2001 ಗುಜರಾತ್ ಭೂಕಂಪದಲ್ಲಿ ಮಡಿದವರ ಸ್ಮರಣಾರ್ಥ ಸ್ಮೃತಿವನ್ ಉದ್ಘಾಟಿಸಲಿದ್ದಾರೆ ಮೋದಿ

| Updated By: ವಿವೇಕ ಬಿರಾದಾರ

Updated on: Aug 24, 2022 | 9:43 PM

ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 28 ರಂದು ಗುಜರಾತ್​ನ ಕಛ್​​ ಜಿಲ್ಲೆಯಲ್ಲಿ ನಿರ್ಮಾಣಗೊಂಡ ಸ್ಮೃತಿವನ್​ ಸ್ಮಾರಕವನ್ನು ಉದ್ಘಾಟಿಸಲಿದ್ದಾರೆ.

2001 ಗುಜರಾತ್ ಭೂಕಂಪದಲ್ಲಿ ಮಡಿದವರ ಸ್ಮರಣಾರ್ಥ ಸ್ಮೃತಿವನ್ ಉದ್ಘಾಟಿಸಲಿದ್ದಾರೆ ಮೋದಿ
ಪ್ರಧಾನಿ ನರೇಂದ್ರ ಮೋದಿ
Follow us on

ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಆಗಸ್ಟ್ 28 ರಂದು ಗುಜರಾತ್​ನ (Gujarat) ಕಛ್​​ ಜಿಲ್ಲೆಯಲ್ಲಿ ನಿರ್ಮಾಣಗೊಂಡ ಸ್ಮೃತಿವನ್​ ಸ್ಮಾರಕವನ್ನು ಉದ್ಘಾಟಿಸಲಿದ್ದಾರೆ. ಪ್ರಧಾನಿ ಮೋದಿ ಅವರು ಆಗಸ್ಟ್​ 27 ರಿಂದ ಎರಡು ದಿನ ಗುಜರಾತ್​ ಪ್ರವಾಸ ಕೈಗೊಳ್ಳಲಿದ್ದಾರೆ. ಪ್ರವಾಸದ ಎರಡನೇ ದಿನ ಆಗಸ್ಟ್ 28 ರಂದು ಸ್ಮೃತಿವನ್​ ಸ್ಮಾರಕವನ್ನು ಉದ್ಘಾಟಿಸಲಿದ್ದಾರೆ. 2001 ಜನವರಿ 26 ರಂದು ಕಛ್​​ ಜಿಲ್ಲೆಯಲ್ಲಿ ಸಂಭವಿಸಿದ ಭೂಕಪಂಕದಿಂದ, ಉಂಟಾದ ಭೀಕರ ಹಾನಿಯ ಸ್ಮರಣಾರ್ಥ ಈ ಸ್ಮಾರಕವನ್ನು ನಿರ್ಮಾಣ ಮಾಡಲಾಗಿದೆ.

ಈ ಸ್ಮೃತಿವನ್​ ನಿರ್ಮಾಣದ ನಿರ್ಧಾರವನ್ನು ಅಂದಿನ ಮುಖ್ಯಮಂತ್ರಿ, ಪ್ರಧಾನಿ ನರೇಂದ್ರ ಮೋದಿಯವರು ಕೈಗೊಂಡಿದ್ದರು. ಮುಂದೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ನೇತೃತ್ವದ ರಾಜ್ಯ ಸರ್ಕಾರ ಈ ಯೋಜನೆಯನ್ನು ಸಾಕಾರಗೊಳಿಸಿದೆ. ಈ ಸ್ಮೃತಿವನದಲ್ಲಿ ನಿರ್ಮಿಸಲಾಗಿರುವ ವಿಶೇಷ ವಸ್ತುಸಂಗ್ರಹಾಲಯವು ಜನರನ್ನು ಆಕರ್ಶಿಸುತ್ತಿದೆ.

ಈ ವಸ್ತು ಸಂಗ್ರಹಾಲಯವು ಭೂಕಂಪದ ಕ್ಷಣಗಳನ್ನು ಮತ್ತು ಅದರಿಂದ ಕಲಿತ ಪಾಠಗಳನ್ನು ಸ್ಮರಣೆ ಮಾಡಿಕೊಳ್ಳುವಂತೆ ಮಾಡುತ್ತದೆ. ಅಲ್ಲದೇ ಯುವಜನರಲ್ಲಿ ಭೂವಿಜ್ಞಾನದ ಬಗ್ಗೆ ಆಸಕ್ತಿಯನ್ನು ಬೆಳೆಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಭೂವಿಜ್ಞಾನಕ್ಕೆ ಸಂಬಂಧಿಸಿದ ವಿವಿಧ ಆಸಕ್ತಿದಾಯಕ ಮಾಹಿತಿ ಹಾಗೂ ಭೂಕಂಪದ ಸ್ಮರಣಿಕೆಗಳನ್ನು ವಿವಿಧ ಗ್ಯಾಲರಿಗಳಲ್ಲಿ ಜೋಡಿಸಲಾಗಿದೆ. ಅದಕ್ಕಾಗಿ ಆಧುನಿಕ ತಂತ್ರಜ್ಞಾನ ಮತ್ತು ಸಲಕರಣೆಗಳನ್ನು ಬಳಸಲಾಗಿದೆ.

ಡಿಜಿಟಲ್ ಬೆಳಕಿನಿಂದ ಭೂಕಂಪನದ ಅನುಭವ
ಕಛ್ ಭೂಕಂಪನದಲ್ಲಿ ಪ್ರಾಣ ಕಳೆದುಕೊಂಡವರ​ ಗೌರವ ಸಲ್ಲಿಸಲು ರಿಮೆಂಬರೆನ್ಸ್ ಬ್ಲಾಕ್‌ನಲ್ಲಿ ಗ್ಯಾಲರಿಯನ್ನು ಮಾಡಿದ್ದಾರೆ. ಮತ್ತು ಡಿಜಿಟಲ್​​ ಲೈಟಿಂಗ್​ ಮೂಲಕ ಭೂಕಂಪದ ಅನುಭವ ಮತ್ತು ಅಂದಿನ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ಮಾಡಿದ್ದಾರೆ.

ಸ್ಮೃತಿವನ್​ ಯೋಜನೆ

ಭೂಕಂಪದ ಸಮಯದಲ್ಲಿ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ಅನುಭವ ಪಡೆಯಲು ವಿಶೇಷ ರಂಗಮಂದಿರವನ್ನು ನಿರ್ಮಿಸಲಾಗಿದೆ. ಇಲ್ಲಿ ಕಂಪನ, ಧ್ವನಿ ಮತ್ತು ಬೆಳಕಿನ ಸಂಯೋಜನೆಯೊಂದಿಗೆ ಒಂದು ವಿಶಿಷ್ಟ ಸನ್ನಿವೇಶವನ್ನು ರಚಿಸಲಾಗಿದೆ. ಮ್ಯೂಸಿಯಂನಲ್ಲಿ ಪುನರ್ನಿರ್ಮಾಣ, ಪುನರಾರಂಭ, ಮರುಪ್ರವೇಶ, ಮರುಚಿಂತನೆ, ಪರಿಷ್ಕರಣೆ, ಮರು ಪರೀಕ್ಷೆ ಎಂಬ ಒಟ್ಟು ಎಂಟು ಬ್ಲಾಕ್‌ಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಐತಿಹಾಸಿಕ ಹರಪ್ಪಾ, ಸಿಂಧೂ ನಾಗರಿಕತೆ, ಭೂಕಂಪಗಳ ವೈಜ್ಞಾನಿಕ ಮಾಹಿತಿ, ಗುಜರಾತ್ ಕಲೆ, ಸಂಸ್ಕೃತಿ, ಸೈಕ್ಲೋನ್‌ಗಳ ವಿಜ್ಞಾನ, ನಿಯಂತ್ರಣ ಕೊಠಡಿಯ ಮೂಲಕ ನೈಜ ಸಮಯದಲ್ಲಿ ತುರ್ತು ಸಂವಹನ, ಕಛ್​ ಭೂಕಂಪದ ನಂತರ ಚೇತರಿಕೆ ಕಥೆಗಳು, ರಾಜ್ಯ ಅಭಿವೃದ್ಧಿ ಕಾರ್ಯಾಗಾರಗಳು ಮತ್ತು ಪ್ರಸ್ತುತಿಗಳನ್ನು ತೋರಿಸಲಾಗಿದೆ.

ಜಪಾನ್‌ನಲ್ಲಿರುವ ಕೋಬ್ ಭೂಕಂಪದ ಸ್ಮಾರಕ ವಸ್ತು ಸಂಗ್ರಹಾಲಯವು ಭೂಕಂಪದಿಂದ ಬದುಕುಳಿದವರು, ನಿರ್ವಹಣೆ ಮತ್ತು ಸ್ಥಳಾಂತರಿಸುವ ಕಾರ್ಯಾಚರಣೆಗಳ ಕಥೆಗಳನ್ನು ಹೇಳುತ್ತದೆ. ಭೂಕಂಪದ ನಂತರದ ಪರಿಸ್ಥಿತಿಯ ಚಿತ್ರವನ್ನೂ ನೀಡಲಾಗಿದೆ. ದಕ್ಷಿಣ ಆಫ್ರಿಕಾವು ತುಲ್ಬಾಗ್ ಕೂಡ ಭೂಕಂಪದ ವಸ್ತು ಸಂಗ್ರಹಾಲಯವನ್ನು ಹೊಂದಿದೆ. ಇಲ್ಲಿ ಸ್ಥಳೀಯರು ತಮ್ಮ ಭೂಕಂಪದ ಅನುಭವಗಳನ್ನು ವೀಡಿಯೊಗಳು ಮತ್ತು ಪ್ರಸ್ತುತಿಗಳ ಮೂಲಕ ಹಂಚಿಕೊಳ್ಳುತ್ತಾರೆ. ಅಂತೆಯೇ, ಕಛ್​ನಲ್ಲಿರುವ ವಿಶೇಷ ಭೂಕಂಪನ ವಸ್ತು ಸಂಗ್ರಹಾಲಯವು ಈಗ ಸಾರ್ವಜನಿಕ ಆಕರ್ಷಣೆಯಾಗಲಿದೆ.

ಸ್ಮಾರಕವಸ್ತು ಸಂಗ್ರಹಾಲಯ

ಪ್ರವಾಸಿಗರಿಗೆ ಹೆಚ್ಚಿನ ಅನುಭವವನ್ನು ನೀಡಲು ಇಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಲಾಗಿದೆ. ಇದು 50 ಆಡಿಯೋ-ದೃಶ್ಯ ಮಾದರಿಗಳು, ಹೊಲೊಗ್ರಾಮ್‌ಗಳು, ಸಂವಾದಾತ್ಮಕ ಪ್ರೊಜೆಕ್ಷನ್, ವರ್ಚುವಲ್ ರಿಯಾಲಿಟಿಯನ್ನು ಬಳಸಲಾಗಿದೆ. ಜನರು ಇಲ್ಲಿ ಪಳೆಯುಳಿಕೆಗಳ ಪ್ರದರ್ಶನವನ್ನು ಸಹ ನೋಡಬಹುದು. ಈ ಸ್ಥಳವು ಭೂಕಂಪದ ನಂತರದ ಚೇತರಿಕೆಯ ಕಥೆಯೊಂದಿಗೆ ಸ್ಥಳೀಯ ಕಲೆ ಸಂಸ್ಕೃತಿ, ವಿಜ್ಞಾನವನ್ನು ಪರಿಚಯಿಸುತ್ತದೆ.

470 ಎಕರೆ ಸ್ಮೃತಿವನ್​ ಯೋಜನೆ

ಈ ಯೋಜನೆಯನ್ನು ಭುಜ್‌ನ ಭುಜಿಯೋ ಬೆಟ್ಟದ ಮೇಲೆ 470 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಮೊದಲ ಹಂತದಲ್ಲಿ 170 ಎಕರೆ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಮೊದಲ ಹಂತದಲ್ಲಿ 50 ಚೆಕ್ ಡ್ಯಾಮ್‌ಗಳು, ಸನ್ ಪಾಯಿಂಟ್‌ಗಳು, 8 ಕಿಮೀ ಉದ್ದದ ಕೂಲಂಕುಷ ಮಾರ್ಗ, 1.2 ಕಿಮೀ ಆಂತರಿಕ ರಸ್ತೆ, 1 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರ, 3 ಸಾವಿರ ಪ್ರವಾಸಿಗರಿಗೆ ಪಾರ್ಕಿಂಗ್, 300ಕ್ಕೂ ಅಧಿಕ ವರ್ಷಗಳ ಹಳೆಯ ಕೋಟೆಯ ಮರುಸ್ಥಾಪನೆ, 3 ಲಕ್ಷ ಮರಗಳನ್ನು ನಡೆಲಾಗುತ್ತದೆ. ಪ್ರದೇಶದಾದ್ಯಂತ ವಿದ್ಯುತ್ ದೀಪಗಳಿವೆ, ಭೂಕಂಪದ ಅನುಭವಕ್ಕಾಗಿ ಮೀಸಲಾಗಿರುವ 11500 ಚದರ ಮೀಟರ್ ವಸ್ತು ಸಂಗ್ರಹಾಲಯ. ಚೆಕ್ ಡ್ಯಾಂನ ಗೋಡೆಗಳ ಮೇಲೆ ಎಲ್ಲಾ 12,932 ಸಂತ್ರಸ್ತ ನಾಗರಿಕರ ಹೆಸರಿನ ಫಲಕವನ್ನು ಅಳವಡಿಸಲಾಗಿದೆ.

Published On - 9:43 pm, Wed, 24 August 22