Gold Price Today: 3 ದಿನಗಳಿಂದ ಒಂದೇ ರೀತಿಯಲ್ಲಿದೆ ಚಿನ್ನದ ಬೆಲೆ; ಬೆಳ್ಳಿ ದರದಲ್ಲಿ ಸ್ವಲ್ಪ ಕುಸಿತ
Silver Price Today: ಬೆಳ್ಳಿ ಬೆಲೆ ಇಂದು 100 ರೂ. ಕುಸಿತವಾಗಿದೆ. ನಿನ್ನೆ 1 ಕೆಜಿ ಬೆಳ್ಳಿ ಬೆಲೆ 55,600 ರೂ. ಇದ್ದುದು ಇಂದು 55,500 ರೂ. ಆಗಿದೆ.
Gold Price on 22nd August 2022 | ಬೆಂಗಳೂರು: ಭಾರತದಲ್ಲಿ ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆ (Gold Rate)ಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಬೆಳ್ಳಿಯ ಬೆಲೆ (Silver Price) ಇಂದು 100 ರೂ. ಕುಸಿತವಾಗಿದೆ. ನೀವು ಸಹ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಚಿನ್ನದ ಬೆಲೆ ಇಂದು ಕೂಡ ಏರಿಳಿತವಾಗಿಲ್ಲ. 3 ದಿನಗಳ ಹಿಂದೆ 22 ಕ್ಯಾರೆಟ್ ಚಿನ್ನದ ಬೆಲೆ 47,900 ರೂ. ಇದ್ದುದು 47,800 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 52,250 ರೂ. ಇದ್ದುದು 52,150 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 48,300 ರೂ. ಮುಂಬೈ- 47,800 ರೂ, ದೆಹಲಿ- 47,950 ರೂ, ಕೊಲ್ಕತ್ತಾ- 47,800 ರೂ, ಬೆಂಗಳೂರು- 47,850 ರೂ, ಹೈದರಾಬಾದ್- 47,800 ರೂ, ಕೇರಳ- 47,800 ರೂ, ಪುಣೆ- 47,830 ರೂ, ಮಂಗಳೂರು- 47,850 ರೂ, ಮೈಸೂರು- 47,850 ರೂ. ಇದೆ.
ಇದನ್ನೂ ಓದಿ: Gold Price Today: ಭಾರತದಲ್ಲಿ ಬೆಳ್ಳಿ ದರ 900 ರೂ. ಕುಸಿತ; ಇಂದಿನ ಚಿನ್ನದ ಬೆಲೆ ಹೀಗಿದೆ
ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ: ಚೆನ್ನೈ- 52,700 ರೂ, ಮುಂಬೈ- 52,150 ರೂ, ದೆಹಲಿ- 52,310 ರೂ, ಕೊಲ್ಕತ್ತಾ- 52,150 ರೂ, ಬೆಂಗಳೂರು- 52,200 ರೂ, ಹೈದರಾಬಾದ್- 52,150 ರೂ, ಕೇರಳ- 52,150 ರೂ, ಪುಣೆ- 52,180 ರೂ, ಮಂಗಳೂರು- 52,200 ರೂ, ಮೈಸೂರು- 52,200 ರೂ. ಆಗಿದೆ.
ಇಂದಿನ ಬೆಳ್ಳಿಯ ದರ: ಬೆಳ್ಳಿ ಬೆಲೆ ಇಂದು 100 ರೂ. ಕುಸಿತವಾಗಿದೆ. ನಿನ್ನೆ 1 ಕೆಜಿ ಬೆಳ್ಳಿ ಬೆಲೆ 55,600 ರೂ. ಇದ್ದುದು ಇಂದು 55,500 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 61,300 ರೂ, ಮೈಸೂರು- 61,300 ರೂ., ಮಂಗಳೂರು- 61,300 ರೂ., ಮುಂಬೈ- 55,500 ರೂ, ಚೆನ್ನೈ- 61,300 ರೂ, ದೆಹಲಿ- 55,500 ರೂ, ಹೈದರಾಬಾದ್- 61,300 ರೂ, ಕೊಲ್ಕತ್ತಾ- 55,500 ರೂ. ಆಗಿದೆ.