ಕೊವಿಡ್ 19 ಸಾಂಕ್ರಾಮಿಕದ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಡೋಣ: ಅಜೀಂ ಪ್ರೇಮ್​ಜಿ

|

Updated on: May 12, 2021 | 7:13 PM

Azim Premji: ಮೊದಲನೆಯದಾಗಿ, ನಾವು ಎಲ್ಲಾ ರಂಗಗಳಲ್ಲಿಯೂ ಹೆಚ್ಚಿನ ವೇಗದಲ್ಲಿ ಕಾರ್ಯನಿರ್ವಹಿಸಬೇಕು ಮತ್ತು ಈ ಕ್ರಿಯೆಗಳು ಉತ್ತಮ ವಿಜ್ಞಾನವನ್ನು ಆಧರಿಸಿರಬೇಕು. ವಾಸ್ತವದಲ್ಲಿ ವಿಜ್ಞಾನವನ್ನು ಆಧರಿಸದ ಕ್ರಿಯೆಗಳು ದೀರ್ಘಾವಧಿಯಲ್ಲಿ ಹಾನಿಕಾರಕ ಪರಿಣಾಮವನ್ನು ಬೀರುತ್ತವೆ.

ಕೊವಿಡ್ 19 ಸಾಂಕ್ರಾಮಿಕದ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಡೋಣ: ಅಜೀಂ ಪ್ರೇಮ್​ಜಿ
ಅಜೀಂ ಪ್ರೇಮ್ ಜಿ
Follow us on

ದೆಹಲಿ: ಕೊರೊನಾವೈರಸ್ ಸಾಂಕ್ರಾಮಿಕ ರೋಗದ ಎರಡನೇ ಅಲೆಯನ್ನು ಸೋಲಿಸಲು ದೇಶದ ಜನರೆಲ್ಲರೂ ‘ಒಂದು ಎಂಬ ಭಾವನೆಯಿಂದ ಒಗ್ಗೂಡಬೇಕು ಎಂದು ವಿಪ್ರೋ ಸಂಸ್ಥಾಪಕ ಅಧ್ಯಕ್ಷ ಅಜೀಮ್ ಪ್ರೇಮ್​ಜಿ ಬುಧವಾರ ಹೇಳಿದ್ದಾರೆ. ಕೊರೊನಾವೈರಸ್ ಎರಡನೇ ಅಲೆಯ ಹೊತ್ತಿನಲ್ಲಿ ಈಗಿರುವ ಸವಾಲುಗಳು ಮತ್ತು ನಕಾರಾತ್ಮಕತೆಯನ್ನು ಪರಿಹರಿಸಲು ಆರ್​ಎಸ್ಎಸ್ ಆಯೋಜಿಸಿದ್ದ ಪಾಸಿಟಿವಿಟಿ ಇನಿಶಿಯೇಟಿವ್​ನಲ್ಲಿ ಪ್ರೇಮ್​ಜಿ ಮಾತನಾಡಿದ್ದಾರೆ.

ನಾನು ಶುಭೋದಯ ಅಥವಾ ಶುಭ ಸಂಜೆಯೊಂದಿಗೆ ಪ್ರಾರಂಭಿಸುವುದಿಲ್ಲ ಆದರೆ ಈ ಬಿಕ್ಕಟ್ಟಿನಲ್ಲಿ ತಮ್ಮ ಸ್ನೇಹಿತರು ಮತ್ತು ಕುಟುಂಬವನ್ನು ಕಳೆದುಕೊಂಡಿರುವ ನಮ್ಮ ಹಲವಾರು ಜನರ ದುಃಖವನ್ನು ಹಂಚಿಕೊಳ್ಳುತ್ತೇನೆ ಎಂದು ಪ್ರೇಮ್​ಜಿ ಭಾಷಣ ಆರಂಭಿಸಿದ್ದಾರೆ. ಈಗಿರುವ ದುರಂತವನ್ನು ಎದುರಿಸಲು ನಾವೆಲ್ಲರೂ ಧೈರ್ಯ ಮತ್ತು ಶಕ್ತಿಯನ್ನು ಹೊಂದಬೇಕೆಂದು ನಾನು ಬಯಸುತ್ತೇನೆ ಈ ಬಿಕ್ಕಟ್ಟಿನ ಹೊತ್ತಲ್ಲಿ ಗಮನಹರಿಸಬೇಕಾದ ಮೂರು ವಿಷಯಗಳನ್ನು ಪ್ರೇಮ್​ಜಿ ಪಟ್ಟಿ ಮಾಡಿದ್ದಾರೆ.

ಮೊದಲನೆಯದಾಗಿ, ನಾವು ಎಲ್ಲಾ ರಂಗಗಳಲ್ಲಿಯೂ ಹೆಚ್ಚಿನ ವೇಗದಲ್ಲಿ ಕಾರ್ಯನಿರ್ವಹಿಸಬೇಕು ಮತ್ತು ಈ ಕ್ರಿಯೆಗಳು ಉತ್ತಮ ವಿಜ್ಞಾನವನ್ನು ಆಧರಿಸಿರಬೇಕು. ವಾಸ್ತವದಲ್ಲಿ ವಿಜ್ಞಾನವನ್ನು ಆಧರಿಸದ ಕ್ರಿಯೆಗಳು ದೀರ್ಘಾವಧಿಯಲ್ಲಿ ಹಾನಿಕಾರಕ ಪರಿಣಾಮವನ್ನು ಬೀರುತ್ತವೆ.


ಎರಡನೆಯದಾಗಿ, ನಮ್ಮ ಎಲ್ಲ ಭಿನ್ನಾಭಿಪ್ರಾಯಗಳನ್ನು ನಾವು ಕೈಬಿಡಬೇಕು. ಈ ಪರಿಸ್ಥಿತಿ ನಿಭಾಯಿಸಲು ಒಗ್ಗಟ್ಟಿನ ಅಗತ್ಯವಿದೆ ಎಂದು ಅರ್ಥಮಾಡಿಕೊಳ್ಳಬೇಕು ಎಂದು ವಿಪ್ರೊ ಸಂಸ್ಥಾಪಕರು ಒಟ್ಟಿಗೆ ನಾವು ಬಲಶಾಲಿಗಳು, ಭಿನ್ನರಾದರೆ ನಾವು ಕಷ್ಟಪಡುತ್ತೇವೆ ಎಂದಿದ್ದಾರೆ.

ಮೂರನೆಯದಾಗಿ, ನಾವು ಅತ್ಯಂತ ದುರ್ಬಲರ ದುಃಸ್ಥಿತಿಯ ಮೇಲೆ ಸಂಪೂರ್ಣವಾಗಿ ಗಮನಹರಿಸಬೇಕಾಗಿದೆ ಎಂದು ಅವರು ಹೇಳಿದರು. ಸಾಂಕ್ರಾಮಿಕ ರೋಗದ ಆರ್ಥಿಕ ಪರಿಣಾಮವು ಜನರ ಜೀವನವನ್ನು ಹಾಳುಮಾಡಿದೆ, ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿರುವವರು. ನಾವು ದುರ್ಬಲರಿಗೆ ಎಲ್ಲ ಆದ್ಯತೆಯನ್ನು ನೀಡಬೇಕು, ಅವರು ಅರ್ಹರು ಎಂದಿದ್ದಾರೆ ಪ್ರೇಮ್​ಜಿ.


ನಾವು ನಮ್ಮ ಸಮಾಜ ಮತ್ತು ಆರ್ಥಿಕತೆಯನ್ನು ಪುನರ್ರಚಿಸಬೇಕಾಗಿದೆ, ಇದರಿಂದಾಗಿ ನಮ್ಮ ದೇಶವು ಈ ರೀತಿಯ ಅಸಮಾನತೆ ಮತ್ತು ಅನ್ಯಾಯವನ್ನು ಹೊಂದಿಲ್ಲ.  ಕೊನೆಯಲ್ಲಿ, ನಮ್ಮೆಲ್ಲರನ್ನೂ ಒಗ್ಗೂಡಿಸಲು ಮತ್ತು ನಾವು ಮಾಡಬಹುದಾದ ಎಲ್ಲವನ್ನೂ ಮತ್ತು ಹೆಚ್ಚಿನದನ್ನು ಮಾಡಲು ನಾನು ಒತ್ತಾಯಿಸುತ್ತೇನೆ. ಏಕೆಂದರೆ ಇದು ಈ ಹೊತ್ತಿನ ತುರ್ತು. ನಿಮ್ಮೆಲ್ಲರ ಸುರಕ್ಷತೆ ಮತ್ತು ಶಕ್ತಿಯನ್ನು ನಾನು ಬಯಸುತ್ತೇನೆ ಎಂದು ಅವರು ಭಾಷಣ ಮುಗಿಸಿದ್ದಾರೆ.

ಇದನ್ನೂ ಓದಿ:  ಆರ್​ಎಸ್ಎಸ್​ನ್ನು ಸಂಘ ಪರಿವಾರ್ ಎಂದು ಹೇಳಬಾರದು, ಅವರಿಗೆ ಕುಟುಂಬದ ಮೌಲ್ಯಗಳು ಗೊತ್ತಿಲ್ಲ: ರಾಹುಲ್ ಗಾಂಧಿ

Published On - 7:00 pm, Wed, 12 May 21