Rama Krishnapuram Beach : ಆಂಧ್ರ ಪ್ರದೇಶದ ಬೀಚ್​ವೊಂದರಲ್ಲಿ ಗರ್ಭಿಣಿಯ ಶವ ಪತ್ತೆ

|

Updated on: Apr 27, 2023 | 8:34 AM

ಆಂಧ್ರಪ್ರದೇಶದ ರಾಮಕೃಷ್ಣಪುರಂ ಬೀಚ್​ನಲ್ಲಿ ಗರ್ಭಿಣಿಯೊಬ್ಬರ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯ ಅರೆಬೆತ್ತಲೆ ದೇಹವು ಸಮುದ್ರ ತೀರದಲ್ಲಿ ಮರಳಿನಲ್ಲಿ ಹೂತುಹೋಗಿತ್ತು ಎನ್ನಲಾಗಿದೆ.

Rama Krishnapuram Beach : ಆಂಧ್ರ ಪ್ರದೇಶದ ಬೀಚ್​ವೊಂದರಲ್ಲಿ ಗರ್ಭಿಣಿಯ ಶವ ಪತ್ತೆ
ಗರ್ಭಿಣಿ ಸಾವು( ಸಾಂದರ್ಭಿಕ ಚಿತ್ರ)
Follow us on

ಆಂಧ್ರಪ್ರದೇಶದ ರಾಮಕೃಷ್ಣಪುರಂ ಬೀಚ್​ನಲ್ಲಿ ಗರ್ಭಿಣಿಯೊಬ್ಬರ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ಅರೆಬೆತ್ತಲೆ ದೇಹವು ಸಮುದ್ರ ತೀರದಲ್ಲಿ ಮರಳಿನಲ್ಲಿ ಹೂತುಹೋಗಿತ್ತು ಎನ್ನಲಾಗಿದೆ.
ಸಮುದ್ರ ತೀರದಲ್ಲಿದ್ದ ಸ್ಥಳೀಯರು ಮೃತದೇಹದ ಪತ್ತೆಯಾಗಿರುವ ಮಾಹಿತಿ ನೀಡಿದ ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ನಂತರ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಂಗ್ ಜಾರ್ಜ್ ಆಸ್ಪತ್ರೆಗೆ ಕಳುಹಿಸಲಾಗಿದೆ.

ಪೆಡಗಂಟ್ಯಾಡ ಪ್ರದೇಶದ ಮಹಿಳೆ ಮಂಗಳವಾರ ಸಂಜೆಯಿಂದ ತನ್ನ ಅತ್ತೆಯ ಮನೆಯಿಂದ ನಾಪತ್ತೆಯಾಗಿದ್ದಾಳೆ ಎಂದು ನ್ಯೂಪೋರ್ಟ್ ಪೊಲೀಸ್ ಇನ್ಸ್‌ಪೆಕ್ಟರ್ ಸುವ್ವಾರಿ ರಾಮು ತಿಳಿಸಿದ್ದಾರೆ ಎಂದು ಹಿಂದೂಸ್ತಾನ್​ ಟೈಮ್ಸ್ ವರದಿ ಮಾಡಿದೆ. ಆತ್ಮಹತ್ಯೆ ಪತ್ರವನ್ನು ರೂಮ್​ನಲ್ಲಿ ಇಟ್ಟು ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಮಹಿಳೆ ಕಾಣೆಯಾಗಿರುವ ಬಗ್ಗೆ ಸಂಜೆಯೇ ದೂರು ನೀಡಿದ್ದು, ಹುಡುಕಲು ಶುರು ಮಾಡಿದ್ದರು, ಬುಧವಾರ ಬೆಳಿಗ್ಗೆ, ಆರ್‌ಕೆ ಬೀಚ್‌ನ ತೀರದಲ್ಲಿ ಮಹಿಳೆಯ ಶವ ಪತ್ತೆಯಾಗಿದೆ ಎಂದು ಸ್ಥಳೀಯರಿಂದ ನಮಗೆ ಕರೆ ಬಂದಿತ್ತು ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಓದಿ: ಹಿಂದೂ ಮಹಿಳೆಯ ಶವ ಹೊತ್ತು ಸಾಗುವ ಮೂಲಕ ಸೌಹಾರ್ದತೆ ಮೆರೆದ ಮುಸ್ಲಿಮರು

ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಬಳಿಕ ಕೊಲೆ ಮಾಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಲಾಗಿತ್ತು, ಆದರೆ ಆಕೆ ಐದು ತಿಂಗಳ ಗರ್ಭಿಣಿ ಎಂಬುದು ತಿಳಿದುಬಂದಿದೆ. ಆಕೆ ಮನೆಯಿಂದ ಹೊರ ಹೋಗುವ ಮೊದಲು ಪತಿಯೊಂದಿಗೆ ಜಗಳವಾಡಿದ್ದಳು ಎನ್ನುವ ವಿಚಾರ ಲಭ್ಯವಾಗಿದೆ.

ಆಕೆಯ ಪತಿ ಸಾಫ್ಟ್​ವೇರ್ ಎಂಜಿನಿಯರ್ ಕಳೆದ 15 ದಿನಗಳ ಹಿಂದೆ ಕಚೇರಿಗೆ ಹಿಂದಿರುಗಿದ್ದ, ಅಲ್ಲಿಯವರೆಗೂ ಮನೆಯಿಂದಲೇ ಕೆಲಸ ಮಾಡುತ್ತಿದ್ದ ಎಂಬುದು ತಿಳಿದುಬಂದಿದೆ. ಅತ್ತೆ ಹಾಗೂ ಸೊಸೆ ನಡುವಿನ ಸಂಬಂಧ ಸರಿ ಇಲ್ಲ ಎಂಬುದು ತಿಳಿದುಬಂದಿದೆ.

ಆಕೆಯ ಮನಸ್ಸು ತುಂಬಾ ಸೂಕ್ಷ್ಮವಾಗಿದ್ದ ಕಾರಣ ಈ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಅಂದಾಜಿಸಲಾಗಿದೆ, ಲೈಂಗಿಕ ದೌರ್ಜನ್ಯ ಅಥವಾ ಕೊಲೆಯ ಕುರುಹುಗಳಾವುದೂ ಗೋಚರಿಸಿಲ್ಲ. ಆಕೆಯ ಕೋಣೆಯಿಂದ ಸೂಸೈಡ್ ನೋಟ್ ಪತ್ತೆಯಾಗಿದ್ದು, ಅದನ್ನು ಪರಿಶೀಲಿಸಲಾಗುತ್ತಿದೆ ಅಲ್ಲಿಯವರೆಗೆ ಅನುಮಾನಾಸ್ಪದ ಸಾವು ಎಂದೇ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Published On - 8:34 am, Thu, 27 April 23