ಚಿಕ್ಕಬಳ್ಳಾಪುರ: ಎಸ್​ಬಿಐ ಎಟಿಎಂಗೆ ಬೆಂಕಿ ಹಾಕಿ 20 ಲಕ್ಷ ರೂ. ಕಳ್ಳತನ; ಸ್ಥಳಕ್ಕೆ ಎಸ್ಪಿ ಭೇಟಿ

ಚಿಕ್ಕಬಳ್ಳಾಪುರದ ಜನನಿಬೀಡ ಪ್ರದೇಶದಲ್ಲಿದ್ದ ಎಸ್​ಬಿಐ ಎಟಿಎಂ ಗೆ ನುಗ್ಗಿ ಸುಮಾರು 20 ಲಕ್ಷ ರೂಪಾಯಿ ಹಣವನ್ನು ಕದ್ದು ನಂತರ ಎಟಿಎಂ ಮಷೀನ್​ಗೆ ಬೆಂಕಿ ಹಾಕಿ ಸುಟ್ಟು ಹಾಕಿರುವ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ: ಎಸ್​ಬಿಐ ಎಟಿಎಂಗೆ ಬೆಂಕಿ ಹಾಕಿ 20 ಲಕ್ಷ ರೂ. ಕಳ್ಳತನ; ಸ್ಥಳಕ್ಕೆ ಎಸ್ಪಿ ಭೇಟಿ
ಚಿಕ್ಕಬಳ್ಳಾಪುರ
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 24, 2023 | 6:11 PM

ಚಿಕ್ಕಬಳ್ಳಾಪುರ, ಡಿ.24: ಎಸ್​ಬಿಐ(SBI) ಬ್ಯಾಂಕ್​​ಗೆ ಸೇರಿದ ಎಟಿಎಂ(ATM)ಗೆ ನುಗ್ಗಿದ ಖದೀಮರು, ಬರೊಬ್ಬರಿ 20 ಲಕ್ಷ ರೂ. ಹಣವನ್ನು ಕದ್ದು, ಬಳಿಕ ಎಟಿಎಂಗೆ ಬೆಂಕಿ ಹಾಕಿದ ಘಟನೆ ಚಿಕ್ಕಬಳ್ಳಾಪುರ(Chikkaballapur) ನಗರದ ಎಂ.ಜಿ ರಸ್ತೆಯ ದರ್ಗಾ ಬಳಿ ನಡೆದಿದೆ. ಸದರಿ ಎ.ಟಿ.ಎಂ ನ್ನು ಹಿಟಾಚಿ ಸಂಸ್ಥೆ ನಿರ್ವಹಣೆ ಮಾಡುತ್ತಿದ್ದು, ಸಿ.ಎಂ.ಎಸ್ ಸಂಸ್ಥೆ ಹಣ ತುಂಬುವ ಕೆಲಸ ಮಾಡುತ್ತಿತ್ತು. ಆದ್ರೆ, ತಡರಾತ್ರಿ ಎ.ಟಿ.ಎಂ ಗೆ ನುಗ್ಗಿರುವ ದುಷ್ಕರ್ಮಿಗಳ ತಂಡ, ಎಟಿಎಂ ಸಿಸಿ ಕ್ಯಾಮೆರಾಗಳಿಗೆ ಸ್ಪ್ರೇ ಬಳಸಿ ನಂತರ ಗ್ಯಾಸ್ ಕಟರ್​ನಿಂದ ಎಟಿಎಂ ಬಾಗಿಲುಗಳನ್ನು ಕಟ್ ಮಾಡಿದ್ದಾರೆ.

ಗ್ಯಾಸ್ ಕಟರ್​ನಿಂದಲೇ ಎಟಿಎಂಗೆ ಬೆಂಕಿ

ನಂತರ ಎಟಿಎಂನಲ್ಲಿದ್ದ ಸುಮಾರು ಇಪ್ಪತ್ತು ಲಕ್ಷ ರೂಪಾಯಿಗಳನ್ನು ಕದ್ದು ಎಟಿಎಂ ಯಂತ್ರಕ್ಕೆ ಗ್ಯಾಸ್ ಕಟರ್​ನಿಂದಲೇ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎಂದು ಎಟಿಎಂ ಕಟ್ಟಡದ ಮಾಲಿಕ ಶ್ರೀನಿವಾಸ್ ತಿಳಿಸಿದ್ದಾರೆ. ಇನ್ನು ಈ ಖತರ್ನಾಕ್​ ಖದೀಮರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇತ್ತಿಚೀಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ, ಗೌರಿಬಿದನೂರು ಹಾಗೂ ಪೊಶೆಟ್ಟಿಯಲ್ಲಿ ಇದೆ ರೀತಿಯ ಕೆಲವು ಘಟನೆಗಳು ನಡೆದಿವೆ. ಆದ್ರೆ, ಆರೋಪಿಗಳು ಪೊಲೀಸರ ಕಣ್ಣಿಗೆ ಬಿದ್ದಿಲ್ಲ. ಸದ್ಯಕ್ಕೆ ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ನೆಲಮಂಗಲ: ಎಟಿಎಂ ಹಣ ದೋಚಲು ವಿಫಲ ಯತ್ನ, ಸಾವಿರಾರು ರೂಪಾಯಿ ಬೆಂಕಿಗೆ ಆಹುತಿ

ಕಳ್ಳತನ ಬಯಲಾಗಿದ್ದೇಗೆ?

ನಿನ್ನೆ(ಡಿ.23) ಮದ್ಯರಾತ್ರಿಯೇ ಘಟನೆ ಆಗಿದ್ದರೂ, ಇಂದು ಮಧ್ಯಾನ್ನದವರೆಗೂ ಯಾರ ಗಮನಕ್ಕೂ ಬಂದಿಲ್ಲ. ಕಟ್ಟಡದ ಮಾಲೀಕ ಶ್ರೀನಿವಾಸ್ ಎಂಬುವವರು ಎಟಿಎಂ ಗೆ ಬಂದು ನೋಡಿದಾಗ ಪ್ರಕರಣ ಬಯಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಚಿಕ್ಕಬಳ್ಳಾಪುರ ಎಸ್ಪಿ ಡಿ.ಎಲ್. ನಾಗೇಶ್​ ಹಾಗೂ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು