ದೆಹಲಿಯನ್ನು ಮತ್ತೆ ಆವರಿಸಿದ ಕಳಪೆ ಗುಣಮಟ್ಟದ ವಾಯು.. AQI ಸೂಚ್ಯಂಕ ಎಷ್ಟಿದೆ?

| Updated By: ಸಾಧು ಶ್ರೀನಾಥ್​

Updated on: Nov 28, 2020 | 2:10 PM

ವಾಯು ಗುಣಮಟ್ಟದ ಸೂಚ್ಯಾಂಕ ದೆಹಲಿಯಲ್ಲಿ ಶುಕ್ರವಾರದಂದು 137ರಷ್ಟು ಕಂಡುಬಂದಿದ್ದು, ಒಂದೇ ದಿನದಲ್ಲಿ 209ಕ್ಕೆ ಏರಿಕೆಯಾಗಿದೆ. ಗುರುವಾರದಂದು ಎಕ್ಯೂಐ 302 ಮತ್ತು ಬುಧವಾರ 413ಕ್ಕೆ ತಲುಪಿತ್ತು

ದೆಹಲಿಯನ್ನು ಮತ್ತೆ ಆವರಿಸಿದ ಕಳಪೆ ಗುಣಮಟ್ಟದ ವಾಯು.. AQI ಸೂಚ್ಯಂಕ ಎಷ್ಟಿದೆ?
ದೆಹಲಿಯ ಗಾಳಿಯ ಗುಣಮಟ್ಟ ಕಳಪೆ ಮಟ್ಟಕ್ಕೆ ಕುಸಿದಿದೆ.
Follow us on

ದೆಹಲಿ: ದೆಹಲಿಯ ಗಾಳಿಯ ಗುಣಮಟ್ಟ ಅನುಕೂಲಕರ ವೇಗದ ಗಾಳಿಯಿಂದಾಗಿ ಗಮನಾರ್ಹವಾಗಿ ಸುಧಾರಿಸಿದ ಬಳಿಕ ಮತ್ತೆ ಕಳಪೆ ಮಟ್ಟಕ್ಕೆ ಕುಸಿದಿದೆ. ನಗರದ ವಾಯು ಗುಣಮಟ್ಟದ ಸೂಚ್ಯಾಂಕ (AQI) ಇಂದು ಬೆಳಿಗ್ಗೆ 209ಕ್ಕೆ ತಲುಪಿದೆ.

ವಾಯು ಗುಣಮಟ್ಟದ ಸೂಚ್ಯಂಕ ದೆಹಲಿಯಲ್ಲಿ ಶುಕ್ರವಾರದಂದು 137ರಷ್ಟು ಕಂಡುಬಂದಿದ್ದು, ಒಂದೇ ದಿನದಲ್ಲಿ 209ಕ್ಕೆ ಏರಿಕೆಯಾಗಿದೆ. ಗುರುವಾರದಂದು ಎಕ್ಯೂಐ 302 ಮತ್ತು ಬುಧವಾರ 413ಕ್ಕೆ ತಲುಪಿತ್ತು.

ಶಕ್ರವಾರ ಗರಿಷ್ಠ ಗಾಳಿಯ ವೇಗ 18 ಕಿ.ಮೀ ಕಂಡುಬಂದಿದ್ದು, ಶನಿವಾರ 15 ಕಿ.ಮೀ ವೇಗದಲ್ಲಿರಬಹುದೆಂದು ಊಹಿಸಿದ ಭಾರತ ಹವಮಾನ ಇಲಾಖೆ, ಶನಿವಾರ ಗರಿಷ್ಠ ತಾಪಮಾನವು 26 ಡಿಗ್ರಿ ಸೆಲ್ಸಿಯಸ್​ಗೆ ಇಳಿಯುವ ಸಾಧ್ಯತೆಯಿದೆ ಎಂದು ತಿಳಿಸಿದೆ.

ವಾಯು ಗುಣಮಟ್ಟದ ಸೂಚ್ಯಾಂಕವನ್ನು (AQI) ಪರಿಗಣಿಸುವುದು ಹೇಗೆ?

0 ಯಿಂದ 50ರ ನಡುವಿನ ಎಕ್ಯೂಐ ಅನ್ನು ಉತ್ತಮವೆಂದು, 51 ರಿಂದ 100ರವರೆಗೆ ತೃಪ್ತಿದಾಯಕ, 101 ರಿಂದ 200ರವರೆಗೆ ಮಧ್ಯಮ, 201 ರಿಂದ 300ರವರೆಗೆ ಕಳಪೆ, 301ರಿಂದ 400ರವೆಗೆ ತುಂಬಾ ಕಳಪೆ ಹಾಗೂ 401ರಿಂದ 500ರನ್ನು ತೀವ್ರ ಕಳಪೆಯೆಂದು ಪರಿಗಣಿಸಲಾಗುತ್ತದೆ.

Published On - 2:09 pm, Sat, 28 November 20