ಕಂದಮ್ಮಗಳನ್ನು ಮಾರಾಟ ಮಾಡುತ್ತಿದ್ದ 9 ಜನ ಅರೆಸ್ಟ್

ಹೈದರಾಬಾದ್: ತೆಲಂಗಾಣದಲ್ಲಿ ಕಂದಮ್ಮಗಳನ್ನು ಮಾರಾಟ ಮಾಡುತ್ತಿದ್ದ ದೊಡ್ಡ ಜಾಲವೊಂದು ಬೆಳಕಿಗೆ ಬಂದಿದೆ. ಮಕ್ಕಳ ಮಾರಾಟದ ಮೂಲಕ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಆಗತಾನೆ ಹುಟ್ಟಿದ ಮಕ್ಕಳನ್ನು 10ರಿಂದ 14 ಲಕ್ಷದ ರೂಪಾಯಿಗಳಿಗೆ ಏಜಂಟರು ಮಾರಾಟ ಮಾಡುತ್ತಿದ್ದರು. ಆದ್ರೆ, ಮಗುವಿನ ತಾಯಿಗೆ ಕೇವಲ 70ಸಾವಿರ ರೂಪಾಯಿ ನೀಡಿ ದಂಧೆಕೋರರು ಮೋಸ ಮಾಡ್ತಿದ್ರು. ತೆಲಂಗಾಣದ ನಲ್ಗೊಂಡ, ಮೆಹಬೂಬನಗರ, ಕರೀಮನಗರ ಜಿಲ್ಲೆಗಳ ತಾಂಡಾಗಳಲ್ಲಿನ ಬಡ ಮಹಿಳೆಯರನ್ನೇ ಈ ತಂಡ ಟಾರ್ಗೆಟ್ ಮಾಡಿತ್ತು. ಇದಕ್ಕೆ ಸಂತಾನ ಸಾಫಲ್ಯ ಕೇಂದ್ರಗಳು […]

ಕಂದಮ್ಮಗಳನ್ನು ಮಾರಾಟ ಮಾಡುತ್ತಿದ್ದ 9 ಜನ ಅರೆಸ್ಟ್

Updated on: Feb 05, 2020 | 6:35 AM

ಹೈದರಾಬಾದ್: ತೆಲಂಗಾಣದಲ್ಲಿ ಕಂದಮ್ಮಗಳನ್ನು ಮಾರಾಟ ಮಾಡುತ್ತಿದ್ದ ದೊಡ್ಡ ಜಾಲವೊಂದು ಬೆಳಕಿಗೆ ಬಂದಿದೆ. ಮಕ್ಕಳ ಮಾರಾಟದ ಮೂಲಕ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ.

ಆಗತಾನೆ ಹುಟ್ಟಿದ ಮಕ್ಕಳನ್ನು 10ರಿಂದ 14 ಲಕ್ಷದ ರೂಪಾಯಿಗಳಿಗೆ ಏಜಂಟರು ಮಾರಾಟ ಮಾಡುತ್ತಿದ್ದರು. ಆದ್ರೆ, ಮಗುವಿನ ತಾಯಿಗೆ ಕೇವಲ 70ಸಾವಿರ ರೂಪಾಯಿ ನೀಡಿ ದಂಧೆಕೋರರು ಮೋಸ ಮಾಡ್ತಿದ್ರು. ತೆಲಂಗಾಣದ ನಲ್ಗೊಂಡ, ಮೆಹಬೂಬನಗರ, ಕರೀಮನಗರ ಜಿಲ್ಲೆಗಳ ತಾಂಡಾಗಳಲ್ಲಿನ ಬಡ ಮಹಿಳೆಯರನ್ನೇ ಈ ತಂಡ ಟಾರ್ಗೆಟ್ ಮಾಡಿತ್ತು. ಇದಕ್ಕೆ ಸಂತಾನ ಸಾಫಲ್ಯ ಕೇಂದ್ರಗಳು ಸಹಕಾರ ನೀಡುತ್ತಿದ್ವು ಅಂತಲೂ ಹೇಳಲಾಗ್ತಿದೆ.

ಈ ಅಕ್ರಮ ದಂಧೆ ನಡೆಸುತ್ತಿದ್ದ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ 9 ಜನರನ್ನು ಹೈದರಾಬಾದನ ವಿಶೇಷ ಪೊಲೀಸ್ ತಂಡ ಬಂಧಿಸಿದೆ. ವಿಚಾರಣೆ ವೇಳೆ ಈ ತಂಡ 14ಕ್ಕೂ ಹೆಚ್ಚು ಮಕ್ಕಳನ್ನು ಮಾರಾಟ ಮಾಡಿರುವುದು ಬಯಲಾಗಿದೆ. ಇದಕ್ಕೆ ಸಹಕರಿಸುತ್ತಿದ್ದ ಕೆಲ ಪರ್ಟಿಲಿಟಿ ಸೆಂಟರ್​ಗಳ ಮುಖ್ಯಸ್ಥರು ಪರಾರಿಯಾಗಿದ್ದಾರೆ.