NLEM 2022 ರಾಷ್ಟ್ರೀಯ ಅತ್ಯಗತ್ಯ  ಔಷಧಿಗಳ ಪಟ್ಟಿ ಪ್ರಕಟ: 26 ಔಷಧಿಗಳನ್ನು ಕೈಬಿಟ್ಟು 34 ಹೊಸ ಔಷಧಿಗಳ ಸೇರ್ಪಡೆ

National List of Essential Medicines 2022 ಪ್ರಸ್ತುತ ಪಟ್ಟಿಯಿಂದ 24 ಔಷಧಿಗಳನ್ನು ತೆಗೆದುಹಾಕಲಾಗಿದ್ದು, ಇತ್ತೀಚಿನ ಪಟ್ಟಿಯಲ್ಲಿ 34 ಹೊಸ ಔಷಧಿಗಳನ್ನು ಸೇರಿಸಲಾಗಿದೆ.

NLEM 2022 ರಾಷ್ಟ್ರೀಯ ಅತ್ಯಗತ್ಯ  ಔಷಧಿಗಳ ಪಟ್ಟಿ ಪ್ರಕಟ: 26 ಔಷಧಿಗಳನ್ನು ಕೈಬಿಟ್ಟು 34 ಹೊಸ ಔಷಧಿಗಳ ಸೇರ್ಪಡೆ
ಡಾ. ಮನ್ಸುಖ್ ಮಾಂಡವಿಯಾ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Sep 13, 2022 | 3:46 PM

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನ್ಸುಖ್ ಮಾಂಡವಿಯಾ  (Dr Mansukh Mandaviya) ಅವರು ಮಂಗಳವಾರ ರಾಷ್ಟ್ರೀಯ ಅತ್ಯಗತ್ಯ  ಔಷಧಿಗಳ ಪಟ್ಟಿ (NLEM) 2022  ಬಿಡುಗಡೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ 384 ಔಷಧಿಗಳಿವೆ. 2015 ರಲ್ಲಿ ನೀಡಲಾದ ಕೊನೆಯ ಪಟ್ಟಿಗಿಂತ 8 ಹೆಚ್ಚು ಔಷಧಿಗಳು ಇದರಲ್ಲಿವೆ. ಪ್ರಸ್ತುತ ಪಟ್ಟಿಯಿಂದ 26 ಔಷಧಿಗಳನ್ನು ತೆಗೆದುಹಾಕಲಾಗಿದ್ದು, ಇತ್ತೀಚಿನ ಪಟ್ಟಿಯಲ್ಲಿ 34 ಹೊಸ ಔಷಧಿಗಳನ್ನು ಸೇರಿಸಲಾಗಿದೆ.ಪಟ್ಟಿಯನ್ನು ಬಿಡುಗಡೆ ಮಾಡಿದ ನಂತರ ಮಾತನಾಡಿದ ಮಾಂಡವಿಯಾ, ಹಲವಾರು ಔಷಧಿಗಳು ಈಗ ಹೆಚ್ಚು ಕೈಗೆಟುಕುವ ಬೆಲೆಗೆ ಸಿಗುತ್ತವೆ ಎಂದಿದ್ದಾರೆ. “ಹಲವಾರು ಆಂಟಿ ಬಯೋಟಿಕ್ಸ್, ಲಸಿಕೆಗಳು, ಕ್ಯಾನ್ಸರ್ ವಿರೋಧಿ ಔಷಧಗಳು ಮತ್ತು ಇತರ ಹಲವು ಪ್ರಮುಖ ಔಷಧಿಗಳು ಹೆಚ್ಚು ಕೈಗೆಟುಕುವವುಗಳಾಗಿದ್ದು ಇವು ರೋಗಿಗಳ ಜೇಬಿಗೆ ಹೊರೆಯಾಗುವುದನ್ನು ತಡೆಯುತ್ತದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. 350 ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಪಟ್ಟಿ ಸಿದ್ಧಪಡಿಸಲಾಗಿದೆ. ಇದು ಅಂತಿಮಗೊಳ್ಳುವ ಮೊದಲು ಒಟ್ಟು 140 ಸಭೆಗಳು ನಡೆದವು.

ಈ ಪಟ್ಟಿಯಲ್ಲಿ ಕಾರ್ಡಿಯೊವಾಸ್ಕುಲಾರ್ ಔಷಧಿಗಳು, ಅರಿವಳಿಕೆ ಮತ್ತುನ ನ್ಯುರೋಲಾಜಿಕಲ್ ಅಸ್ವಸ್ಥತೆಗಳಲ್ಲಿ ಬಳಸುವ ಔಷಧಿಗಳು, ಸೋಂಕುನಿವಾರಕ ಔಷಧಿಗಳು, ಕಿವಿ, ಮೂಗು, ಗಂಟಲು ಮತ್ತು ಗ್ಯಾಸ್ಟ್ರೊಇಂಟಸ್ಟೈನಲ್ ಔಷಧಿಗಳು, ಹಾರ್ಮೋನುಗಳು, ಇತರ ಎಂಡೊಕ್ರೈನ್ ಔಷಧಿಗಳು ಮತ್ತು ಗರ್ಭನಿರೋಧಕಗಳು ಸೇರಿವೆ ಔಷಧಿಗಳಲ್ಲಿ ನಿಕೋಟಿನ್ ರಿಪ್ಲೇಸ್‌ಮೆಂಟ್ ಥೆರಪಿ (ಎನ್‌ಆರ್‌ಟಿ), ಓರಲ್ ರಿಹೈಡ್ರೇಷನ್ ಸಾಲ್ಟ್, ಪ್ಯಾರೆಸಿಟಮಾಲ್, ರಿಬಾವಿರಿನ್, ಸ್ಟ್ರೆಪ್ಟೊಮೈಸಿನ್, ಲೊರಾಜೆಪಮ್ ಮತ್ತು ಐವರ್‌ಮೆಕ್ಟಿನ್ ಸೇರಿವೆ.

ಇದನ್ನು ಹೊರತುಪಡಿಸಿ NLEM 2022 ರಲ್ಲಿ ಥೆರಾಪ್ಯುಟಿಕ್ ಪ್ರಕಾರ ಔಷಧಗಳನ್ನು ಸೇರಿಸಲಾಗಿದೆ”. NLEM 2022 ಗೆ ಸೇರಿಸಲಾದ 34 ಔಷಧಿಗಳಲ್ಲಿ ಐವರ್ಮೆಕ್ಟಿನ್, ಮೆರೊಪೆನೆಮ್, ಸೆಫುರಾಕ್ಸಿಮ್, ಫೆನಾಕ್ಸಿಮಿಥೈಲ್, ಪೆನಿಸಿಲಿನ್, ಡೆಲಾಮಾನಿಡ್ ಮತ್ತು ಲೆನಾಲಿಡೋಮೈಡ್ ಕೂಡಾ ಸೇರಿವೆ. ಅಲ್ಲದೆ, ಬ್ಲೀಚಿಂಗ್ ಪೌಡರ್, ಪ್ರೊಕಾರ್ಬಝಿನ್, ರಿಫಾಬುಟಿನ್, ರಾನಿಟಿಡಿನ್ ಮತ್ತು ಸುಕ್ರಾಲ್ಫೇಟ್ ಸೇರಿದಂತೆ 26 ಔಷಧಗಳನ್ನು ತೆಗೆದುಹಾಕಲಾಗಿದೆ. ಸರ್ಕಾರವು “ಅತ್ಯಗತ್ಯ ಔಷಧಿಗಳು” ಹೆಚ್ಚಿನ ಜನಸಂಖ್ಯೆಯ ಆದ್ಯತೆಯ ಆರೋಗ್ಯ ಅಗತ್ಯಗಳನ್ನು ಪೂರೈಸುತ್ತದೆ.

Published On - 3:02 pm, Tue, 13 September 22

ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು