ಉತ್ತರಾಖಂಡ ಸರ್ಕಾರದ ವಿರುದ್ಧ ಆಕ್ರೋಶ; ಕೇದಾರನಾಥ ದೇಗುಲದ ಹೊರಗೆ ತಲೆಕೆಳಗಾಗಿ ನಿಂತು ಪ್ರತಿಭಟನೆ ನಡೆಸುತ್ತಿರುವ ಪುರೋಹಿತ

| Updated By: Lakshmi Hegde

Updated on: Jun 16, 2021 | 2:50 PM

Char Dham: ನಾನು ಹೀಗೆ ಶೀರ್ಷಾಸನದಲ್ಲಿ ನಿಂತು ಏಳುದಿನಗಳ ಕಾಲ ಪ್ರತಿಭಟನೆ ನಡೆಸುತ್ತೇನೆ. ಅಷ್ಟಾದರೂ ಸರ್ಕಾರ ಈ ಬೋರ್ಡ್​​ನ್ನು ವಿಸರ್ಜಿಸದೆ ಇದ್ದರೆ ತೀವ್ರಸ್ವರೂಪದ ಪ್ರತಿಭಟನೆ ಹಮ್ಮಿಕೊಳ್ಳುತ್ತೇನೆ ಎಂದು ಆಚಾರ್ಯ ಸಂತೋಷ ತ್ರಿವೇದಿ ಹೇಳಿದ್ದಾರೆ.

ಉತ್ತರಾಖಂಡ ಸರ್ಕಾರದ ವಿರುದ್ಧ ಆಕ್ರೋಶ; ಕೇದಾರನಾಥ ದೇಗುಲದ ಹೊರಗೆ ತಲೆಕೆಳಗಾಗಿ ನಿಂತು ಪ್ರತಿಭಟನೆ ನಡೆಸುತ್ತಿರುವ ಪುರೋಹಿತ
ದೇಗುಲದ ಎದುರು ಶೀರ್ಷಾಸನದಲ್ಲಿ ನಿಂತು ಪ್ರತಿಭಟನೆ ನಡೆಸುತ್ತಿರುವ ಅರ್ಚಕ
Follow us on

ಡೆಹ್ರಾಡೂನ್​: ಕೇದಾರನಾಥ ದೇವಸ್ಥಾನದ ಎದುರು ಅರ್ಚಕ ಆಚಾರ್ಯ ಸಂತೋಷ ತ್ರಿವೇದಿ ತಲೆಕೆಳಗಾಗಿ ನಿಂತು (ಶೀರ್ಷಾಸನ) ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಇತ್ತೀಚೆಗೆ ಉತ್ತರಾಖಂಡ ಸರ್ಕಾರ ಚಾರ್ ಧಾಮ್​ ದೇವಸ್ಥಾನಮ್​ ನಿರ್ವಹಣಾ ಮಂಡಳಿಯನ್ನು ರಚಿಸಿದೆ. ಈ ಬೋರ್ಡ್​​ನ್ನು ಕೂಡಲೇ ರದ್ದುಗೊಳಿಸಬೇಕು. ಇಲ್ಲದಿದ್ದರೆ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುತ್ತೇನೆ ಎಂದೂ ಎಚ್ಚರಿಕೆ ನೀಡಿದ್ದಾರೆ.

ನಾನು ಹೀಗೆ ಶೀರ್ಷಾಸನದಲ್ಲಿ ನಿಂತು ಏಳುದಿನಗಳ ಕಾಲ ಪ್ರತಿಭಟನೆ ನಡೆಸುತ್ತೇನೆ. ಅಷ್ಟಾದರೂ ಸರ್ಕಾರ ಈ ಬೋರ್ಡ್​​ನ್ನು ವಿಸರ್ಜಿಸದೆ ಇದ್ದರೆ ತೀವ್ರಸ್ವರೂಪದ ಪ್ರತಿಭಟನೆ ಹಮ್ಮಿಕೊಳ್ಳುತ್ತೇನೆ ಎಂದು ಆಚಾರ್ಯ ಸಂತೋಷ ತ್ರಿವೇದಿ ಹೇಳಿದ್ದಾಗಿ ಎಎನ್​ಐ ವರದಿ ಮಾಡಿದೆ.

ಚಾರ್​ಧಾಮ್​ ನಿರ್ವಹಣಾ ಮಂಡಳಿ ರಚನೆ ಆದಾಗಿನಿಂದಲೂ ಕೇವಲ ಇವರೊಬ್ಬರಲೇ ಅಲ್ಲದೆ, ಉಳಿದ ಕೆಲವು ಪುರೋಹಿತರೂ ಸೇರಿ ಕೇದಾರನಾಥ ದೇಗುಲದ ಹೊರಗೆ ಮೌನವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಡಳಿ ರಚನೆ ಮಾಡುವ ಮೂಲಕ ನಮ್ಮ ಹಕ್ಕುಗಳನ್ನು ನಿರ್ಲಕ್ಷಿಸಲಾಗಿದೆ. ಹಾಗಾಗಿ ರಾಜ್ಯ ಸರ್ಕಾರ ಬೋರ್ಡ್​​ನ್ನು ವಿಸರ್ಜಿಸುವವರೆಗೂ ನಮ್ಮ ಹೋರಾಟ ಕೈಬಿಡುವುದಿಲ್ಲ ಎಂದು ಹೇಳುತ್ತಿದ್ದಾರೆ.

ಭರವಸೆ ಈಡೇರಿಸದ ಸಿಎಂ !
ಇನ್ನು ಪುರೋಹಿತವರ್ಗದ ಪ್ರತಿಭಟನೆ ಉತ್ತರಾಖಂಡ ಮುಖ್ಯಮಂತ್ರಿ ತೀರಥ್​ ಸಿಂಗ್​ ರಾವತ್​ ಗಮನಕ್ಕೂ ಬಂದಿದೆ. ಮಂಡಳಿ ರಚನೆ ಬಗ್ಗೆ ಮರುಪರಿಶೀಲನೆ ಮಾಡುವುದಾಗಿ ಹೇಳಿದ್ದ ತೀರಥ್​ ಸಿಂಗ್​ ರಾವತ್​ ಅದನ್ನು ಈಡೇರಿಸಲಿಲ್ಲ. ಅದರ ಬದಲು ನಿರ್ವಹಣಾ ಮಂಡಳಿಯನ್ನು ಇನ್ನಷ್ಟು ವಿಸ್ತರಿಸಲಾಗಿದೆ. ಇದು ನಮಗೆ ಇನ್ನಷ್ಟು ಅಸಮಾಧಾನ ಉಂಟು ಮಾಡಿದೆ ಎಂದು ಅರ್ಚಕರು ಹೇಳಿಕೊಂಡಿದ್ದಾರೆ.

ನಮ್ಮ ಸಮುದಾಯ ಈಗ ಸಾಂಕೇತಿಕವಾಗಿ ಪ್ರತಿಭಟನೆ ನಡೆಸುತ್ತಿದೆ. ಈ ಬಗ್ಗೆ ಸರ್ಕಾರ ಶೀಘ್ರವೇ ನಿರ್ಧಾರ ಕೈಗೊಳ್ಳದೆ ಇದ್ದರೆ ಇನ್ನಷ್ಟು ತೀವ್ರ ಚಳವಳಿ ನಡೆಸುತ್ತೇವೆ ಎಂದು ಕೇದಾರನಾಥ ತೀರ್ಥ ಪುರೋಹಿತ ಸಮಾಜದ ಸದಸ್ಯರಾದ ಅಂಕಿತ್​ ಸೆಮ್​ವಾಲ್​ ತಿಳಿಸಿದ್ದಾರೆ. ಹಾಗೇ ಯಮುನೋತ್ರಿ, ಗಂಗೋತ್ರಿ, ಬದರೀನಾಥ್​, ಕೇದಾರನಾಥ್​​ಗಳು ಸೇರಿ ಚಾರ್​ಧಾಮ್ ಎನ್ನಿಸಿಕೊಂಡಿದ್ದು, ಇಲ್ಲಿನ​ ಯಾತ್ರೆಗೆ ಜೂ.15ರಿಂದ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ಭಾರತದ ಕಂಪೆನಿಗಳ ಆದಾಯದಲ್ಲಿ ಶೇ 78ರಷ್ಟು ದೇಶೀ ಮಾರುಕಟ್ಟೆಯಿಂದಲೇ; ಯಾವ ದೇಶದಲ್ಲಿ ಇದು ಹೆಚ್ಚು, ಎಲ್ಲಿ ಕಮ್ಮಿ?

Priest protests in Shirshasana outside the Kedarnath Shrine against state government of Uttarkhand

Published On - 2:48 pm, Wed, 16 June 21