ಮಕರ ಸಂಕ್ರಾಂತಿಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ; ಕನ್ನಡದಲ್ಲೇ ಟ್ವೀಟ್ ಮಾಡಿದ ಅಮಿತ್​ ಷಾ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 14, 2021 | 11:07 AM

ಅಮಿತ್​ ಷಾ ಅವರಂತೂ ಕನ್ನಡದಲ್ಲೇ ಟ್ವೀಟ್ ಮಾಡಿ, ಕರ್ನಾಟಕದ ಜನತೆಗೆ ಶುಭಾಶಯ ಕೋರಿದ್ದಾರೆ. ಕರ್ನಾಟಕದ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಈ ಪವಿತ್ರ ಹಬ್ಬ ಎಲ್ಲರ ಜೀವನದಲ್ಲೂ ಸುಖ, ಸಮೃದ್ಧಿ ಮತ್ತು ಆರೋಗ್ಯ ಕರುಣಿಸಲಿ ಎಂದಿದ್ದಾರೆ.

ಮಕರ ಸಂಕ್ರಾಂತಿಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ; ಕನ್ನಡದಲ್ಲೇ ಟ್ವೀಟ್ ಮಾಡಿದ ಅಮಿತ್​ ಷಾ
ಪ್ರಧಾನಿ ಮೋದಿ ಮತ್ತು ಅಮಿತ್​ ಷಾ
Follow us on

ಇಂದು ಮಕರ ಸಂಕ್ರಾಂತಿ ಹಬ್ಬದ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್​ ಷಾ ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಇಂಗ್ಲಿಷ್​ನಲ್ಲಿ ಟ್ವೀಟ್​ ಮಾಡಿ, ದೇಶದ ವಿವಿಧ ಭಾಗಗಳಲ್ಲಿ ಮಕರ ಸಂಕ್ರಾಂತಿಯನ್ನು ಜನರು ಅತ್ಯುತ್ಸಾಹದಿಂದ ಆಚರಿಸುತ್ತಿದ್ದಾರೆ. ಈ ಶುಭ ಉತ್ಸವವು ಭಾರತದ ವೈವಿಧ್ಯತೆಯನ್ನು ಸಾರುತ್ತದೆ. ನಮ್ಮ ಸಂಪ್ರದಾಯವನ್ನು ಅನುರಣಿಸುತ್ತದೆ. ಅಷ್ಟೇ ಅಲ್ಲ, ಪ್ರಕೃತಿ ಮಾತೆಯನ್ನು ಪೂಜಿಸುವ ಮಹತ್ವವನ್ನು ತಿಳಿಸುತ್ತದೆ ಎಂದಿದ್ದಾರೆ.

ಇನ್ನು ಅಮಿತ್​ ಷಾ ಅವರಂತೂ ಕನ್ನಡದಲ್ಲೇ ಟ್ವೀಟ್ ಮಾಡಿ, ಕರ್ನಾಟಕದ ಜನತೆಗೆ ಶುಭಾಶಯ ಕೋರಿದ್ದಾರೆ. ಕರ್ನಾಟಕದ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಈ ಪವಿತ್ರ ಹಬ್ಬ ಎಲ್ಲರ ಜೀವನದಲ್ಲೂ ಸುಖ, ಸಮೃದ್ಧಿ ಮತ್ತು ಆರೋಗ್ಯ ಕರುಣಿಸಲಿ ಎಂದಿದ್ದಾರೆ.

ರಂಗೋಲಿ ಸಾಧಕಿ | ತಮಿಳುನಾಡಿನಲ್ಲಿ ರಂಗೋಲಿ ಸಂಸ್ಕೃತಿ ಉಳಿಸಲು, ಬೆಳೆಸಲು ಶ್ರಮಿಸುತ್ತಿರುವ ಕನ್ನಡತಿ ಸುಚಿತಾ