ಪ್ರಧಾನಿ ನರೇಂದ್ರ ಅವರು ಇಂದು ಚೆನ್ನೈಗೆ ಭೇಟಿ ನೀಡಿದ್ದರು. ನಾನಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಅಚ್ಚರಿ ಎಂಬಂತೆ, ಭಾರತ-ಇಂಗ್ಲೆಂಡ್ ಟೆಸ್ಟ್ ನಡೆಯುತ್ತಿರುವ ಚೆನ್ನೈ ಎಂ.ಎ. ಚಿದಂಬರಂ ಸ್ಟೇಡಿಯಂನ ಫೋಟೊ ಹಾಕಿಕೊಂಡಿದ್ದಾರೆ. ಹಾಗಾದರೆ, ಅವರೇನಾದರೂ ಕ್ರಿಕೆಟ್ ಮ್ಯಾಚ್ ನೋಡೋಕೆ ಹೋಗಿದ್ದರಾ? ಇಲ್ಲ. ವಿಮಾನದಲ್ಲಿ ಸಾಗುವಾಗ ತೆಗೆದ ಸ್ಟೇಡಿಯಂ ಚಿತ್ರವನ್ನು ಮೋದಿ ಪೋಸ್ಟ್ ಮಾಡಿದ್ದಾರೆ ಅಷ್ಟೇ.
ಇಂದು ಮೋದಿ ಅವರು ತಮಿಳುನಾಡಿಗೆ ತೆರಳಿದ್ದಾರೆ. ಈ ವೇಳೆ ನಾನಾ ರೀತಿಯ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದ್ದಾರೆ. ಚೆನ್ನೈಗೆ ತೆರಳುವಾಗ ವಿಮಾನದಿಂದ ಚಿದಂಬರಂ ಸ್ಟೇಡಿಯಂನ ಚಿತ್ರವನ್ನು ಕ್ಲಿಕ್ಕಿಸಿರುವ ಮೋದಿ ಟ್ವಿಟ್ಟರ್ನಲ್ಲಿ ಹಾಕಿಕೊಂಡಿದ್ದಾರೆ. ಚೆನ್ನೈನಲ್ಲಿ ನಡೆದ ಆಸಕ್ತಿದಾಯಕ ಟೆಸ್ಟ್ ಪಂದ್ಯದ ನೋಟ ಎಂದು ಮೋದಿ ಕ್ರೀಡಾಂಗಣದ ಚಿತ್ರದೊಂದಿಗೆ ಬರೆದಿದ್ದಾರೆ.
Caught a fleeting view of an interesting test match in Chennai. ? ?? ??????? pic.twitter.com/3fqWCgywhk
— Narendra Modi (@narendramodi) February 14, 2021
ಕಳೆದ ಬಾರಿ ಮನ್ ಕಿ ಬಾತ್ನಲ್ಲಿ ಮಾತನಾಡಿದ್ದ ಮೋದಿ ಟೀಂ ಇಂಡಿಯಾಗೆ ಶುಭಾಶಯ ತಿಳಿಸಿದ್ದರು. ಈ ತಿಂಗಳು ಕ್ರಿಕೆಟ್ನಿಂದ ನಾವು ಒಳ್ಳೆಯ ಸುದ್ದಿ ಪಡೆದಿದ್ದೇವೆ. ನಮ್ಮ ಕ್ರಿಕೆಟ್ ತಂಡವು ಆರಂಭಿಕ ತೊಂದರೆ ಅನುಭವಿಸಿತ್ತು. ನಂತರ ಉತ್ತಮ ಕಂಬ್ಯಾಕ್ ಮಾಡಿ ಆಸ್ಟ್ರೇಲಿಯಾದಲ್ಲಿ ಸರಣಿಯನ್ನು ಗೆದ್ದಿತು. ತಂಡದ ಪರಿಶ್ರಮ ಪ್ರೇರೆಪಿಸುವಂತಿದೆ ಎಂದಿದ್ದರು.
ಇದನ್ನೂ ಓದಿ: Rishab Pant: ಆಹಾ ಅದೆಂತಹ ಅದ್ಭುತ ಕ್ಯಾಚ್!: ಟ್ರೋಲಿಗರಿಗೆ ಉತ್ತರ ನೀಡುತ್ತಲೇ ಇದ್ದಾರೆ ರಿಷಬ್ ಪಂತ್
ಎರಡನೇ ಟೆಸ್ಟ್ನಲ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ 329ರನ್ ಗಳಿಸಿತ್ತು. ಇದನ್ನು ಬೆನ್ನುಹತ್ತಿದ ಇಂಗ್ಲೆಂಡ್ ಕೇವಲ 161ರನ್ಗಳಿಗೆ ಆಲ್ಔಟ್ ಆಗಿತ್ತು. ಸದ್ಯ, ಎರಡನೇ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ, 54 ರನ್ಗಳಿಗೆ ಒಂದು ವಿಕೆಟ್ ಕಳೆದುಕೊಂಡಿದೆ. ಈ ಮೂಲಕ 249 ರನ್ಗಳ ಮುನ್ನಡೆ ಕಾಯ್ದುಕೊಂಡಿದೆ.
ಇದನ್ನೂ ಓದಿ: PM Modi in Tamil Nadu: ಅರ್ಜುನ್ ಟ್ಯಾಂಕ್ ಸೇನೆಗೆ ಹಸ್ತಾಂತರ; ತಮಿಳುನಾಡು ರೈತರ ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ