ಜನಪ್ರಿಯ ಆಂಟಾಸಿಡ್ ರಾಂಟಾಕ್‌ ಅತ್ಯಗತ್ಯ ಔಷಧಿಗಳ ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ? ಕಾರಣ ಇಲ್ಲಿದೆ

| Updated By: ರಶ್ಮಿ ಕಲ್ಲಕಟ್ಟ

Updated on: Sep 13, 2022 | 3:08 PM

ಆಸಿಡ್-ಸಂಬಂಧಿತ ಕೆಮ್ಮು, ಅಜೀರ್ಣ, ಹೊಟ್ಟೆ ನೋವು ಮತ್ತು ಎದೆಯುರಿ ಗುಣಪಡಿಸಲು ರಾನಿಟಿಡಿನ್ ಅನ್ನು ಸಾಮಾನ್ಯವಾಗಿ ಭಾರತದಲ್ಲಿ ವೈದ್ಯರು ಶಿಫಾರಸು ಮಾಡುತ್ತಾರೆ.

ಜನಪ್ರಿಯ ಆಂಟಾಸಿಡ್ ರಾಂಟಾಕ್‌ ಅತ್ಯಗತ್ಯ ಔಷಧಿಗಳ ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ? ಕಾರಣ ಇಲ್ಲಿದೆ
Follow us on

ಕೇಂದ್ರ ಸರ್ಕಾರವು ಮಂಗಳವಾರದಂದು ರಾಷ್ಟ್ರೀಯ ಅತ್ಯಗತ್ಯ  ಔಷಧಿಗಳ ಪಟ್ಟಿಯ (NLEM)  ಪರಿಷ್ಕರಣೆ ಘೋಷಿಸಲು ಸಿದ್ಧವಾಗಿರುವುದರಿಂದ, ಸಾಮಾನ್ಯವಾಗಿ ಮಾರಾಟವಾಗುವ ಆಂಟಾಸಿಡ್ ರಾನಿಟಿಡಿನ್, ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂದು ನ್ಯೂಸ್ 18 ವರದಿ ಮಾಡಿದೆ. ಈ ಪಟ್ಟಿಗೆ ಹೆಚ್ಚು ಬೇಡಿಕೆಯಿರುವ ಮಧುಮೇಹ ವಿರೋಧಿ ಔಷಧ ಟೆನೆಲಿಗ್ಲಿಪ್ಟಿನ್ ಸೇರ್ಪಡೆಯಾಗುವ ಸಾಧ್ಯತೆಯಿದೆ. ಅಧಿಕೃತ ಮೂಲಗಳ ಪ್ರಕಾರ, ಮುಂಬರುವ ಎನ್‌ಎಲ್‌ಇಎಂನಿಂದ 26 ಔಷಧಿಗಳನ್ನು ಅಳಿಸಲಾಗಿದ್ದು 34 ಹೊಸ ಔಷಧಿಗಳನ್ನು ಸೇರಿಸಲಾಗಿದೆ. ಸರ್ಕಾರವು ಹೆಚ್ಚಿನ ಬೇಡಿಕೆಯ ಔಷಧಿಗಳನ್ನು ಬೆಲೆ ನಿಯಂತ್ರಣದ ಅಡಿಯಲ್ಲಿ ಸೇರಿಸಲು ಪರಿಗಣಿಸುತ್ತಿದೆ ಎಂದು ನ್ಯೂಸ್ 18 ಜನವರಿಯಲ್ಲಿ ಮೊದಲ ಬಾರಿಗೆ ವರದಿ ಮಾಡಿತ್ತು.
399 ಸೂತ್ರೀಕರಣಗಳ ಪರಿಷ್ಕೃತ ಪಟ್ಟಿಯನ್ನು ಕಳೆದ ವರ್ಷ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಅಡಿಯಲ್ಲಿ ಪರಿಣಿತ ಸಮಿತಿ ಸಲ್ಲಿಸಿದ್ದು. ಸೆಪ್ಟೆಂಬರ್ 2021 ರಲ್ಲಿ ಸರ್ಕಾರವು ಅಧಿಕೃತವಾಗಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಪ್ರಮುಖ ಬದಲಾವಣೆಗಳನ್ನು ಕೋರಿದ್ದಾರೆ.

ಜನಪ್ರಿಯ ಬ್ರ್ಯಾಂಡ್ ಹೆಸರುಗಳಾದ ಅಸಿಲೋಕ್, ಝಿನೆಟಾಕ್ ಮತ್ತು ರಾಂಟಾಕ್‌ ಹೆಸರಲ್ಲಿ ರಾನಿಟಿಡಿನ್ ಮಾರಲಾಗುತ್ತದೆ. ರಾನಿಟಿಡಿನ್‌ನಲ್ಲಿನ ಉಪ್ಪು ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ಹಲವಾರು ವರದಿಗಳು ಬಂದಿದ್ದು ಇದ ಆತಂಕಕ್ಕೆ ಕಾರಣವಾಗಿವೆ. ಆಸಿಡ್-ಸಂಬಂಧಿತ ಕೆಮ್ಮು, ಅಜೀರ್ಣ, ಹೊಟ್ಟೆ ನೋವು ಮತ್ತು ಎದೆಯುರಿ ಗುಣಪಡಿಸಲು ರಾನಿಟಿಡಿನ್ ಅನ್ನು ಸಾಮಾನ್ಯವಾಗಿ ಭಾರತದಲ್ಲಿ ವೈದ್ಯರು ಶಿಫಾರಸು ಮಾಡುತ್ತಾರೆ.
ಭಾರತೀಯ ಮಾರುಕಟ್ಟೆಯಲ್ಲಿ ಉತ್ಪನ್ನಗಳ ಸುರಕ್ಷತೆಯ ಬಗ್ಗೆ ಕಳವಳಗಳು ಹೆಚ್ಚುತ್ತಿರುವ ಕಾರಣ, ಆರೋಗ್ಯ ಸಚಿವಾಲಯವು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಮತ್ತು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್) ಜೊತೆಗಿನ ಚರ್ಚೆಯಲ್ಲಿ ರಾಷ್ಟ್ರದ ಅಗತ್ಯ ಔಷಧಿಗಳದಾಸ್ತಾನುಗಳಿಂದ ಈ ಉಪ್ಪನ್ನು ಹೊರತೆಗೆಯಲು ಒಪ್ಪಿಕೊಂಡಿದೆ.

ಪಟ್ಟಿಯಲ್ಲಿ ಗ್ಲಿಪ್ಟಿನ್‌ ಸೇರ್ಪಡೆ ಸಾಧ್ಯತೆ

ಟೈಪ್ 2 ಡಯಾಬಿಟಿಸ್‌ಗೆ ಚಿಕಿತ್ಸೆ ನೀಡಲು ಬಳಸಲಾಗುವ ಇತ್ತೀಚಿನ ಔಷಧಿಗಳೆಂದರೆ ಗ್ಲಿಪ್ಟಿನ್‌ಗಳನ್ನು ಸೇರಿಸುವ ಸಾಧ್ಯತೆ ಇದೆ. ಭಾರತದಲ್ಲಿ ಗ್ಲಿಪ್ಟಿನ್ ಮಾರುಕಟ್ಟೆಯು 4,000 ಕೋಟಿ ರೂಪಾಯಿಗಿಂತ ಹೆಚ್ಚು ಮೌಲ್ಯದ್ದಾಗಿದ್ದರೆ, ಟೆನೆಲಿಗ್ಲಿಪ್ಟಿನ್ ಮಾರುಕಟ್ಟೆ ಮೌಲ್ಯವು 1,000 ಕೋಟಿ ರೂಪಾಯಿಗಳಾಗಿದ್ದು, ಮುಂಬೈ ಮೂಲದ ಗ್ಲೆನ್‌ಮಾರ್ಕ್ ಅಗ್ರ ತಯಾರಕರಾಗಿದ್ದಾರೆ. ಎನ್​​ಇಎಲ್​​ಎಂನಲ್ಲಿ ಒಳಗೊಂಡಿರುವ ಔಷಧಿಗಳಿಗೆ, ತಯಾರಕರು ತಮ್ಮ ಉತ್ಪನ್ನವನ್ನು ಸರ್ಕಾರವು ನಿಗದಿಪಡಿಸಿದ ಸೂತ್ರವನ್ನು ಬಳಸಿಕೊಂಡು ನಿಗದಿಪಡಿಸಿದ ಸೀಲಿಂಗ್ ಬೆಲೆಗಿಂತ ಕಡಿಮೆ ಅಥವಾ ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾಗುತ್ತದೆ. ಸೀಲಿಂಗ್ ಬೆಲೆ ಲೆಕ್ಕಾಚಾರವು ಕನಿಷ್ಠ ಶೇ1 ಮಾರುಕಟ್ಟೆ ಪಾಲನ್ನು ಹೊಂದಿರುವ ವಿವಿಧ ಬ್ರಾಂಡ್‌ಗಳ ಔಷಧಿಗಳ ಮಾರುಕಟ್ಟೆ ಬೆಲೆಗಳ ಸರಳ ಸರಾಸರಿಯನ್ನು ಆಧರಿಸಿದೆ.

ಪಟ್ಟಿಯಲ್ಲಿ ಸೇರಿಸಲಾದ ಔಷಧಿಗಳು ತಯಾರಕರಿಗೆ ಲಾಭವನ್ನು ಕಡಿಮೆ ಮಾಡುತ್ತದೆ. ಆದರೆ ರಾಷ್ಟ್ರೀಯ ಆರೋಗ್ಯ ಮತ್ತು ತುರ್ತು ಪರಿಸ್ಥಿತಿಗಳಿಗೆ ಮುಖ್ಯವೆಂದು ಪರಿಗಣಿಸಲಾಗಿದೆ, ಆದ್ದರಿಂದ ಉತ್ಪಾದನೆಯನ್ನು ಕಡಿಮೆ ಮಾಡಲು ಅಥವಾ ನಿಲ್ಲಿಸಲು ಸಾಧ್ಯವಿಲ್ಲ.

ಪಟ್ಟಿಯಿಂದ ರಾನಿಟಿಡಿನ್ ನ್ನು ಹೊರಗಿಟ್ಟಿರುವುದೇಕೆ?

ರಾನಿಟಿಡಿನ್ ಔಷಧಿಗಳಲ್ಲಿ ಎನ್-ನೈಟ್ರೊಸೋಡಿಮೆಥೈಲಮೈನ್ (NDMA) ಎಂದು ಕರೆಯಲ್ಪಡುವ ಮಾಲಿನ್ಯಕಾರಕದ ನಡೆಯುತ್ತಿರುವ ಜಾಗತಿಕ ತನಿಖೆಯಲ್ಲಿ, ಎನ್​​ಡಿಎಂಎ ಒಂದು ಸಂಭವನೀಯ ಮಾನವ ಕಾರ್ಸಿನೋಜೆನ್ (ಕ್ಯಾನ್ಸರ್​​ಗೆ ಕಾರಣವಾಗುವ ವಸ್ತು) ಎಂದು ಹಲವಾರು ಕಳವಳಗಳನ್ನು ವ್ಯಕ್ತಪಡಿಸಲಾಗಿದೆ. ಆದಾಗ್ಯೂ, ಈ ಬಗ್ಗೆ ನಿರ್ದಿಷ್ಟ ಸಾಕ್ಷ್ಯಗಳು ಸಿಕ್ಕಿಲ್ಲ.

2020 ರಲ್ಲಿ, ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (USFDA) ಎಲ್ಲಾ ಪ್ರಿಸ್ಕ್ರಿಪ್ಷನ್ ಮತ್ತು ಓವರ್-ದಿ-ಕೌಂಟರ್ (OTC) ರಾನಿಟಿಡಿನ್ ಔಷಧಿಗಳನ್ನು ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತು.

Published On - 2:37 pm, Tue, 13 September 22