Video ನೋಡಿ -ಮೊಬೈಲ್​​ನಲ್ಲಿ ಮಾತನಾಡ್ತಾ ಉತ್ತರಾಖಂಡ ಮುಖ್ಯಮಂತ್ರಿಗೆ ಸೆಲ್ಯೂಟ್ ಹೊಡೆದ ಪೊಲೀಸ್ ಅಧಿಕಾರಿ! ಆಮೇಲೇನಾಯ್ತು?

ಮುಖ್ಯಮಂತ್ರಿ ಧಾಮಿ ತಮ್ಮ ಹೆಲಿಕಾಪ್ಟರ್‌ನಿಂದ ಇಳಿಯುತ್ತಿದ್ದಂತೆ, ಕೋಟ್‌ದ್ವಾರದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಸುಯಲ್ ಫೋನ್‌ನಲ್ಲಿ ಮಾತನಾಡುತ್ತಾ ಸೆಲ್ಯೂಟ್ ಮಾಡಿದ್ದಾರೆ. ಇದು ವೀಡಿಯೊ ಆಗಿದ್ದು ಅದೀಗ ವೈರಲ್ ಆಗಿದೆ. ಈ ಮಧ್ಯೆ, ಉನ್ನತ ಅಧಿಕಾರಿಗಳ ಕಣ್ಣಿಗೂ ಈ ವಿಡಿಯೋ ತುಣುಕು ಕಾಣಿಸಿಕೊಂಡಿದೆ. ಇದನ್ನು ಪರಾಮರ್ಷಿಸಿದ ಉನ್ನತಾಧಿಕಾರಿಗಳು ತತಕ್ಷಣವೇ ಎಎಸ್‌ಪಿ ಶೇಖರ್ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದ್ದಾರೆ.

Video ನೋಡಿ -ಮೊಬೈಲ್​​ನಲ್ಲಿ ಮಾತನಾಡ್ತಾ ಉತ್ತರಾಖಂಡ ಮುಖ್ಯಮಂತ್ರಿಗೆ ಸೆಲ್ಯೂಟ್ ಹೊಡೆದ ಪೊಲೀಸ್ ಅಧಿಕಾರಿ! ಆಮೇಲೇನಾಯ್ತು?
ಮೊಬೈಲ್​​ನಲ್ಲಿ ಮಾತನಾಡ್ತಾ ಉತ್ತರಾಖಂಡ ಮುಖ್ಯಮಂತ್ರಿಗೆ ಸೆಲ್ಯೂಟ್ ಹೊಡೆದ ಪೊಲೀಸ್ ಅಧಿಕಾರಿ!

Updated on: Aug 18, 2023 | 3:24 PM

ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ (Chief Minister Pushkar Singh Dhami) ಅವರು ಕೋಟ್‌ದ್ವಾರದಲ್ಲಿ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಹೆಲಿಕಾಪ್ಟರ್​​​ನಲ್ಲಿ ಪ್ರಯಾಣಿಸಿದ್ದರು. ಗುಡ್ಡಗಾಡು ಪ್ರದೇಶದ ಸಣ್ಣ ವಿಮಾನ ನಿಲ್ದಾಣದಲ್ಲಿ ( Grastanganj Helipad in Uttarakhand) ಇಳಿದು ಮಳೆ ದುರಂತದ ಸ್ಥಳಗಳಿಗೆ ತೆರಳಬೇಕಿತ್ತು. ಅತ್ತ ಸಾಕ್ಷಾತ್​​ ಮುಖ್ಯಮಂತ್ರಿಯೇ ಹೆಲಿಕಾಪ್ಟರ್​​​ನಿಂದ ಇಳಿದು ಬರುತ್ತಿರುವಾಗ, ಪರಿಸ್ಥಿತಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳದೆ ಶಿಸ್ತುಬದ್ಧ ಇಲಾಖೆಯ ಪೊಲೀಸ್ ಅಧಿಕಾರಿಯೊಬ್ಬರು ಫೋನ್‌ನಲ್ಲಿ (Mobile phone) ಮಾತನಾಡುತ್ತ ಇದ್ದಾಗಲೇ ಮುಖ್ಯಮಂತ್ರಿಗೆ ಸೆಲ್ಯೂಟ್ ಹೊಡೆದಿದ್ದಾರೆ.

ಮುಖ್ಯಮಂತ್ರಿ ಧಾಮಿ ತಮ್ಮ ಹೆಲಿಕಾಪ್ಟರ್‌ನಿಂದ ಇಳಿಯುತ್ತಿದ್ದಂತೆ, ಕೋಟ್‌ದ್ವಾರದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಶೇಖರ್ ಸುಯಲ್ ಅವರೇ ಹೀಗೆ ಫೋನ್‌ನಲ್ಲಿ ಮಾತನಾಡುತ್ತಾ ಸೆಲ್ಯೂಟ್ ಮಾಡಿದ ಅಧಿಕಾರಿ. ಇದು ವೀಡಿಯೊ ಆಗಿದ್ದು ಅದೀಗ ವೈರಲ್ ಆಗಿದೆ. ಈ ಮಧ್ಯೆ, ಉನ್ನತ ಅಧಿಕಾರಿಗಳ ಕಣ್ಣಿಗೂ ಈ ವಿಡಿಯೋ ತುಣುಕು ಕಾಣಿಸಿಕೊಂಡಿದೆ. ಇದನ್ನು ಪರಾಮರ್ಷಿಸಿದ ಉನ್ನತಾಧಿಕಾರಿಗಳು ತತಕ್ಷಣವೇ ಶಿಸ್ತು ಕ್ರಮ ಕೈಗೊಂಡಿದ್ದಾರೆ. ನರೇಂದ್ರ ನಗರದಲ್ಲಿರುವ ಪೊಲೀಸ್ ತರಬೇತಿ ಕೇಂದ್ರಕ್ಕೆ ಎಎಸ್ಪಿಯನ್ನು ವರ್ಗಾವಣೆ (Transfer) ಮಾಡಿ, ಕೈತೊಳೆದುಕೊಂಡಿದ್ದಾರೆ. ಇದೀಗ ಕೋಟ್‌ದ್ವಾರದ ಹೊಸ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ಜಯ್ ಬಲುನಿ ಅವರನ್ನು ನೇಮಿಸಲಾಗಿದೆ.

ಈ ಘಟನೆ ಆಗಸ್ಟ್ 11 ರಂದು ಕೋಟ್‌ದ್ವಾರದಲ್ಲಿ ನಡೆದಿದೆ. ಮುಖ್ಯಮಂತ್ರಿ ಧಾಮಿ ಹರಿದ್ವಾರದಿಂದ ಹೆಲಿಕಾಪ್ಟರ್ ಮೂಲಕ ಗ್ರಾಸ್ತಂಗಂಜ್ ಹೆಲಿಪ್ಯಾಡ್‌ಗೆ ಆಗಮಿಸಿದ್ದರು. ಅವರ ಆಗಮನದ ಮಾಹಿತಿ ಪಡೆದಿದ್ದ ಸ್ಥಳೀಯ ಆಡಳಿತವು ಹೆಲಿಪ್ಯಾಡ್‌ನಲ್ಲಿ ಮುಖ್ಯಮಂತ್ರಿಯನ್ನು ಸರ್ಕಾರಿ ಪ್ರೊಟೋಕಾಲ್​ ಪ್ರಕಾರ ಬರಮಾಡಿಕೊಳ್ಳುವಂತೆ ಸದರಿ ಅಧಿಕಾರಿಯನ್ನು ನೇಮಿಸಿತ್ತು. ಅದರಂತೆ ಹೆಲಿಪ್ಯಾಡ್​ಗೆ ಆಗಮಿಸಿದ ಪೊಲೀಸ್ ಅಧಿಕಾರಿ ಒಂದು ಕೈಯಲ್ಲಿ ಕಿವಿಗೆ ಫೋನ್ ಹಿಡಿದು, ಇನ್ನೊಂದು ಕೈಯಿಂದ ಮುಖ್ಯಮಂತ್ರಿಗೆ ಸೆಲ್ಯೂಟ್​​​ ಹೊಡೆದರು.


ರಾಜ್ಯದಲ್ಲಿ ಭಾರೀ ಮಳೆಯ ನಂತರ ಕೋಟ್‌ದ್ವಾರದಲ್ಲಿ ಅನೇಕ ಮನೆಗಳು ಮಣ್ಣು ಮತ್ತು ನೀರಿನಿಂದ ಮುಳುಗಿವೆ. ನದಿಗಳು ತಮ್ಮ ಮಾರ್ಗವನ್ನು ಬದಲಾಯಿಸಿವೆ ಮತ್ತು ಎರಡು ದೊಡ್ಡ ಸೇತುವೆಗಳು ಮತ್ತು ಒಂದು ಸಣ್ಣ ಸೇತುವೆ ಸೇರಿದಂತೆ ಮೂರು ಸೇತುವೆಗಳು ಈಗಾಗಲೇ ಕುಸಿದಿವೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಭೀಕರತೆ ಅರಿತು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಶುಕ್ರವಾರ ಕೋಟ್‌ದ್ವಾರದಲ್ಲಿ ವಿಪತ್ತು ಪೀಡಿತ ಪ್ರದೇಶಕ್ಕೆ ಖುದ್ದು ಭೇಟಿ ನೀಡಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:15 pm, Fri, 18 August 23