ದೆಹಲಿ: ಇಂದು ನವೆಂಬರ್ 14. ಸ್ವತಂತ್ರ ಭಾರತದ ಮೊದಲ, ಮಾಜಿ ಪ್ರಧಾನಿ ಜವಾಹರ್ಲಾಲ್ ನೆಹರೂ (Jawaharlal Nehru) ಅವರ ಜನ್ಮದಿನದ ನಿಮಿತ್ತ ರಾಷ್ಟ್ರಾದ್ಯಂತ ಮಕ್ಕಳ ದಿನಾಚರಣೆ ಆಚರಿಸಲಾಗುತ್ತಿದೆ. ಈ ಬಾರಿ ಜವಾಹರ್ಲಾಲ್ ನೆಹರೂ ಅವರ 132ನೇ ಜನ್ಮಜಯಂತಿ ಆಚರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ನೆಹರೂ ಅವರನ್ನು ಸ್ಮರಿಸಿದ್ದಾರೆ. ಟ್ವೀಟ್ ಮಾಡಿರುವ ಪ್ರಧಾನಮಂತ್ರಿ, ಪಂಡಿತ್ ಜವಾಹರ್ಲಾಲ್ ನೆಹರೂ ಜನ್ಮದಿನದಂದು ಅವರಿಗೆ ನಮನಗಳು ಎಂದು ಹೇಳಿದ್ದಾರೆ.
Tributes to Pandit Jawaharlal Nehru Ji on his birth anniversary.
— Narendra Modi (@narendramodi) November 14, 2021
ನೆಹರೂ ಅವರನ್ನು ಮಕ್ಕಳು ಪ್ರೀತಿಯಿಂದ ಚಾಚಾ ನೆಹರೂ ಎಂದೇ ಕರೆಯುತ್ತಿದ್ದರು. ಅವರಿಗೂ ಮಕ್ಕಳೆಂದರೆ ತುಂಬ ಅಚ್ಚುಮೆಚ್ಚಾಗಿತ್ತು. ಇದೇ ಕಾರಣಕ್ಕೆ ಅವರ ಜನ್ಮದಿನವನ್ನು ಭಾರತದಲ್ಲಿ ಬಾಲ ದಿವಸ್ ಅಥವಾ ಮಕ್ಕಳ ದಿನವೆಂದು ಆಚರಿಸಿಕೊಂಡು ಬರಲಾಗುತ್ತಿದೆ. ಇಂದು ಅವರ ಜನ್ಮದಿನದಂದು ಕಾಂಗ್ರೆಸ್ ಅಧ್ಯಕ್ಷೆ ದೆಹಲಿಯಲ್ಲಿರುವ ಶಾಂತಿವನದಲ್ಲಿ ನೆಹರೂ ಅವರಿಗೆ ಪುಷ್ಪನಮನ ಸಲ್ಲಿಸಿದರು. ಹಲವು ಕಾಂಗ್ರೆಸ್ ಮುಖಂಡರೂ ಕೂಡ ನೆಹರೂರವರನ್ನು ಸ್ಮರಿಸಿದ್ದಾರೆ. ಜವಾಹರ್ ಲಾಲ್ ನೆಹರೂ ಸ್ವತಂತ್ರ ಭಾರತದ ಮೊದಲ ಪ್ರಧಾನಿ. 1889ರ ನವೆಂಬರ್ 14ರಂದು ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ಜನಿಸಿದ್ದಾರೆ. 1947ರ ಅಗಸ್ಟ್ 15ರಂದು ಪ್ರಧಾನಿ ಹುದ್ದೆಗೆ ಏರಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು, 1964ರ ಮೇ 27ರಂದು ಮೃತಪಟ್ಟಿದ್ದಾರೆ.
1954ರಲ್ಲಿ ವಿಶ್ವಸಂಸ್ಥೆ ನವೆಂಬರ್ 20ರಂದು ವಿಶ್ವ ಮಕ್ಕಳ ದಿನವನ್ನಾಗಿ ಆಚರಿಸಲಾಗುವುದು ಎಂದು ಘೋಷಿಸಿತು. ಅದರಂತೆ ಭಾರತದಲ್ಲೂ 1964ರವರೆಗೆ ಪ್ರತಿವರ್ಷ ನವೆಂಬರ್ 20ರಂದು ಮಕ್ಕಳ ದಿನ ಆಚರಿಸಲಾಗುತ್ತಿತ್ತು. ಆದರೆ ನೆಹರೂ ಮೃತರಾದ ಬಳಿಕ ಅಂದರೆ 1964ರ ನಂತರ, ಅವರ ಜನ್ಮದಿನದಂದೇ ಭಾರತದಲ್ಲಿ ಮಕ್ಕಳ ದಿನ ಆಚರಿಸಲು ಸಂಸತ್ತಿನಲ್ಲಿ ನಿರ್ಣಯ ಕೈಗೊಳ್ಳಲಾಯಿತು.
Delhi: Congress interim president Sonia Gandhi pays floral tribute to the nation’s first Prime Minister #JawaharlalNehru at Shantivan, on his birth anniversary today. pic.twitter.com/qCY5R5v4lE
— ANI (@ANI) November 14, 2021
ಇದನ್ನೂ ಓದಿ: ಫಿಟ್ನೆಸ್ ಹೇಳಿಕೊಡ್ತೀವಿ ಅಂತ 1.5 ಕೋಟಿ ರೂ. ಮೋಸ ಮಾಡಿದ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ? ಕೇಸ್ ದಾಖಲು