Gold Price Today: ಬೆಂಗಳೂರು ಸೇರಿ ಹಲವೆಡೆ ಚಿನ್ನದ ಬೆಲೆ 320 ರೂ. ಏರಿಕೆ; ಬೆಳ್ಳಿ ದರವೂ ಹೆಚ್ಚಳ

Silver Price Today: ಬೆಳ್ಳಿ ಬೆಲೆ ಇಂದು 100 ರೂ. ಹೆಚ್ಚಳವಾಗಿದೆ. ನಿನ್ನೆ 1 ಕೆಜಿ ಬೆಳ್ಳಿ ಬೆಲೆ 54,900 ರೂ. ಇದ್ದುದು ಇಂದು 55,000 ರೂ. ಆಗಿದೆ.

Gold Price Today: ಬೆಂಗಳೂರು ಸೇರಿ ಹಲವೆಡೆ ಚಿನ್ನದ ಬೆಲೆ 320 ರೂ. ಏರಿಕೆ; ಬೆಳ್ಳಿ ದರವೂ ಹೆಚ್ಚಳ
ಚಿನ್ನದ ಬೆಲೆ
Edited By:

Updated on: Aug 25, 2022 | 6:10 AM

Gold Price on 25th August 2022 | ಬೆಂಗಳೂರು: ಭಾರತದಲ್ಲಿ ನಿನ್ನೆ ಕುಸಿತವಾಗಿದ್ದ ಚಿನ್ನದ ಬೆಲೆ (Gold Rate) ಇಂದು ಮತ್ತೆ ಏರಿಕೆಯಾಗಿದೆ. ಇಂದು ಬಂಗಾರದ ಬೆಲೆ 320 ರೂ. ಏರಿಕೆಯಾಗಿದೆ. ಬೆಳ್ಳಿಯ ಬೆಲೆ (Silver Price) ಇಂದು 100 ರೂ. ಹೆಚ್ಚಳವಾಗಿದೆ. ನೀವು ಸಹ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಚಿನ್ನದ ಬೆಲೆ ಇಂದು ಭಾರೀ ಏರಿಕೆಯಾಗಿದೆ. ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 47,000 ರೂ. ಇದ್ದುದು 47,250 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,230 ರೂ. ಇದ್ದುದು 51,550 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 48,050 ರೂ. ಮುಂಬೈ- 47,250 ರೂ, ದೆಹಲಿ- 47,400 ರೂ, ಕೊಲ್ಕತ್ತಾ- 47,250 ರೂ, ಬೆಂಗಳೂರು- 47,300 ರೂ, ಹೈದರಾಬಾದ್- 47,250 ರೂ, ಕೇರಳ- 47,250 ರೂ, ಪುಣೆ- 47,280 ರೂ, ಮಂಗಳೂರು- 47,300 ರೂ, ಮೈಸೂರು- 47,300 ರೂ. ಇದೆ.

ಇದನ್ನೂ ಓದಿ: Gold Price Today: 3 ದಿನಗಳಿಂದ ಒಂದೇ ರೀತಿಯಲ್ಲಿದೆ ಚಿನ್ನದ ಬೆಲೆ; ಬೆಳ್ಳಿ ದರದಲ್ಲಿ ಸ್ವಲ್ಪ ಕುಸಿತ

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 52,420 ರೂ, ಮುಂಬೈ- 51,550 ರೂ, ದೆಹಲಿ- 51,710 ರೂ, ಕೊಲ್ಕತ್ತಾ- 51,550 ರೂ, ಬೆಂಗಳೂರು- 51,600 ರೂ, ಹೈದರಾಬಾದ್- 51,550 ರೂ, ಕೇರಳ- 51,550 ರೂ, ಪುಣೆ- 51,580 ರೂ, ಮಂಗಳೂರು- 51,600 ರೂ, ಮೈಸೂರು- 51,600 ರೂ. ಆಗಿದೆ.

ಇಂದಿನ ಬೆಳ್ಳಿಯ ದರ:
ಬೆಳ್ಳಿ ಬೆಲೆ ಇಂದು 100 ರೂ. ಹೆಚ್ಚಳವಾಗಿದೆ. ನಿನ್ನೆ 1 ಕೆಜಿ ಬೆಳ್ಳಿ ಬೆಲೆ 54,900 ರೂ. ಇದ್ದುದು ಇಂದು 55,000 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 60,900 ರೂ, ಮೈಸೂರು- 60,900 ರೂ., ಮಂಗಳೂರು- 60,900 ರೂ., ಮುಂಬೈ- 55,000 ರೂ, ಚೆನ್ನೈ- 60,900 ರೂ, ದೆಹಲಿ- 55,000 ರೂ, ಹೈದರಾಬಾದ್- 60,900 ರೂ, ಕೊಲ್ಕತ್ತಾ- 55,000 ರೂ. ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

TV9 Web

TV9 Kannada

Read More
Loading...
Unable to load recommendations.
Follow Us