ಜೈಪುರದಲ್ಲಿ ಪೆಟ್ಟಿಗೆಯಿಂದ ಹೊರಬಂದ 2,400 ವರ್ಷ ಹರೆಯದ Tutu Mummy

ಜೈಪುರ: ದೇಶಾದ್ಯಂತ ಮಳೆರಾಯನ ಆರ್ಭಟ ತಾರಕಕ್ಕೇರಿದ್ದು ಹಲವರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಮಳೆ ತಂದೊಡ್ಡಿರುವ ನೆರೆಯಿಂದ ನೂರಾರು ಮಂದಿ ತಮ್ಮ ತಮ್ಮ ಮನೆ, ಗುಡಿಸಲುಗಳನ್ನ ತೊರೆಯುವಂಥ ಸ್ಥಿತಿ ಎದುರಾಗಿದೆ. ಈ ಪರಿಸ್ಥಿತಿ ಕೇವಲ ಬದುಕಿರುವವರಿಗೆ ಮಾತ್ರವಲ್ಲದೇ 2,400 ವರ್ಷಗಳ ಹಿಂದೆ ಅಸುನೀಗಿದ್ದ ಈಜಿಪ್ಟ್​ ದೇಶದಿಂದ ರಾಜಸ್ಥಾನಕ್ಕೆ ತಂದಿದ್ದ ಪುರಾತನ ಮಮ್ಮಿಗೂ ಸಹ ಎದುರಾಗಿದೆ. ಹೌದು, ಈಜಿಪ್ಟ್​ನ ಪರ್ಸಿಪೋಲಿಸ್​ ಪ್ರಾಂತ್ಯದಲ್ಲಿ ಪತ್ತೆಯಾಗಿದ್ದ ಈ 2,400 ವರ್ಷಗಳ ಪುರಾತನ ಮಮ್ಮಿಯನ್ನ 130 ವರ್ಷಗಳ ಹಿಂದೆ ರಾಜಸ್ಥಾನದ ಜೈಪುರದಲ್ಲಿರುವ ಆಲ್ಬರ್ಟ್ ಹಾಲ್​ […]

ಜೈಪುರದಲ್ಲಿ ಪೆಟ್ಟಿಗೆಯಿಂದ ಹೊರಬಂದ 2,400 ವರ್ಷ ಹರೆಯದ Tutu Mummy
Follow us
KUSHAL V
| Updated By: ಸಾಧು ಶ್ರೀನಾಥ್​

Updated on:Aug 19, 2020 | 1:45 PM

ಜೈಪುರ: ದೇಶಾದ್ಯಂತ ಮಳೆರಾಯನ ಆರ್ಭಟ ತಾರಕಕ್ಕೇರಿದ್ದು ಹಲವರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಮಳೆ ತಂದೊಡ್ಡಿರುವ ನೆರೆಯಿಂದ ನೂರಾರು ಮಂದಿ ತಮ್ಮ ತಮ್ಮ ಮನೆ, ಗುಡಿಸಲುಗಳನ್ನ ತೊರೆಯುವಂಥ ಸ್ಥಿತಿ ಎದುರಾಗಿದೆ. ಈ ಪರಿಸ್ಥಿತಿ ಕೇವಲ ಬದುಕಿರುವವರಿಗೆ ಮಾತ್ರವಲ್ಲದೇ 2,400 ವರ್ಷಗಳ ಹಿಂದೆ ಅಸುನೀಗಿದ್ದ ಈಜಿಪ್ಟ್​ ದೇಶದಿಂದ ರಾಜಸ್ಥಾನಕ್ಕೆ ತಂದಿದ್ದ ಪುರಾತನ ಮಮ್ಮಿಗೂ ಸಹ ಎದುರಾಗಿದೆ.

ಹೌದು, ಈಜಿಪ್ಟ್​ನ ಪರ್ಸಿಪೋಲಿಸ್​ ಪ್ರಾಂತ್ಯದಲ್ಲಿ ಪತ್ತೆಯಾಗಿದ್ದ ಈ 2,400 ವರ್ಷಗಳ ಪುರಾತನ ಮಮ್ಮಿಯನ್ನ 130 ವರ್ಷಗಳ ಹಿಂದೆ ರಾಜಸ್ಥಾನದ ಜೈಪುರದಲ್ಲಿರುವ ಆಲ್ಬರ್ಟ್ ಹಾಲ್​ ಸಂಗ್ರಹಾಲಯಕ್ಕೆ ತರಲಾಗಿತ್ತು. ಟುಟು ಎಂಬ ಮಹಿಳೆಯ ಕಳೇಬರ ಇದಾಗಿದ್ದು ಮ್ಯೂಸಿಯಂ ಮುಖ್ಯ ಆಕರ್ಷಣೆಯಾಗಿ ಸಹ ಮಾರ್ಪಾಡಾಗಿತ್ತು.

ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಮಮ್ಮಿ ಬಚಾವ್​! ಆದರೆ, ಕಳೆದ ಕೆಲವು ದಿನಗಳಿಂದ ಸುರಿದ ಧಾರಾಕಾರ ಮಳೆಯ ಪರಿಣಾಮವಾಗಿ ಸಂಗ್ರಹಾಲಯಕ್ಕೆ ನೀರು ನುಗ್ಗಿಬಿಟ್ಟಿತು. ಇದರಿಂದ ಪ್ರದರ್ಶನಕ್ಕೆ ಇಡಲಾಗಿದ್ದ ಸಾಕಷ್ಟು ಪುರಾತನ ವಸ್ತುಗಳಿಗೆ ಹಾನಿ ಉಂಟಾಯಿತು. ಆದರೆ, ಅದೃಷ್ಟವಶಾತ್, ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಮಮ್ಮಿಯನ್ನ ಪ್ರದರ್ಶನಕ್ಕೆ ಇರಿಸಲಾಗಿದ್ದ ಗಾಜಿನ ಪೆಟ್ಟಿಗೆ ಒಡೆದು ಹೊರತರಲಾಯಿತು. ಸಂಗ್ರಹಾಲದ ಅಧೀಕ್ಷಕ ಡಾ. ರಾಕೇಶ್​ ಪ್ರಕಾರ ಸಿಬ್ಬಂದಿಯ ಕೆಲವೇ ನಿಮಿಷಗಳು ತಡಮಾಡಿದ್ದರೆ 2,400 ವರ್ಷಗಳ ಐತಿಹ್ಯ ಹೊಂದಿರುವ ಈ ಮಹತ್ವಪೂರ್ಣ ಅವಶೇಷವನ್ನು ಶಾಶ್ವತವಾಗಿ ಕಳೆದುಕೊಳ್ಳಬೇಕಾಗುತ್ತಿತ್ತು.

ಸದ್ಯ, ಟುಟು ಮಮ್ಮಿಯನ್ನ ಸುರಕ್ಷಿತ ಸ್ಥಳದಲ್ಲಿ ಇರಿಸಲಾಗಿದ್ದು ಇತರೆ ಪ್ರಾಚೀನ ವಸ್ತುಗಳಿಗೆ ಉಂಟಾಗಿರುವ ಹಾನಿಯನ್ನ ಸರಿಪಡಿಸಲು ಸಂಗ್ರಹಾಲಯವನ್ನು ಏಳು ದಿನಗಳ ಕಾಲ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

Published On - 1:42 pm, Wed, 19 August 20

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್