ದೇಶದಾದ್ಯಂತ SDPI, PFI ಸಂಘಟನೆ ಬ್ಯಾನ್​ಗೆ ಒತ್ತಡ

|

Updated on: Aug 13, 2020 | 7:00 AM

ದೆಹಲಿ: ಬೆಂಗಳೂರಿಗೇ ಬೆಂಗಳೂರು ಭಯ ಬಿದ್ದಿತ್ತು.. ಬೆಂಕಿಯ ಜ್ವಾಲೆ ಧಗಧಗಿಸಿತ್ತು. ಕಾರು ಬೈಕ್‌, ಪೊಲೀಸ್ ವಾಹನಗಳು ಸುಟ್ಟು ಭಸ್ಮವಾಗಿದ್ವು. ಪೊಲೀಸರ ಮೇಲೆ, ಪೊಲೀಸ್ ಠಾಣೆ ಮೇಲೆ ಕಲ್ಲುಗಳು ಬೀಳುತಿದ್ವು. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಇಡೀ ದೇಶವೇ ರಾಜ್ಯದರಾಜಧಾನಿಯತ್ತ ನೋಡುತ್ತಿತ್ತು. ಈ ಗಲಾಟೆಗೆ ಕಾರಣ ಯಾರು.. ಹೇಗೆ ಗಲಭೆ ಶುರುವಾಯ್ತು ಅಂತ ನೋಡಾತ್ತಾ ಹೋದಾಗ ಅದು ಬಂದು ನಿಂತಿದ್ದು ಎಸ್ ಡಿ ಪಿಐ, ಪಿಎಫ್ ಐ ಬಳಿ.. ಹೀಗಾಗಿ ಈಗ ದೇಶದಾದ್ಯಂತ ಈ ಸಂಘಟನೆಗಳ ಬಗ್ಗೆ ತೀವ್ರ ಆಕ್ರೋಶ […]

ದೇಶದಾದ್ಯಂತ  SDPI, PFI ಸಂಘಟನೆ ಬ್ಯಾನ್​ಗೆ ಒತ್ತಡ
Follow us on

ದೆಹಲಿ: ಬೆಂಗಳೂರಿಗೇ ಬೆಂಗಳೂರು ಭಯ ಬಿದ್ದಿತ್ತು.. ಬೆಂಕಿಯ ಜ್ವಾಲೆ ಧಗಧಗಿಸಿತ್ತು. ಕಾರು ಬೈಕ್‌, ಪೊಲೀಸ್ ವಾಹನಗಳು ಸುಟ್ಟು ಭಸ್ಮವಾಗಿದ್ವು. ಪೊಲೀಸರ ಮೇಲೆ, ಪೊಲೀಸ್ ಠಾಣೆ ಮೇಲೆ ಕಲ್ಲುಗಳು ಬೀಳುತಿದ್ವು. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಇಡೀ ದೇಶವೇ ರಾಜ್ಯದರಾಜಧಾನಿಯತ್ತ ನೋಡುತ್ತಿತ್ತು. ಈ ಗಲಾಟೆಗೆ ಕಾರಣ ಯಾರು.. ಹೇಗೆ ಗಲಭೆ ಶುರುವಾಯ್ತು ಅಂತ ನೋಡಾತ್ತಾ ಹೋದಾಗ ಅದು ಬಂದು ನಿಂತಿದ್ದು ಎಸ್ ಡಿ ಪಿಐ, ಪಿಎಫ್ ಐ ಬಳಿ.. ಹೀಗಾಗಿ ಈಗ ದೇಶದಾದ್ಯಂತ ಈ ಸಂಘಟನೆಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ದೇಶದಾದ್ಯಂತ SDPI, PFI ಸಂಘಟನೆ ಬ್ಯಾನ್​ಗೆ ಒತ್ತಡ
ಯೆಸ್‌, ವಿವಿಧ ರಾಜ್ಯಗಳಲ್ಲಿ ನಡೆಯುವ ಗಲಭೆಗಳಲ್ಲಿ SDPI, PFI ಸಂಘಟನೆಗಳ ಪಾತ್ರವಿದೆ ಅಂತಾ ಬಿಜೆಪಿ ನಾಯಕರು ಪದೇ ಪದೇ ಹೇಳುತ್ತಾ ಬಂದಿದ್ದಾರೆ. ಮೊನ್ನೆ ಬೆಂಗಳೂರಿನಲ್ಲಿ ನಡೆದ ಗಲಭೆಯಲ್ಲಿ ಎಸ್‌ಡಿಪಿಐ ಸಂಘಟನೆ ಕಾರ್ಯಕರ್ತರ ಪಿತೂರಿ,ಕೈವಾಡವಿದೆ ಅಂತಾ ಮತ್ತೊಮ್ಮೆ ಬಿಜೆಪಿ ನಾಯಕರು ಸಂಘಟನೆ ವಿರುದ್ಧ ತಿರುಗಿಬಿದ್ದಿದ್ದಾರೆ. ರಾಜ್ಯದಲ್ಲಿ ಯಾವಾಗೆಲ್ಲ ಈ ರೀತಿಯಾದ ಕೋಮು ಗಲಭೆಗಳು ನಡೆಯುತ್ತವೆ ಆಗೆಲ್ಲ ಎರಡು ಸಂಘಟನೆಗಳನ್ನು ನಿಷೇಧಿಸಬೇಕು ಎಂಬ ಒತ್ತಡ ಸಹಜವಾಗಿಯೇ ಹೆಚ್ಚಾಗುತ್ತೆ. ಬೆಂಗೂರಿನ ಗಲಭೆ ಬಳಿಕ ಎರಡೂ ಸಂಘಟನೆಗಳನ್ನು ನಿಷೇಧ ಮಾಡಬೇಕು ಎಂಬ ಕೂಗು ಹೆಚ್ಚಾಗಿದೆ.

SDPI, PFI ಬ್ಯಾನ್​ಗೆ ಒತ್ತಡ
ಬೆಂಗಳೂರಿನ ಗಲಭೆಯಿಂದ SDPI, PFI ಸಂಘಟನೆ ಬ್ಯಾನ್ ಮಾಡುವಂತೆ ದೇಶದಾದ್ಯಂತ ಒತ್ತಡ ಕೇಳಿಬಂದಿದೆ. ಬ್ಯಾನ್ ಮಾಡಲು ಕೇಂದ್ರ ಗೃಹ ಇಲಾಖೆಗೆ ಯುಪಿ, ಕೇರಳ, ಅಸ್ಸಾಂ, ರಾಜಸ್ಥಾನ ಸರ್ಕಾರಗಳ ಮನವಿ ಮಾಡಿವೆ. ಕರ್ನಾಟಕದಿಂದ ಕಳೆದ ಒಂದು ವರ್ಷದಲ್ಲಿ 2 ಬಾರಿ ಮನವಿ ಮಾಡಲಾಗಿದೆ. ಅಲ್ಲದೇ ರಾಜ್ಯ ಸರ್ಕಾರ ಈ2 ಸಂಘಟನೆಗಳ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಹೆಚ್ಚಿನ ಮಾಹಿತಿ, ಸಾಕ್ಷ್ಯ ಸಂಗ್ರಹಿಸುತ್ತಿದೆ.

ಈ ಸಂಘಟನೆಗಳು ಬಿಜೆಪಿ, ಆರ್​ಎಸ್​​ಎಸ್ ನಾಯಕರ ಹತ್ಯೆಗೆ ಸಂಚು ರೂಪಿಸಿವೆ ಎನ್ನಲಾಗಿದೆ. ‘ಕೈ’ ಶಾಸಕ ತನ್ವೀರ್ ಸೇಠ್ ಮೇಲೆ‌ ಮಾರಣಾಂತಿಕ ಹಲ್ಲೆ ಸೇರಿದಂತೆ ಗಂಭೀರ ಪ್ರಕರಣಗಳಿರುವ ಹಿನ್ನೆಲೆ ರಾಜ್ಯದ ಸಂಸದರಿಂದ ಪಿಎಫ್​ಐ ಬ್ಯಾನ್ ಮಾಡಲು ಕೇಂದ್ರಕ್ಕೆ ಮನವಿ ಮಾಡಿದ್ದಾರೆ. ಆದ್ರೆ ರಾಜ್ಯದ ಮನವಿಗೆ ಕೇಂದ್ರ ಕ್ಯಾರೇ ಅಂದಿಲ್ಲ. ಇನ್ನು PFI ಬ್ಯಾನ್ ಮಾಡಲು ಯುಪಿ ಸರ್ಕಾರ 2 ಬಾರಿ ಮನವಿ ಮಾಡಿದೆ. ಹಾಗೇ ಜಾರ್ಖಂಡ್​ನಲ್ಲಿ ಈಗಾಗಲೇ ಎರಡೂ ಸಂಘಟನೆ ಬ್ಯಾನ್ ಮಾಡಲಾಗಿದೆ.

SDPI, PFI ಸಂಘಟನೆಗಳಿಂದ ಬಿಜೆಪಿಗೆ ಹೆಚ್ಚು ಲಾಭ?
ಯೆಸ್‌, ಎರಡು ಸಂಘಟನೆಗಳಿಂದ ಬಿಜೆಪಿ ಸಂಘಟನೆಗೆ ಲಾಭವಿದೆ ಅಂತಾ ರಾಜಕೀಯ ಪಡಸಾಲೆಯಲ್ಲಿ ಚರ್ಚೆ ನಡೆಯುತ್ತಿದೆ. SDPI ಅತೀರೇಖಾದ ವರ್ತನೆಯಿಂದ ಬಿಜೆಪಿ ಚುನಾವಣೆಗಳಲ್ಲಿ ಸಹಾಯಕವಾಗುತ್ತಿದೆ. ಅಲ್ಲದೆ ಮುಸ್ಲಿಂ ಮತಗಳ ವಿಭಜನೆಯಿಂದ ಬಿಜೆಪಿಗೆ ಲಾಭ ಎನ್ನುವ ಲೆಕ್ಕಾಚಾರದಲ್ಲಿ ಬಿಜೆಪಿ ನಾಯಕರು ಇದ್ದಾರೆ. ಮೇಲ್ನೋಟಕ್ಕೆ ಎರಡು ಸಂಘಟನೆಗಳನ್ನು ನಿಷೇಧ ಮಾಡಬೇಕು ಅಂತಾ ಹಾರಾಟ ನಡೆಸಿ ಒಳಗೊಳಗೆ ಬಿಜೆಪಿ ನಾಯಕರು ಸಪೋರ್ಟ್ ಮಾಡ್ತಾರೆ ಅನ್ನೋ ಅಪವಾದವಿದೆ. ಕಾಂಗ್ರೆಸ್ ನಾಯಕ ಯು.ಟಿ ಖಾದರ್ ಕೂಡ ಪಿಎಫ್ ಐ ಸಂಘಟನೆಗೆ ಬಿಜೆಪಿಯೇ ಗಾಡ್ ಫಾದರ್ ಅಂತಾ ಆರೋಪ ಮಾಡಿದ್ದಾರೆ.

ಎರಡು ಸಂಘಟನೆಗಳು ನಿಷೇಧವಾದ್ರೆ ಕಾಂಗ್ರೆಸ್‌ ಗೆ ಲಾಭ?
ಹೌದು, ಕಾಂಗ್ರೆಸ್ ವೋಟ್‌ ಬ್ಯಾಂಕ್ ಆಗಿರುವ ಮುಸ್ಲಿಂ ಹಾಗೂ ದಲಿತ ಮತಗಳ ಮೇಲೆ ಎಸ್ ಡಿಪಿಐ ಕಣ್ಣಿಟ್ಟಿದೆ. ಮುಸ್ಲಿಂ ಸಮುದಾಯ ಹೆಚ್ಚಿರುವ ಕ್ಷೇತ್ರಗಳಲ್ಲಿ ಸಂಘಟನೆ ಮಾಡಿ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕಿಳಿಸುತ್ತಾರೆ. ಇದರಿಂದ‌ ಕಾಂಗ್ರೆಸ್ ನ ಸಾಂಪ್ರದಾಯಿಕ ಮತಗಳು ವಿಭಜನೆ ಆಗಿ, ಬಿಜೆಪಿ ಅನಾಯಾಸವಾಗಿ ಆ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ಉದಾಹರಣೆ ಇದೆ‌. ಹೀಗಾಗಿ ಎಸ್ ಡಿ ಪಿಐ, ಪಿಎಫ್ ಐ ನಿಷೇಧ ಮಾಡುವ ಪರ ಕಾಂಗ್ರೆಸ್ ಇದೆ. ನಿಷೇಧಕ್ಕೆ ಬಹಿರಂಗವಾಗಿ ಒತ್ತಡ ಹೇರದೆ ಇದ್ರೂ ನಿಷೇಧವಾದ್ರೆ ಕೈಗೆ ಲಾಭವಿದೆ..

ಒಟ್ನಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪದಡಿ ಎರಡೂ ಸಂಘಟನೆಗಳನ್ನು ನಿಷೇಧಿಸಲು ಒತ್ತಾಯ ಹೆಚ್ಚಾಗ್ತಿದೆ. ಆದ್ರೆ ಕೇಂದ್ರ ಈ ಸಂಘಟನೆಯನ್ನ ಬ್ಯಾನ್ ಮಾಡುತ್ತಾ..? ಇಲ್ವಾ ಅನ್ನೋದೆ ಯಕ್ಷ ಪ್ರಶ್ನೆಯಾಗಿದೆ.