ದೆಹಲಿ: ರಾಜಕೀಯ ಪಕ್ಷಗಳು ಚುನಾವಣಾ ಚಿಹ್ನೆಗಳನ್ನು ತಮ್ಮ ವಿಶೇಷ ಆಸ್ತಿ ಎಂದು ಪರಿಗಣಿಸುವಂತಿಲ್ಲ. ಒಂದೊಮ್ಮೆ ಪಕ್ಷದ ಕಾರ್ಯಕ್ಷಮತೆ ನೀರಸವಾಗಿದ್ದರೆ ಚಿಹ್ನೆಯನ್ನು ಬಳಸುವ ಹಕ್ಕನ್ನು ಕಳೆದುಕೊಳ್ಳಬಹುದು ಎಂದು ದೆಹಲಿ ಹೈಕೋರ್ಟ್ (Delhi High Court) ಹೇಳಿದೆ. ಶಿವಸೇನೆಯ ಉದ್ಧವ್ ಠಾಕ್ರೆ (Uddhav Thackeray) ಬಣಕ್ಕೆ ‘ಉರಿಯುತ್ತಿರುವ ಜ್ಯೋತಿ’ ಚುನಾವಣಾ ಚಿಹ್ನೆ (Election Symbol)ಯನ್ನು ಹಂಚಿಕೆ ಮಾಡುವುದರ ವಿರುದ್ಧದ ಮನವಿಯನ್ನು ತಿರಸ್ಕರಿಸಿದ ಏಕ ಪೀಠದ ಆದೇಶವನ್ನು ಪ್ರಶ್ನಿಸಿ ಸಮತಾ ಪಕ್ಷವು (Samatha Party- NCP) ಸಲ್ಲಿಸಿದ ಮೇಲ್ಮನವಿಯನ್ನು ವಜಾಗೊಳಿಸುವ ಸಂದರ್ಭದಲ್ಲಿ ಕೋರ್ಟ್ ಹೇಳಿದೆ. ಮೇಲ್ಮನವಿದಾರ ಪಕ್ಷವು ‘ಉರಿಯುತ್ತಿರುವ ಜ್ಯೋತಿ’ ಚಿಹ್ನೆ ತನಗೆ ಸೇರಿದ್ದು ಮತ್ತು ಅದರ ಮೇಲೆ ಚುನಾವಣೆಗೆ ಸ್ಪರ್ಧಿಸಿದೆ ಎಂದು ಹೇಳಿಕೊಂಡಿದೆ. ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೋನಿಯಂ ಪ್ರಸಾದ್ ಅವರ ಪೀಠವು ಸುಬ್ರಮಣಿಯನ್ ಸ್ವಾಮಿ (Subramanian Swamy) ವಿರುದ್ಧ ಭಾರತ ಚುನಾವಣಾ ಆಯೋಗ (Election Commission of India)ದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ (Supreme Court)ನ ಹಿಂದಿನ ತೀರ್ಪನ್ನು ಉಲ್ಲೇಖಿಸಿದೆ ಮತ್ತು ತೀರ್ಪಿನಲ್ಲಿ ಚಿಹ್ನೆಯು ಸ್ಪಷ್ಟವಾದ ವಿಷಯವಲ್ಲ ಎಂದು ಹೇಳಿರುವುದನ್ನು ಬೊಟ್ಟು ಮಾಡಿದೆ.
“ಲಕ್ಷಾಂತರ ಅನಕ್ಷರಸ್ಥ ಮತದಾರರು ಒಂದು ನಿರ್ದಿಷ್ಟ ಪಕ್ಷಕ್ಕೆ ಸೇರಿದ ತಮ್ಮ ಆಯ್ಕೆಯ ಅಭ್ಯರ್ಥಿಯ ಪರವಾಗಿ ತಮ್ಮ ಮತದಾನದ ಹಕ್ಕನ್ನು ಸರಿಯಾಗಿ ಚಲಾಯಿಸಲು ಸಹಾಯ ಮಾಡಲು ನಿರ್ದಿಷ್ಟ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿರುವ ಚಿಹ್ನೆಯಾಗಿದೆ. ಹೀಗಾಗಿ ಸಂಬಂಧಪಟ್ಟ ಪಕ್ಷಗಳು ಚಿಹ್ನೆಯನ್ನು ಅದರ ವಿಶೇಷ ಆಸ್ತಿ ಎಂದು ಪರಿಗಣಿಸಲು ಸಾಧ್ಯವಿಲ್ಲ. ಚುನಾವಣಾ ಚಿಹ್ನೆಗಳು (ಮೀಸಲಾತಿ ಮತ್ತು ಹಂಚಿಕೆ) ಆದೇಶ 1968 ರ ಪ್ರಕಾರ ಪಕ್ಷದ ನೀರಸ ಪ್ರದರ್ಶನದಿಂದ ಚಿಹ್ನೆಯನ್ನು ಬಳಸುವ ಹಕ್ಕನ್ನು ಕಳೆದುಕೊಳ್ಳಬಹುದು ಎಂದು ಸ್ಪಷ್ಟಪಡಿಸುತ್ತದೆ” ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಇದನ್ನೂ ಓದಿ: PM Modi Rally: ಗುಜರಾತ್ನ ಸೌರಾಷ್ಟ್ರದಲ್ಲಿ ಮೂರು ದಿನಗಳ ಕಾಲ ರ‍್ಯಾಲಿ ನಡೆಸಲಿರುವ ಪ್ರಧಾನಿ ಮೋದಿ
ಸಮತಾ ಪಕ್ಷದ ಸದಸ್ಯರಿಗೆ ಉರಿಯುವ ಟಾರ್ಚ್ ಚಿಹ್ನೆಯನ್ನು ಬಳಸಲು ಅನುಮತಿಸಲಾಗಿದ್ದರೂ ಚಿಹ್ನೆಯು ಮುಕ್ತ ಚಿಹ್ನೆಯಾಗಿ ಮಾರ್ಪಟ್ಟಿದೆ. ಅಲ್ಲದೆ 2004 ರಲ್ಲಿ ಪಕ್ಷದ ಮಾನ್ಯತೆಯನ್ನು ರದ್ದುಪಡಿಸಲಾಗಿದೆ. ಹೀಗಾಗಿ ಅದನ್ನು ಇತರ ಯಾವುದೇ ಪಕ್ಷಕ್ಕೆ ಹಂಚಿಕೆ ಮಾಡುವುದು ಚುನಾವಣಾ ಆಯೋಗದ ವ್ಯಾಪ್ತಿಗೆ ಬರುತ್ತದೆ ಎಂದು ಅದು ಹೇಳಿದೆ.
“ಭಾರತೀಯ ಚುನಾವಣಾ ಆಯೋಗವು 2022ರ ಅಕ್ಟೋಬರ್ 10ರಂದು ಹೊರಡಿಸಿದ ಪತ್ರ ಮತ್ತು ಆದೇಶದಿಂದ ಶಿವಸೇನೆಗೆ (ಉದ್ಧವ್ ಠಾಕ್ರೆ) ‘ಉರಿಯುತ್ತಿರುವ ಜ್ಯೋತಿ’ ಚಿಹ್ನೆಯನ್ನು ಮಂಜೂರು ಮಾಡಿರುವುದು ಮತ್ತು 2022 ರ ಅಕ್ಟೋಬರ್ 19 ರಂದು ಏಕ ನ್ಯಾಯಾಧೀಶರು ಹೊರಡಿಸಿದ ಆದೇಶದಲ್ಲಿ ಯಾವುದೇ ದೋಷ ಕಂಡುಬಂದಿಲ್ಲ ಎಂದು ನ್ಯಾಯಪೀಠ ಹೇಳಿದೆ. ಈ ಹಿಂದೆ ಅಕ್ಟೋಬರ್ನಲ್ಲಿ ಏಕಸದಸ್ಯ ಪೀಠ ಏಕಸದಸ್ಯ ಪೀಠ, ನ್ಯಾಯಾಲಯದ ಮುಂದೆ ಯಾವುದೇ ಹಕ್ಕು ಇಲ್ಲದಿರುವುದರಿಂದ ಅರ್ಜಿದಾರರು ಚುನಾವಣಾ ಆಯೋಗದ ಆದೇಶವನ್ನು ರದ್ದುಗೊಳಿಸಲು ಮ್ಯಾಂಡಮಸ್ ಪಡೆಯಲು ಸಾಧ್ಯವಿಲ್ಲ ಮತ್ತು ಪಕ್ಷವು ಚಿಹ್ನೆಯ ಮೇಲೆ ಯಾವುದೇ ಹಕ್ಕನ್ನು ಪ್ರದರ್ಶಿಸಿಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿತ್ತು. ವಿಚಾರಣೆ ವೇಳೆ 2004ರಲ್ಲಿ ಪಕ್ಷದ ಮಾನ್ಯತೆಯನ್ನು ರದ್ದುಗೊಳಿಸಲಾಯಿತು ಎಂದು ಅದು ಗಮನಿಸಿತ್ತು.
ಇದನ್ನೂ ಓದಿ: ವೋಟರ್ ಐಡಿ ‘ಚಿಲುಮೆ’: ಚಿಲುಮೆ ಸಂಸ್ಥೆ ಹೇಗೆ ಮತದಾರರ ಮಾಹಿತಿ ಕಲೆಹಾಕುತ್ತಿತ್ತು ಗೊತ್ತಾ? ಇಲ್ಲಿದೆ ಮಾಹಿತಿ
ಚುನಾವಣಾ ಆಯೋಗ (ಇಸಿ), ಶಿವಸೇನೆ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ನೋಟಿಸ್ ನೀಡದೆ ವಿಚಾರಣೆಯ ಮೊದಲ ದಿನವೇ ಏಕಸದಸ್ಯ ಪೀಠವು ಅರ್ಜಿಯನ್ನು ವಜಾಗೊಳಿಸಿದೆ ಎಂದು ಅರ್ಜಿದಾರರು ತಮ್ಮ ಮೇಲ್ಮನವಿಯಲ್ಲಿ ತಿಳಿಸಿದ್ದಾರೆ. ಉರಿಯುತ್ತಿರುವ ಜ್ಯೋತಿ ಕಾಯ್ದಿರಿಸಿದ ಚಿಹ್ನೆಯಾಗಿದ್ದು, ಅದನ್ನು ಮುಕ್ತ ಚಿಹ್ನೆಯನ್ನಾಗಿ ಮಾಡಲಾಗಿದೆ ಎಂದು ಮೊದಲು ಅಧಿಸೂಚನೆ ಹೊರಡಿಸದೆ ಶಿವಸೇನೆಗೆ (ಉದ್ಧವ್ ಠಾಕ್ರೆ ಬಣ) ನೀಡಲು ಸಾಧ್ಯವಿಲ್ಲ ಎಂದು ಉಲ್ಲೇಖಿಸಲಾಗಿದೆ.
1994ರಲ್ಲಿ ಜಾರ್ಜ್ ಫರ್ನಾಂಡಿಸ್ ಮತ್ತು ನಿತೀಶ್ ಕುಮಾರ್ ಅವರು ಜನತಾದಳದ ಒಂದು ಶಾಖೆಯಾಗಿ ಇದನ್ನು ರಚಿಸಿದರು ಮತ್ತು ಚುನಾವಣಾ ಆಯೋಗವು ಉರಿಯುವ ಜ್ಯೋತಿ ಚಿಹ್ನೆಯನ್ನು ನೀಡಿತು ಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.
ಅರ್ಜಿದಾರರು “ಮುಂಬರುವ ಚುನಾವಣೆಗಳಲ್ಲಿ ಸ್ಪರ್ಧಿಸಲು ಹೊರಟಿದ್ದು, ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಜನರು ತಮ್ಮ ಪಕ್ಷವನ್ನು ಉರಿಯುತ್ತಿರುವ ಜ್ಯೋತಿ ಚಿಹ್ನೆಯಿಂದ ಗುರುತಿಸಿದ್ದಾರೆ. ಈಗ ಅದೇ ಚಿಹ್ನೆಯನ್ನು ಬೇರೆ ಪಕ್ಷಕ್ಕೆ ನೀಡಿದರೆ ಅರ್ಜಿದಾರರ ಪಕ್ಷಕ್ಕೆ ದೊಡ್ಡ ಪೂರ್ವಾಗ್ರಹ ಉಂಟಾಗುತ್ತದೆ” ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಚುನಾವಣಾ ಆಯೋಗವು ಚಿಹ್ನೆ ಹಂಚಿಕೆಯನ್ನು ಸಮರ್ಥಿಸಿಕೊಂಡಿತ್ತು ಮತ್ತು ಹಂಚಿಕೆ ಆದೇಶವನ್ನು ಹೊರಡಿಸುವ ಮೊದಲು ಅರ್ಜಿದಾರರು ಹೇಳಿದಂತೆ ಯಾವುದೇ ಅಧಿಸೂಚನೆಯನ್ನು ಹೊರಡಿಸುವ ಅಗತ್ಯವಿಲ್ಲ ಎಂದು ಕಾನೂನಿನ ಅಡಿಯಲ್ಲಿ ಹೇಳಿತ್ತು. ಶಿವಸೇನೆಯ ಪ್ರತಿಸ್ಪರ್ಧಿ ಬಣಗಳ ನಡುವಿನ ಚಿಹ್ನೆ ವಿವಾದ ನಡುವೆ ಚುನಾವಣಾ ಆಯೋಗವು ಅಕ್ಟೋಬರ್ 10 ರಂದು ಉದ್ಧವ್ ಠಾಕ್ರೆ ಬಣಕ್ಕೆ ಉರಿಯುತ್ತಿರುವ ಜ್ಯೋತಿ ಚಿಹ್ನೆಯನ್ನು ನೀಡುವ ಬಗ್ಗೆ ಪತ್ರವನ್ನು ಹೊರಡಿಸಿತ್ತು.
ಮತ್ತಷ್ಟು ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:36 am, Sun, 20 November 22