ಭಾರತದಲ್ಲಿ ದುಷ್ಕೃತ್ಯ ನಡೆಸಲು ಐಎಸ್ಐ ಸಂಚು, ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಾಯಿಬಿಟ್ಟ ಐಎಸ್ಐ ಏಜೆಂಟ್ ಕಲೀಮ್
ಭಾರತದಲ್ಲಿ ದುಷ್ಕೃತ್ಯ ನಡೆಸಲು ಪಾಕ್ನ ಐಎಸ್ಐ ಸಂಚು ರೂಪಿಸಿರುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಗುಪ್ತಚರ ಇಲಾಖೆ ಸ್ಫೋಟಕ ಮಾಹಿತಿಯನ್ನು ನೀಡಿದೆ. ಉಗ್ರರ ಮೂಲಕ ಸೇನಾ ನೆಲೆಗಳು ಸೇರಿ ಭಾರತದ ಹಲವಡೆ ದುಷ್ಕೃತ್ಯ ನಡೆಸಲು ಪಾಕ್ನ ಐಎಸ್ಐ ಸಂಚು ರೂಪಿಸಿದೆ ಎಂದು ಹೇಳಲಾಗಿದೆ.
ದೆಹಲಿ, ಆ.18: ಭಾರತದಲ್ಲಿ ದುಷ್ಕೃತ್ಯ ನಡೆಸಲು ಪಾಕ್ನ ಐಎಸ್ಐ (ISI) ಸಂಚು ರೂಪಿಸಿರುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಗುಪ್ತಚರ ಇಲಾಖೆ ಸ್ಫೋಟಕ ಮಾಹಿತಿಯನ್ನು ನೀಡಿದೆ. ಉಗ್ರರ ಮೂಲಕ ಸೇನಾ ನೆಲೆಗಳು ಸೇರಿ ಭಾರತದ ಹಲವಡೆ ದುಷ್ಕೃತ್ಯ ನಡೆಸಲು ಪಾಕ್ನ ಐಎಸ್ಐ ಸಂಚು ರೂಪಿಸಿದೆ ಎಂದು ಹೇಳಲಾಗಿದೆ. ಇದೀಗ ಕೇಂದ್ರ ಸರ್ಕಾರಕ್ಕೆ ಪ್ರಮುಖ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶದಲ್ಲಿ ಪಾಕಿಸ್ತಾನ ಐಎಸ್ಐ ಏಜೆಂಟ್ ಕಲೀಮ್ ಬಂಧನ ಮಾಡಲಾಗಿದ್ದು, ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾನೆ ಎಂದು ಹೇಳಲಾಗಿದೆ. ಭಾರತದಲ್ಲಿ ಅನೇಕ ಕಡೆ ದುಷ್ಕೃತ್ಯ ನಡೆಸಲು ಸಂಚು ರೂಪಿಸಿದ್ದು, ಇನ್ನು ಪಾಕ್ ಗುಪ್ತಚರ ಇಲಾಖೆ ಸಂಚಿನ ಬಗ್ಗೆಯು ಬಂಧಿತ ಐಎಸ್ಐ ಏಜೆಂಟ್ ಕಲೀಮ್ ಹೇಳಿದ್ದಾನೆ. ಬಂಧಿತ ಕಲೀಮ್ ಬಳಿ ಇದ್ದ ಹಲವು ದಾಖಲೆಗಳು ವಶಪಡಿಸಲಾಗಿದೆ. ದಾಖಲೆಗಳಲ್ಲಿ ಭಾರತೀಯ ಸೇನಾ ಕೇಂದ್ರಗಳ ಬಗ್ಗೆ ಉಲ್ಲೇಖಿಸಲಾಗಿದೆ. ರಫೇಲ್ ಯುದ್ಧ ವಿಮಾನದ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗಿದೆ ಎಂದು ವಿಚಾರಣೆ ಸಮಯದಲ್ಲಿ ತಿಳಿಸಿದ್ದಾನೆ.
Published On - 1:13 pm, Fri, 18 August 23