ಕಬ್ಬಿಣದ ಸೇತುವೆ ಕದ್ದಾಯ್ತು, ರೈಲ್ವೆ ಎಂಜಿನ್ ಮಾಯವಾಯ್ತು ಈಗ ರಾತ್ರೋ ರಾತ್ರಿ ಕೊಳ ಕೂಡ ನಾಪತ್ತೆ

|

Updated on: Jan 01, 2024 | 8:14 AM

ರಾತ್ರೋ ರಾತ್ರಿ ಕೊಳ(Pond)ವೊಂದು ನಾಪತ್ತೆಯಾಗಿರುವ ವಿಚಿತ್ರ ಘಟನೆ ಬಿಹಾರದ ದರ್ಬಂಗಾ ಜಿಲ್ಲೆಯಲ್ಲಿ ನಡೆದಿದೆ. ಜಲಮೂಲವಿದ್ದ ಜಾಗದಲ್ಲಿ ಏಕಾಏಕಿ ಗುಡಿಸಲು ನಿರ್ಮಿಸಲಾಗಿದೆ. ಈ ಕೊಳವನ್ನು ಭೂಮಾಫಿಯಾ ನುಂಗಿದೆ ಎಂದು ಆರೋಪಿಸಲಾಗಿದೆ. ಜಲಮೂಲಕ್ಕೆ ಮರಳನ್ನು ತುಂಬಿಸಿ ಅದರ ಮೇಲೆ ಗುಡಿಸಲು ನಿರ್ಮಿಸಿದ್ದಾರೆ ಎಂದು ವರದಿಯಾಗಿದೆ.

ಕಬ್ಬಿಣದ ಸೇತುವೆ ಕದ್ದಾಯ್ತು, ರೈಲ್ವೆ ಎಂಜಿನ್ ಮಾಯವಾಯ್ತು ಈಗ ರಾತ್ರೋ ರಾತ್ರಿ ಕೊಳ ಕೂಡ ನಾಪತ್ತೆ
ಗುಡಿಸಲು
Follow us on

ರಾತ್ರೋ ರಾತ್ರಿ ಕೊಳ(Pond)ವೊಂದು ನಾಪತ್ತೆಯಾಗಿರುವ ವಿಚಿತ್ರ ಘಟನೆ ಬಿಹಾರದ ದರ್ಬಂಗಾ ಜಿಲ್ಲೆಯಲ್ಲಿ ನಡೆದಿದೆ. ಜಲಮೂಲವಿದ್ದ ಜಾಗದಲ್ಲಿ ಏಕಾಏಕಿ ಗುಡಿಸಲು ನಿರ್ಮಿಸಲಾಗಿದೆ. ಈ ಕೊಳವನ್ನು ಭೂಮಾಫಿಯಾ ನುಂಗಿದೆ ಎಂದು ಆರೋಪಿಸಲಾಗಿದೆ. ಜಲಮೂಲಕ್ಕೆ ಮರಳನ್ನು ತುಂಬಿಸಿ ಅದರ ಮೇಲೆ ಗುಡಿಸಲು ನಿರ್ಮಿಸಿದ್ದಾರೆ ಎಂದು ವರದಿಯಾಗಿದೆ.

ರಾತ್ರಿ ಇಡೀ ಆ ಪ್ರದೇಶದಲ್ಲಿ ಟ್ರಕ್​ಗಳು ಸೇರಿದಂತೆ ಹಲವು ವಾಹನಗಳ ಸಂಚಾರ ಇದ್ದ ಹಿನ್ನೆಲೆಯಲ್ಲಿ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೊಳವನ್ನು ಮೀನು ಸಾಕಣೆ ಮತ್ತು ಸಸ್ಯಗಳಿಗೆ ನೀರುಣಿಸಲು ಬಳಸಲಾಗುತ್ತಿತ್ತು. ಈಗ ಕೊಳವು ಆ ಸ್ಥಳದಲ್ಲಿ ಅಸ್ತಿತ್ವದಲ್ಲಿದ್ದ ಯಾವುದೇ ಲಕ್ಷಣಗಳು ಇಲ್ಲವೇ ಇಲ್ಲ. ಕಳೆದ 10-15 ದಿನಗಳಲ್ಲಿ ನೀರು ಭರ್ತಿಯಾಗಿತ್ತು ಎಂದು ಜನರು ತಿಳಿಸಿದ್ದಾರೆ. ರಾತ್ರೋ ರಾತ್ರಿ ಈ ಘಟನೆ ನಡೆದಿದೆ, ಈ ಜಮೀನು ಯಾರದ್ದು ಎನ್ನುವ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಸ್ವಲ್ಪ ಸಮಯಗಳ ಹಿಂದೆ ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿ ಇಂಥದ್ದೇ ಘಟನೆ ನಡೆದಿತ್ತು. ಹಗಲಿನಲ್ಲೇ 60 ಅಡಿ ಉದ್ದ 20 ಟನ್ ತೂಕದ ಕಬ್ಬಿಣದ ಸೇತುವೆಯನ್ನು ಯಾರೋ ಕಳ್ಳರು ಕದ್ದು ಪರಾರಿಯಾಗಿದ್ದರು.

ಮತ್ತಷ್ಟು ಓದಿ: ಚಿಕ್ಕಬಳ್ಳಾಪುರ: ಎಸ್​ಬಿಐ ಎಟಿಎಂಗೆ ಬೆಂಕಿ ಹಾಕಿ 20 ಲಕ್ಷ ರೂ. ಕಳ್ಳತನ; ಸ್ಥಳಕ್ಕೆ ಎಸ್ಪಿ ಭೇಟಿ

ಕೆಲವರು ನೀರಾವರಿ ಇಲಾಖೆಯ ಅಧಿಕಾರಿಗಳ ಸೋಗಿನಲ್ಲಿ ಬಂದು ಕಾಲುವೆಗೆ ನಿರ್ಮಿಸಿರುವ ಹಳೆ ಕಬ್ಬಿಣದ ಸೇತುವೆಯನ್ನು ಕಿತ್ತು ಹಾಕಲು ಮುಂದಾಗಿದ್ದರು.

ಗ್ಯಾಸ್​ ಕಟರ್​ನಿಂದ ಸೇತುವೆಯನ್ನು ಕತ್ತರಿಸಿದ್ದರು, ಬಳಿಕ ಪಿಕ್​ಅಪ್​ಗೆ ತುಂಬಿಸಿಕೊಂಡು ಹೋಗಿದ್ದಾರೆ, ಬಳಿಕ ಅವರು ನೀರಾವರಿ ಇಲಾಖೆ ಅಧಿಕಾರಿಗಳಲ್ಲ ಕಳ್ಳರು ಎಂಬುದು ತಿಳಿದುಬಂದಿದೆ.

ಸೇತುವೆ ಕಳ್ಳತನ ಸ್ಥಳೀಯ ಆಡಳಿತದಲ್ಲೂ ತಲ್ಲಣ ಮೂಡಿಸಿದೆ. ರೋಹ್ತಾಸ್ ಜಿಲ್ಲೆಯ ನಸ್ರಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಅಮಿಯಾವರ್ ಎಂಬಲ್ಲಿ ಸೇತುವೆ ಕಳ್ಳತನದ ಘಟನೆ ನಡೆದಿದೆ . ಇಲ್ಲಿನ ಆರಾ ಕಾಲುವೆಯಲ್ಲಿ 1972ರಲ್ಲಿ ಕಬ್ಬಿಣದ ಸೇತುವೆಯನ್ನು ನಿರ್ಮಿಸಲಾಗಿತ್ತು.
2022ರ ನವೆಂಬರ್​ ತಿಂಗಳಿನಲ್ಲಿ ರೈಲ್ವೆಯ ಡೀಸೆಲ್​ ಎಂಜಿನ್​ ಅನ್ನೇ ಕಳ್ಳತನ ಮಾಡಲಾಗಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ