AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಾಟಾ ಪಂಚ್‌ಗೆ ಪೈಪೋಟಿ ನೀಡಲು ಬರುತ್ತಿದೆ ಮಾರುತಿಯ ಹೊಸ ಮೈಕ್ರೋ ಎಸ್‌ಯುವಿ

ಮಾರುತಿ ಸುಜುಕಿ 2017ರ ಜನವರಿಯಲ್ಲಿ ಇಗ್ನಿಸ್ ಕಾರಿನ ಮೂಲಕ ಮೈಕ್ರೋ ಎಸ್‌ಯುವಿ ವಿಭಾಗಕ್ಕೆ ಪ್ರವೇಶಿಸಿತ್ತು. ಆದರೆ, ಗ್ರಾಹಕರಿಂದ ನಿರೀಕ್ಷಿತ ಪ್ರತಿಕ್ರಿಯೆ ದೊರೆಯದ ಕಾರಣ 2026ರ ಆರಂಭದಲ್ಲಿ ಇಗ್ನಿಸ್ ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿತು. ಇದೀಗ Maruti Y43 ಮೂಲಕ ಈ ವಿಭಾಗದಲ್ಲಿ ಮತ್ತೆ ಬಲವಾದ ಹೆಜ್ಜೆ ಇಡಲು ಕಂಪನಿ ಸಿದ್ಧವಾಗಿದೆ.

ಟಾಟಾ ಪಂಚ್‌ಗೆ ಪೈಪೋಟಿ ನೀಡಲು ಬರುತ್ತಿದೆ ಮಾರುತಿಯ ಹೊಸ ಮೈಕ್ರೋ ಎಸ್‌ಯುವಿ
Car
ಮಾಲಾಶ್ರೀ ಅಂಚನ್​
| Edited By: |

Updated on: Nov 11, 2026 | 10:12 PM

Share

ಮುಖ್ಯಾಂಶಗಳು

  • ಟಾಟಾ ಪಂಚ್‌ಗೆ ಪೈಪೋಟಿ ನೀಡಲು ಬರುತ್ತಿದೆ ಮಾರುತಿ Y43
  • ಸನ್‌ರೂಫ್, 360 ಡಿಗ್ರಿ ಕ್ಯಾಮೆರಾ ಹೊಂದಿರಲಿದೆಯೇ ಹೊಸ ಕಾರು?
  • ಪೆಟ್ರೋಲ್, ಸಿಎನ್‌ಜಿ, ಹೈಬ್ರಿಡ್ ಆಯ್ಕೆಯಲ್ಲೂ ಬರಲಿದೆ

ಭಾರತದ ವಾಹನ ಮಾರುಕಟ್ಟೆಯಲ್ಲಿ ಟಾಟಾ ಪಂಚ್ ಮತ್ತು ಹ್ಯುಂಡೈ ಎಕ್ಸ್‌ಟರ್ ಕಾರುಗಳ ಪ್ರಾಬಲ್ಯಕ್ಕೆ ಪೈಪೋಟಿ ನೀಡಲು ದೇಶದ ಅತಿದೊಡ್ಡ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ (Maruti Suzuki) ಸಿದ್ಧತೆ ನಡೆಸುತ್ತಿದೆ. ಕಂಪನಿಯು ತನ್ನ ಹೊಸ ಮೈಕ್ರೋ ಎಸ್‌ಯುವಿ ಕಾರಿನ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ. ಇದಕ್ಕೆ ಆಂತರಿಕವಾಗಿ ಮಾರುತಿ Y43 ಎಂಬ ಸಂಕೇತನಾಮ ನೀಡಲಾಗಿದೆ. 2021ರ ಅಕ್ಟೋಬರ್‌ನಲ್ಲಿ ಬಿಡುಗಡೆಯಾದ ಬಳಿಕ ಟಾಟಾ ಪಂಚ್ 8 ಲಕ್ಷಕ್ಕೂ ಹೆಚ್ಚು ಕಾರುಗಳ ಮಾರಾಟದ ಮೈಲಿಗಲ್ಲು ತಲುಪಿದೆ. ಈ ಯಶಸ್ಸನ್ನು ಗಮನದಲ್ಲಿಟ್ಟುಕೊಂಡು ಮಾರುತಿ ಸುಜುಕಿ ತನ್ನ ಹಳೆಯ ಇಗ್ನಿಸ್ ಕಾರಿನ ಉತ್ಪಾದನೆ ಸ್ಥಗಿತಗೊಳಿಸಿದ ಬಳಿಕ, ಸಂಪೂರ್ಣ ಹೊಸ ವಿನ್ಯಾಸದ ಕಾಂಪ್ಯಾಕ್ಟ್ ಮೈಕ್ರೋ ಎಸ್‌ಯುವಿಯನ್ನು ಅಭಿವೃದ್ಧಿಪಡಿಸುತ್ತಿದೆ. ಈ ಕಾರನ್ನು 2027ರಲ್ಲಿ ಮಾರುಕಟ್ಟೆಗೆ ಪರಿಚಯಿಸುವ ಯೋಜನೆ ಹೊಂದಿದೆ.

ಭಾರತಕ್ಕೆಂದೇ ವಿಶೇಷ ವಿನ್ಯಾಸ: ಜಪಾನಿನ ಕೀ ಕಾರ್ ಪರಿಕಲ್ಪನೆ ಆಧಾರಿತ

ಮಾರುತಿ ಸುಜುಕಿ 2017ರ ಜನವರಿಯಲ್ಲಿ ಇಗ್ನಿಸ್ ಕಾರಿನ ಮೂಲಕ ಮೈಕ್ರೋ ಎಸ್‌ಯುವಿ ವಿಭಾಗಕ್ಕೆ ಪ್ರವೇಶಿಸಿತ್ತು. ಆದರೆ, ಗ್ರಾಹಕರಿಂದ ನಿರೀಕ್ಷಿತ ಪ್ರತಿಕ್ರಿಯೆ ದೊರೆಯದ ಕಾರಣ 2026ರ ಆರಂಭದಲ್ಲಿ ಇಗ್ನಿಸ್ ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿತು. ಇದೀಗ Maruti Y43 ಮೂಲಕ ಈ ವಿಭಾಗದಲ್ಲಿ ಮತ್ತೆ ಬಲವಾದ ಹೆಜ್ಜೆ ಇಡಲು ಕಂಪನಿ ಸಿದ್ಧವಾಗಿದೆ.

ಗಾಡಿವಾಡಿ ಡಾಟ್ ಕಾಮ್ ವರದಿಯ ಪ್ರಕಾರ, ಹರಿಯಾಣದ ಖಾರ್ಖೋಡಾದಲ್ಲಿರುವ ಹೊಸ ಘಟಕದಲ್ಲಿ ಇತ್ತೀಚೆಗೆ ಈ ಕಾರಿನ ಪರೀಕ್ಷಾರ್ಥ ಮಾದರಿ ಕಾಣಿಸಿಕೊಂಡಿದೆ. ಇದರಿಂದ ಕಾರಿನ ವಿನ್ಯಾಸ ಜಪಾನಿನ ಕೀ ಕಾರುಗಳ ಮಾದರಿಯಲ್ಲಿರಬಹುದು ಎಂಬ ಸುಳಿವು ಸಿಕ್ಕಿದೆ. ಚೌಕಾಕಾರದ ವಿನ್ಯಾಸ, ಎತ್ತರದ ಬಾಡಿ ಮತ್ತು ಸಮತಟ್ಟಾದ ಬಾನೆಟ್ ಇದರ ಪ್ರಮುಖ ಆಕರ್ಷಣೆಗಳಾಗಿರಬಹುದು. ಆದರೆ, ಭಾರತೀಯ ರಸ್ತೆ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಜಪಾನಿನ ಕೀ ಕಾರುಗಳಿಗಿಂತ ಹೆಚ್ಚಿನ ಎತ್ತರ ಹಾಗೂ ಸುಮಾರು 190 ಮಿ.ಮೀ. ಗ್ರೌಂಡ್ ಕ್ಲಿಯರೆನ್ಸ್ ನೀಡುವ ಸಾಧ್ಯತೆಯಿದೆ.

ಆಧುನಿಕ ಫೀಚರ್ಸ್ ಮತ್ತು ಹೈಟೆಕ್ ಕ್ಯಾಬಿನ್

ಗ್ರಾಹಕರ ಆಧುನಿಕ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು Maruti Y43 ಕಾರಿನ ಒಳಾಂಗಣದಲ್ಲಿ ಹಲವು ಪ್ರೀಮಿಯಂ ಮತ್ತು ಈ ವಿಭಾಗದಲ್ಲೇ ಮೊದಲ ಬಾರಿಗೆ ಕಾಣಿಸಿಕೊಳ್ಳಬಹುದಾದ ಫೀಚರ್ಸ್‌ಗಳನ್ನು ನೀಡುವ ನಿರೀಕ್ಷೆಯಿದೆ. ಇದರಲ್ಲಿ ಸನ್‌ರೂಫ್, ವೆಂಟಿಲೇಟೆಡ್ ಮುಂಭಾಗದ ಸೀಟುಗಳು, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್, 50 ವ್ಯಾಟ್‌ಗಿಂತ ಹೆಚ್ಚಿನ ಸಾಮರ್ಥ್ಯದ ವೇಗದ ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್‌ಗಳು, ಕ್ರೂಸ್ ಕಂಟ್ರೋಲ್ ಮತ್ತು ಆಟೊಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ವ್ಯವಸ್ಥೆ ಇರಬಹುದು.

ಕಷ್ಟದ ಪರಿಸ್ಥಿತಿಯಲ್ಲಿ ಮೊಬೈಲ್ ವ್ಯಾಪಾರಿಗಳು, ಸ್ಮಾರ್ಟ್‌ಫೋನ್ ಮಾರಾಟ ಶೇ 30ರಷ್ಟು ಕುಸಿತ

Z12E ಎಂಜಿನ್ ಆಯ್ಕೆ: ಪೆಟ್ರೋಲ್, ಸಿಎನ್‌ಜಿ ಮತ್ತು ಹೈಬ್ರಿಡ್ ಸಾಧ್ಯತೆ

ಕಾರ್ಯಕ್ಷಮತೆಯ ವಿಚಾರಕ್ಕೆ ಬಂದರೆ, ಮಾರುತಿ ಸುಜುಕಿಯ ಈ ಮುಂಬರುವ ಮೈಕ್ರೋ ಎಸ್‌ಯುವಿಯಲ್ಲಿ ಹೊಸ Z12E 1.2 ಲೀಟರ್, ಮೂರು ಸಿಲಿಂಡರ್ ನ್ಯಾಚುರಲಿ ಆಸ್ಪಿರೇಟೆಡ್ ಎಂಜಿನ್ ನೀಡುವ ಸಾಧ್ಯತೆಯಿದೆ. ಪೆಟ್ರೋಲ್‌ನಲ್ಲಿ ಈ ಎಂಜಿನ್ ಸುಮಾರು 82 ಬಿಎಚ್‌ಪಿ ಶಕ್ತಿ ಮತ್ತು 112.4 ನ್ಯೂಟನ್ ಮೀಟರ್ ಟಾರ್ಕ್ ಉತ್ಪಾದಿಸಲಿದೆ. ಸಿಎನ್‌ಜಿ ಮೋಡ್‌ನಲ್ಲಿ 69 ಬಿಎಚ್‌ಪಿ ಶಕ್ತಿ ಹಾಗೂ 101.8 ನ್ಯೂಟನ್ ಮೀಟರ್ ಟಾರ್ಕ್ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.

ಕೈಗೆಟುಕುವ ಬೆಲೆ: ಪ್ರತಿಸ್ಪರ್ಧಿಗಳಿಗೆ ಪೈಪೋಟಿ ನೀಡುವ ಸಾಧ್ಯತೆ

ಕಡಿಮೆ ಬೆಲೆ, ವಿಶ್ವಾಸಾರ್ಹತೆ ಮತ್ತು ದೇಶಾದ್ಯಂತ ವ್ಯಾಪಕವಾಗಿರುವ ಸರ್ವಿಸ್ ನೆಟ್‌ವರ್ಕ್‌ನ ಬಲದೊಂದಿಗೆ Maruti Y43 ನೇರವಾಗಿ ಟಾಟಾ ಪಂಚ್ ಮತ್ತು ಹ್ಯುಂಡೈ ಎಕ್ಸ್‌ಟರ್ ಕಾರುಗಳಿಗೆ ಪೈಪೋಟಿ ನೀಡುವ ನಿರೀಕ್ಷೆಯಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More