ಅಶೋಕ ಲವಾಸ ರಾಜಿನಾಮೆ ಅಂಗೀಕರಿಸಿದ ರಾಷ್ಟ್ರಪತಿ ಕೋವಿಂದ್

|

Updated on: Aug 19, 2020 | 3:02 PM

ಚುನಾವಣಾಧಿಕಾರಿ ಹುದ್ದೆಗೆ ಅಶೋಕ ಲವಾಸ ನೀಡಿದ ರಾಜೀನಾಮೆಯನ್ನು ರಾಷ್ಟ್ರಪತಿ ರಾಮ ನಾಥ್ ಕೊವಿಂದ್ ಅವರು ಅಂಗೀಕರಿಸಿದ್ದಾರೆ. ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲು ಈ ಕುರಿತು ಒಂದು ಅಧಿಸೂಚನೆಯನ್ನು ಹೊರಡಿಸಿದೆ. ಲವಾಸ ಅವರು ಮಂಗಳವಾರದಂದು ರಾಷ್ಟ್ರಪತಿ ಭವನಕ್ಕೆ ತಮ್ಮ ರಾಜಿನಾಮೆ ಪತ್ರವನ್ನು ಕಳಿಸಿದ್ದರು. ಲವಾಸ, ಇಷ್ಟರಲ್ಲೇ ಮುಖ್ಯ ಚುನಾವಣಾಧಿಕಾರಿ ಹುದ್ದೆಗೆ ಪದೋನ್ನತಿ ಹೊಂದುವವರಿದ್ದರು. ಆದರೆ, ಕೆಲವು ವಾರಗಳ ಹಿಂದೆ ಅವರಿಗೆ ಫಿಲಿಪೈನ್ಸ್​ನಲ್ಲಿ ನೆಲೆ ಹೊಂದಿರುವ ಏಷ್ಯನ್ ಅಭಿವೃದ್ಧಿ ಬ್ಯಾಂಕಿನ (ಎಡಿಬಿ) ಉಪಾಧ್ಯಕ್ಷ ಸ್ಥಾನವನ್ನು ಆಫರ್ ಮಾಡಿದಾಗ ಅವರು […]

ಅಶೋಕ ಲವಾಸ ರಾಜಿನಾಮೆ ಅಂಗೀಕರಿಸಿದ ರಾಷ್ಟ್ರಪತಿ ಕೋವಿಂದ್
Follow us on

ಚುನಾವಣಾಧಿಕಾರಿ ಹುದ್ದೆಗೆ ಅಶೋಕ ಲವಾಸ ನೀಡಿದ ರಾಜೀನಾಮೆಯನ್ನು ರಾಷ್ಟ್ರಪತಿ ರಾಮ ನಾಥ್ ಕೊವಿಂದ್ ಅವರು ಅಂಗೀಕರಿಸಿದ್ದಾರೆ. ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲು ಈ ಕುರಿತು ಒಂದು ಅಧಿಸೂಚನೆಯನ್ನು ಹೊರಡಿಸಿದೆ. ಲವಾಸ ಅವರು ಮಂಗಳವಾರದಂದು ರಾಷ್ಟ್ರಪತಿ ಭವನಕ್ಕೆ ತಮ್ಮ ರಾಜಿನಾಮೆ ಪತ್ರವನ್ನು ಕಳಿಸಿದ್ದರು.

ಲವಾಸ, ಇಷ್ಟರಲ್ಲೇ ಮುಖ್ಯ ಚುನಾವಣಾಧಿಕಾರಿ ಹುದ್ದೆಗೆ ಪದೋನ್ನತಿ ಹೊಂದುವವರಿದ್ದರು. ಆದರೆ, ಕೆಲವು ವಾರಗಳ ಹಿಂದೆ ಅವರಿಗೆ ಫಿಲಿಪೈನ್ಸ್​ನಲ್ಲಿ ನೆಲೆ ಹೊಂದಿರುವ ಏಷ್ಯನ್ ಅಭಿವೃದ್ಧಿ ಬ್ಯಾಂಕಿನ

(ಎಡಿಬಿ) ಉಪಾಧ್ಯಕ್ಷ ಸ್ಥಾನವನ್ನು ಆಫರ್ ಮಾಡಿದಾಗ ಅವರು ಒಪ್ಪಿಕೊಂಡು ಭಾರತೀಯ ನಾಗರಿಕ ಸೇವೆಗಳ ಅತ್ಯುನ್ನತ ಹುದ್ದೆಗಳಲ್ಲಿ ಒಂದಾಗಿರುವ ಮುಖ್ಯ ಚುನಾವಣಾಧಿಕಾರಿ ಹುದ್ದೆಗೆ ಬಡ್ತಿ ಹೊಂದುವ ಅವಕಾಶವನ್ನು ಕಡೆಗಾಣಿಸಿದರು. ಹೊಸ ಹುದ್ದೆಗೆ ಅವರು ಮುಂದಿನ ತಿಂಗಳು ಸೇರುವ ಸಾಧ್ಯತೆಯಿದೆ.

ಲವಾಸ ಚುನಾವಣಾ ಆಯೋಗದಲ್ಲೇ ಮುಂದುವರಿದಿದ್ದರೆ ಮುಖ್ಯ ಚುನಾವಣಾಧಿಕಾರಿಯಾಗಿ ಬಡ್ತಿ ಹೊಂದಿ ಅಕ್ಟೋಬರ್ 2022 ರಲ್ಲಿ ನಿವೃತ್ತರಾಗುತ್ತಿದ್ದರು. ಚುನಾವಣಾಧಿಕಾರಿಯಾಗಿ ನಿವೃತ್ತಿಗೆ ಮುನ್ನವೇ ಹುದ್ದೆಗೆ ರಾಜಿನಾಮೆ ಸಲ್ಲಿಸಿ ಆಯೋಗದಿಂದ ಹೊರನಡೆದ ಎರಡನೇ ಅಧಿಕಾರಿ ಲವಾಸ ಆಗಿರುತ್ತಾರೆ. ಇದಕ್ಕೂ ಮೊದಲು 1973ರಲ್ಲಿ ಮುಖ್ಯ ಚುನಾವಣಾಧಿಕಾರಿಯಾಗಿದ್ದ ನಾಗೇಂದ್ರ ಸಿಂಗ್ ಅವರು ಹೇಗ್​ನಲ್ಲಿರುವ ಅಂತರರಾಷ್ಟ್ರೀಯ ನ್ಯಾಯಾಲಯದ ಜಡ್ಜ್ಆಗಿ ನೇಮಕಗೊಂಡಿದ್ದರಿಂದ ಸಿಇಸಿ ಹುದ್ದೆಗೆ ರಾಜಿನಾಮೆ ಸಲ್ಲಿಸಿದ್ದರು.

ಕೊರೊನಾ ವೈರಸ್​ನ ಪಿಡುಗಿನ ಮಧ್ಯೆ ಬಿಹಾರನಲ್ಲಿ ವಿಧಾನಸಭಾ ಚುನಾವಣೆಗೆ ತಯಾರಿ ನಡೆಯುತ್ತಿರುವ ಸಂದರ್ಭದಲ್ಲಿ ಲವಾಸ ರಾಜಿನಾಮೆ ಸಲ್ಲಿಸಿದ್ದಾರೆ.