ತು. ಕವಿ ಸುಭಾಷ್ ಚತುರ್ವೇದಿ ವೇದಿಕೆಯಲ್ಲಿ ಕವನ ವಾಚನ ಮಾಡುತ್ತಿದ್ದರು. ಸುಭಾಷ್ ಚತುರ್ವೇದಿ ಮೈಕ್ ಹಿಡಿದು ಕವನ ವಾಚನ ಮಾಡುತ್ತಿರುವುದು ವಿಡಿಯೋದಲ್ಲಿ ಕಾಣಬಹುದು.
Poet while reciting poetry at a poetry festival in Pantnagar suffered a #heartattack.@india_jab#newnormal #NewWorldOrder https://t.co/NPKp40yStN pic.twitter.com/5Her1dFI9N
— Dee (@DeeEternalOpt) January 29, 2024
ಕವಿತೆ ಓದುತ್ತಿರುವಾಗ ಸುಭಾಷ್ ಚತುರ್ವೇದಿ ಮೈಕ್ ಸಮೇತ ಥಟ್ಟನೆ ಹಿಂದೆ ಬೀಳುತ್ತಾರೆ. ವೇದಿಕೆ ಮೇಲೆ ಕವಿ ಬಿದ್ದ ತಕ್ಷಣ ಗದ್ದಲ ಉಂಟಾಯಿತು. ಕವಿ ಸುಭಾಷ್ ಚತುರ್ವೇದಿ ಅವರನ್ನು ವೇದಿಕೆಯಿಂದ ಕರೆದೊಯ್ದು ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಆಸ್ಪತ್ರೆಯಲ್ಲಿ ಕವಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಮತ್ತಷ್ಟು ಓದಿ: ಮಕ್ಕಳಲ್ಲಿ ಹೃದಯಾಘಾತ ಉಂಟಾಗುವ ಲಕ್ಷಣಗಳೇನು?
ಮೃತ ಕವಿ ಜಿಲ್ಲೆಯಲ್ಲಿ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದರು. ಎನ್‌ಸಿಆರ್‌ಬಿ ಎಚ್ಚರಿಕೆಯ ಹೊಸ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. 2022 ರಲ್ಲಿ, ಹೃದಯಾಘಾತದ ಪ್ರಕರಣಗಳು 12.5 ಪ್ರತಿಶತದಷ್ಟು ಹೆಚ್ಚಾಗಿದೆ. ಕಳೆದ ಮೂರು ವರ್ಷಗಳಲ್ಲಿ ಭಾರತದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದವರ ಸಂಖ್ಯೆ ಆತಂಕಕಾರಿಯಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:21 am, Tue, 30 January 24