PPE ಕಿಟ್ ಧರಿಸಿ ಲಸಿಕೆ ತಯಾರಿಕಾ ವಿಧಾನ ಪರಿಶೀಲಿಸಿದ ಪ್ರಧಾನಿ ಮೋದಿ; ವಿಜ್ಞಾನಿಗಳೊಂದಿಗೆ ಚರ್ಚೆ
ನಾನಿಂದು ಮೊದಲನೇದಾಗಿ ಅಹ್ಮದಾಬಾದ್ನ ಝೈಡಸ್ ಬಯೋಟೆಕ್ ಪಾರ್ಕ್ಗೆ ಭೆಟಿ ನೀಡಿದೆ. ಝೈಡಸ್ ಕ್ಯಾಡಿಲಾ ಅಭಿವೃದ್ಧಿಪಡಿಸುತ್ತಿರುವ ಡಿಎನ್ಎ ಆಧಾರಿತ ಕರೊನಾ ಲಸಿಕೆ ಬಗ್ಗೆ ವಿವರಗಳನ್ನು ತಿಳಿದುಕೊಂಡೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಅಹ್ಮದಾಬಾದ್: ಕರೊನಾ ಲಸಿಕೆ ತಯಾರಿಕೆ ಪ್ರಗತಿ ಪರಿಶೀಲನೆಯ ಮೊದಲ ಹಂತವಾಗಿ ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ನ ಅಹ್ಮದಾಬಾದ್ನ ಝೈಡಸ್ ಕ್ಯಾಡಿಲಾ ಲ್ಯಾಬ್ಗೆ ಭೇಟಿ ನೀಡಿದರು. ಪಿಪಿಇ ಕಿಟ್ ಧರಿಸಿಕೊಂಡು, ಲಸಿಕೆ ತಯಾರಿಕಾ ಸ್ಥಳಕ್ಕೆ ಹೋಗಿ, ಅಲ್ಲಿನ ವ್ಯವಸ್ಥೆಯನ್ನೆಲ್ಲ ಪರಿಶೀಲನೆ ಮಾಡಿದ ವಿಡಿಯೋ ವೈರಲ್ ಆಗಿದೆ.
ಅಹ್ಮದಾಬಾದ್ನಿಂದ 20 ಕಿಮೀ ದೂರದಲ್ಲಿನ ಚಂಗೋಡರ್ ಕೈಗಾರಿಕಾ ಪ್ರದೇಶದಲ್ಲಿರುವ ಝೈಡಸ್ ಪಾರ್ಕ್ನಲ್ಲಿ ಸುಮಾರು 1 ಗಂಟೆ ಮೋದಿಯವರು ಸಮಯ ಕಳೆದಿದ್ದಾರೆ. ತಜ್ಞರೊಂದಿಗೆ ಸಭೆ ಮಾಡಿ, ಚರ್ಚಿಸಿದ್ದಾರೆ. ನಂತರ ಟ್ವೀಟ್ ಮಾಡಿ, ನಾನಿಂದು ಮೊದಲನೇದಾಗಿ ಅಹ್ಮದಾಬಾದ್ನ ಝೈಡಸ್ ಬಯೋಟೆಕ್ ಪಾರ್ಕ್ಗೆ ಭೆಟಿ ನೀಡಿದೆ.
ಝೈಡಸ್ ಕ್ಯಾಡಿಲಾ ಅಭಿವೃದ್ಧಿಪಡಿಸುತ್ತಿರುವ ಡಿಎನ್ಎ ಆಧಾರಿತ ಕರೊನಾ ಲಸಿಕೆ ಬಗ್ಗೆ ವಿವರಗಳನ್ನು ತಿಳಿದುಕೊಂಡೆ. ಲಸಿಕೆ ತಯಾರಿಕೆ ಹಿಂದೆ ಶ್ರಮಿಸುತ್ತಿರುವ ತಂಡವನ್ನು ಶ್ಲಾಘಿಸುತ್ತೇನೆ. ಭಾರತ ಸರ್ಕಾರ ಅವರಿಗೆ ಅಗತ್ಯ ಸರ್ಕಾರ, ಬೆಂಬಲ ನೀಡಲಿದೆ ಎಂದಿದ್ದಾರೆ.
ಇದನ್ನೂ ಓದಿ: ಕೊರೊನಾ 2ನೆ ಅಲೆ ಅಪ್ಪಳಿಸುವ ಬೆನ್ನಲ್ಲೇ ಪ್ರಧಾನಿ ಮೋದಿಯಿಂದ 3 ಕೊರೊನಾ ಲಸಿಕೆ ತಯಾರಿಕಾ ಘಟಕಗಳಿಗೆ ಭೇಟಿ
ಹೈದರಾಬಾದ್ನ ಭಾರತ್ ಬಯೋಟೆಕ್ ಲ್ಯಾಬ್ಗೆ ಭೇಟಿ ನೀಡಿದ ನಂತರ ಸಂಜೆ 4.30ರ ಹೊತ್ತಿಗೆ ಪುಣೆಯ ಸೆರಮ್ ಇನ್ಸ್ಟಿಟ್ಯೂಟ್ಗೆ ತೆರಳಲಿದ್ದಾರೆ. ಈ ಎರಡೂ ಕಡೆಗಳನ್ನೂ ಲಸಿಕೆ ಅಭಿವೃದ್ಧಿಪಡಿಸುತ್ತಿರುವ ವಿಜ್ಞಾನಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ.
#WATCH Prime Minister Narendra Modi visits Zydus Biotech Park in Ahmedabad, reviews the development of #COVID19 vaccine candidate ZyCOV-D pic.twitter.com/vEhtNMf1YE
— ANI (@ANI) November 28, 2020
Published On - 2:45 pm, Sat, 28 November 20