ದೇಶದ ಜನ ಸ್ವಾವಲಂಬಿಗಳಾಗಬೇಕಾದ ಅನಿವಾರ್ಯತೆ ಇದೆ -ಪ್ರಧಾನಿ ಮೋದಿ

| Updated By:

Updated on: Jul 26, 2020 | 4:16 PM

[lazy-load-videos-and-sticky-control id=”7C9cvnvAbfg”] ದೆಹಲಿ: ಈ ಬಾರಿಯ ಮನ್​ ಕೀ ಬಾತ್ ಕಾರ್ಯಕ್ರಮವನ್ನ ಪ್ರಧಾನಿ ಮೋದಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ನಮನ ಸಲ್ಲಿಸುವ ಮೂಲಕ ಪ್ರಾರಂಭಿಸಿದರು. ಇಂದು ಕಾರ್ಗಿಲ್ ವಿಜಯ್ ದಿವಸ್ ಆಚರಣೆಯ ಹಿನ್ನೆಲೆಯಲ್ಲಿ ಇಡೀ ದೇಶ ಅಂದಿನ ಗೆಲುವನ್ನು ಸಂಭ್ರಮಿಸುತ್ತಿದೆ. ಕಾರ್ಗಿಲ್ ಯುದ್ಧದಲ್ಲಿ ಭಾರತ ಗೆದ್ದು ತನ್ನ ಶಕ್ತಿ ಮತ್ತು ಸಾಮಥ್ರ್ಯ ತೋರಿಸಿತ್ತು. ನಮ್ಮ ವೀರ ಯೋಧರು ಪಾಕಿಸ್ತಾನವನ್ನ ಧ್ವಂಸ ಮಾಡಿದ್ದು ಈ ಘಟನೆಗೆ ಇಡೀ ವಿಶ್ವವೇ ಸಾಕ್ಷಿಯಾಗಿತು ಎಂದು ಪ್ರಧಾನಿ ಯೋಧರನ್ನು ಕೊಂಡಾಡಿದರು. ಜೊತೆಗೆ, […]

ದೇಶದ ಜನ ಸ್ವಾವಲಂಬಿಗಳಾಗಬೇಕಾದ ಅನಿವಾರ್ಯತೆ ಇದೆ -ಪ್ರಧಾನಿ ಮೋದಿ
Follow us on

[lazy-load-videos-and-sticky-control id=”7C9cvnvAbfg”]

ದೆಹಲಿ: ಈ ಬಾರಿಯ ಮನ್​ ಕೀ ಬಾತ್ ಕಾರ್ಯಕ್ರಮವನ್ನ ಪ್ರಧಾನಿ ಮೋದಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ನಮನ ಸಲ್ಲಿಸುವ ಮೂಲಕ ಪ್ರಾರಂಭಿಸಿದರು.

ಇಂದು ಕಾರ್ಗಿಲ್ ವಿಜಯ್ ದಿವಸ್ ಆಚರಣೆಯ ಹಿನ್ನೆಲೆಯಲ್ಲಿ ಇಡೀ ದೇಶ ಅಂದಿನ ಗೆಲುವನ್ನು ಸಂಭ್ರಮಿಸುತ್ತಿದೆ. ಕಾರ್ಗಿಲ್ ಯುದ್ಧದಲ್ಲಿ ಭಾರತ ಗೆದ್ದು ತನ್ನ ಶಕ್ತಿ ಮತ್ತು ಸಾಮಥ್ರ್ಯ ತೋರಿಸಿತ್ತು. ನಮ್ಮ ವೀರ ಯೋಧರು ಪಾಕಿಸ್ತಾನವನ್ನ ಧ್ವಂಸ ಮಾಡಿದ್ದು ಈ ಘಟನೆಗೆ ಇಡೀ ವಿಶ್ವವೇ ಸಾಕ್ಷಿಯಾಗಿತು ಎಂದು ಪ್ರಧಾನಿ ಯೋಧರನ್ನು ಕೊಂಡಾಡಿದರು. ಜೊತೆಗೆ, ಕಾರ್ಗಿಲ್​ ವಿಜಯವನ್ನು ಭಾರತೀಯರು ಎಂದೂ ಮರೆಯಲ್ಲ. ಆದರೆ, ಭಾರತ ಎಂದಿಗೂ ಶಾಂತಿ ಬಯಸುವ ದೇಶ ಎಂಬ ಮಾತುಗಳನ್ನು ಸಹ ಹೇಳಿದರು.

‘ಕೊರೊನಾ ಹರಡದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಿ’
ಇನ್ನು ಕೊರೊನಾ ಬಗ್ಗೆ ಉಲ್ಲೇಖಿಸಿದ ಮೋದಿ ಕೊರೊನಾ ವಿರುದ್ಧದ ಅಭಿಯಾನ ಮುಂದುವರಿಸೋಣ. ಕೊರೊನಾ ವಿರುದ್ಧ ಇಡೀ ದೇಶವೇ ಹೋರಾಡುತ್ತಿದೆ. ಹೀಗಾಗಿ, ಸಾಮಾಜಿಕ ಅಂತರ ಮತ್ತು ಮಾಸ್ಕ್​ ಧರಿಸಿ ಹೋರಾಟ ಮುಂದುವರಿಸೋಣ ಎಂದು ಜನರನ್ನ ಹುರದುಂಬಿಸಿದರು. ಕೊರೊನಾ ವಾರಿಯರ್ಸ್​ಗೆ ಕೃತಜ್ಞತೆ ಸಲ್ಲಿಸಿದ ಮೋದಿ ಸಂಕಷ್ಟದಲ್ಲಿ ಬಡವರ ನೆರವಿಗೆ ಬಂದವರ ಸ್ಮರಿಸಿಕೊಂಡರು. ಕೊರೊನಾ ಹರಡದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಿ. ಆಗಲೇ, ಸೋಂಕನ್ನು ನಿಯಂತ್ರಿಸುವಲ್ಲಿ ದೇಶ ಯಶಸ್ವಿಯಾಗುತ್ತಿದೆ.

‘ದೇಶದ ಜನ ಸ್ವಾವಲಂಬಿಗಳಾಗಬೇಕಾದ ಅನಿವಾರ್ಯತೆ ಇದೆ’
ದೇಶದ ಜನರಿಗೆ ರಕ್ಷಾ ಬಂಧನದ ಶುಭಾಶಯಗಳು ತಿಳಿಸಿದ ಪ್ರಧಾನಿ ಇಂದು ದೇಶದ ಜನರು ಸ್ವಾವಲಂಬಿಗಳಾಗಬೇಕಾದ ಅನಿವಾರ್ಯತೆ ಇದೆ. ಜೊತೆಗೆ, ಭಾರತ ವೇಗವಾಗಿ ಬದಲಾಗುತ್ತಿದೆ ಹಾಗೂ ಅಭಿವೃದ್ಧಿ ಕಾಣುತ್ತಿದೆ. ಹಾಗಾಗಿ, ದೇಶ ಕಟ್ಟುವಲ್ಲಿ ಯುವಕರು ತಮ್ಮನ್ನು ಮತ್ತಷ್ಟು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳ ಜೊತೆ ಆನ್​ಲೈನ್ ಶಿಕ್ಷಣದ ಬಗ್ಗೆ ಚರ್ಚೆ
ತಮ್ಮ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಜೊತೆ ಆನ್​ಲೈನ್ ಶಿಕ್ಷಣದ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪ ಮಾಡಿದರು. ವಿವಿಧ ರಾಜ್ಯಗಳ ವಿದ್ಯಾರ್ಥಿಗಳ ಜೊತೆ ಮಾತನಾಡಿದ ಪ್ರಧಾನಿ ಪರೀಕ್ಷಾ ಪೂರ್ವ ಸಿದ್ಧತೆಯ ಬಗ್ಗೆಯೂ ವಿಚಾರಿಸಿದರು.

Published On - 12:00 pm, Sun, 26 July 20