ಸೋಮನಾಥ ಸ್ವಾಭಿಮಾನ ಪರ್ವ, ಎಲ್ಲರೂ ಸೋಮನಾಥ ಭೇಟಿಯ ಫೋಟೊಗಳ ಹಂಚಿಕೊಳ್ಳಲು ಪ್ರಧಾನಿ ಮೋದಿ ಕರೆ

Somnath Swabhiman Parv: ಸೋಮನಾಥ ಸ್ವಾಭಿಮಾನ ಪರ್ವ ಕಾರ್ಯಕ್ರಮ ಜನವರಿ 8ರಿಂದ 11ರವರೆಗೆ ಗುಜರಾತ್​ನ ಸೋಮನಾಥ ದೇವಾಲಯದಲ್ಲಿ ನಡೆಯಲಿದೆ. ಸೋಮನಾಥ ದೇವಾಲಯದ ಭೇಟಿಯ ಫೋಟೋಗಳನ್ನು ಹಂಚಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಈ ಕಾರ್ಯಕ್ರಮವು ಭಾರತದ ಅಚಲ ಸಾಂಸ್ಕೃತಿಕ ಏಕತೆ ಮತ್ತು ಸಹಸ್ರಮಾನಗಳ ನಂಬಿಕೆಯ ಸಂಕೇತವಾಗಿದೆ. ಸೋಮನಾಥ ದೇವಾಲಯದ ಪುನರ್ನಿರ್ಮಾಣ ಮತ್ತು ಅದರ ಐತಿಹಾಸಿಕ ಮಹತ್ವವನ್ನು ಸ್ಮರಿಸುವುದು ಇದರ ಉದ್ದೇಶವಾಗಿದೆ. ಎಲ್ಲರೂ #SomnathSwabhimanParv ಬಳಸಿ ಫೋಟೋ ಹಂಚಿಕೊಳ್ಳುವಂತೆ ಮೋದಿ ಕರೆ ನೀಡಿದ್ದಾರೆ.

ಸೋಮನಾಥ ಸ್ವಾಭಿಮಾನ ಪರ್ವ, ಎಲ್ಲರೂ ಸೋಮನಾಥ ಭೇಟಿಯ ಫೋಟೊಗಳ ಹಂಚಿಕೊಳ್ಳಲು ಪ್ರಧಾನಿ ಮೋದಿ ಕರೆ
ಸೋಮನಾಥ ದೇವಾಲಯದಲ್ಲಿ ವಾಜಪೇಯಿ ಮತ್ತು ಮೋದಿ

Updated on: Jan 08, 2026 | 10:40 AM

ಅಹಮದಾಬಾದ್, ಜನವರಿ 08: ಗುಜರಾತಿನಲ್ಲಿರುವ ಸೋಮನಾಥ ದೇವಾಲಯ(Somnath Temple)ದಲ್ಲಿ ಇಂದಿನಿಂದ ‘ಸೋಮನಾಥ ಸ್ವಾಭಿಮಾನ ಪರ್ವ’ ಕಾರ್ಯಕ್ರಮ ಶುರುವಾಗಲಿದ್ದು, ನೀವೂ ಕೂಡ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿದ್ದರೆ ಆ ಫೋಟೊವನ್ನು ಹಂಚಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಪ್ರಧಾನಿ ಜನವರಿ 11ರಂದು ಸೋಮನಾಥಕ್ಕೆ ಭೇಟಿ ನೀಡಲಿದ್ದಾರೆ.

ಸಾವಿರ ವರ್ಷಗಳ ಹಿಂದೆ, ಜನವರಿ 1026 ರಲ್ಲಿ, ಸೋಮನಾಥ ದೇವಾಲಯವು ಅದರ ಇತಿಹಾಸದಲ್ಲಿ ಮೊದಲ ದಾಳಿಯನ್ನು ಎದುರಿಸಿತು. 1026ರ ದಾಳಿ ಮತ್ತು ನಂತರದ ಅನೇಕ ದಾಳಿಗಳು ನಮ್ಮ ಶಾಶ್ವತ ನಂಬಿಕೆಯನ್ನು ಅಲುಗಾಡಿಸಲು ಸಾಧ್ಯವಾಗಲಿಲ್ಲ. ಬದಲಾಗಿ, ಅವು ಭಾರತದ ಸಾಂಸ್ಕೃತಿಕ ಏಕತೆಯ ಪ್ರಜ್ಞೆಯನ್ನು ಬಲಪಡಿಸಿದವು ಮತ್ತು ಸೋಮನಾಥವನ್ನು ಮತ್ತೆ ಮತ್ತೆ ಕಟ್ಟಿ ನಿಲ್ಲಿಸಲಾಯಿತು ಎಂದು ಪ್ರಧಾನಿ ಮೋದಿ ಪೋಸ್ಟ್​​ನಲ್ಲಿ ಬರೆದಿದ್ದಾರೆ.

ಪ್ರಧಾನಿ ಮೋದಿ ಕೂಡ ಸೋಮನಾಥಕ್ಕೆ ಭೇಟಿ ನೀಡಿದ್ದ ಹಳೆಯ ಫೋಟೊಗಳನ್ನು ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ. ನಿಮ್ಮ ಫೋಟೋಗಳನ್ನು #SomnathSwabhimanParv ನೊಂದಿಗೆ ಹಂಚಿಕೊಳ್ಳಿ ಎಂದು ಮೋದಿ ಬರೆದಿದ್ದಾರೆ.

ಪ್ರಧಾನಿ ಮೋದಿ ಪೋಸ್ಟ್​

ಈ ಸೋಮನಾಥ ಸ್ವಾಭಿಮಾನ ಪರ್ವವು ತಮ್ಮ ತತ್ವಗಳು ಮತ್ತು ಮೌಲ್ಯಗಳಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳದ ಭಾರತ ಮಾತೆಯ ಅಸಂಖ್ಯಾತ ಪುತ್ರರನ್ನು ಸ್ಮರಿಸುವ ಆಚರಣೆಯಾಗಿದೆ. ಎಷ್ಟೇ ಕಠಿಣ ಮತ್ತು ಭಯಾನಕ ಕಾಲ ಬಂದರೂ ಅವರ ಸಂಕಲ್ಪ ಅಚಲವಾಗಿತ್ತು. ನಮ್ಮ ನಾಗರಿಕತೆ ಮತ್ತು ಸಾಂಸ್ಕೃತಿಕ ಪ್ರಜ್ಞೆಗೆ ಅವರ ನಿಷ್ಠೆ ಅಚಲವಾಗಿತ್ತು. ಸಾವಿರ ವರ್ಷಗಳ ಅಚಲ ನಂಬಿಕೆಯ ಈ ಸಂದರ್ಭವು ರಾಷ್ಟ್ರೀಯ ಏಕತೆಗಾಗಿ ಶ್ರಮಿಸುವ ಮನೋಭಾವವು ನಮ್ಮಲ್ಲಿಯೇ ಉಳಿಯುವಂತೆ ಮಾಡುತ್ತದೆ.

ಮೋದಿ ಮತ್ತೊಂದು ಪೋಸ್ಟ್​

ಅಕ್ಟೋಬರ್ 31, 2001 ರಂದು ಸೋಮನಾಥದಲ್ಲಿ ನಡೆದ ಒಂದು ಕಾರ್ಯಕ್ರಮದ ಕೆಲವು ಕ್ಷಣಗಳನ್ನು ಮೋದಿ ಹಂಚಿಕೊಂಡಿದ್ದಾರೆ. 1951 ರಲ್ಲಿ ಸೋಮನಾಥ ದೇವಾಲಯವನ್ನು ಮರು ನಿರ್ಮಿಸಲಾಗಿತ್ತು, ಉದ್ಘಾಟನೆಯ 50 ನೇ ವಾರ್ಷಿಕೋತ್ಸವವನ್ನು ನಾವು ಆಚರಿಸಿದ ವರ್ಷ ಇದು.

ಮತ್ತಷ್ಟು ಓದಿ: ಧ್ವಂಸಗೊಂಡಿದ್ದ ಸೋಮನಾಥ ದೇವಾಲಯವನ್ನು ಮತ್ತೆ ಕಟ್ಟುವುದು ನೆಹರುಗೆ ಇಷ್ಟವಿರಲಿಲ್ಲ: ಸುಧಾಂಶು ತ್ರಿವೇದಿ

ಆ ಐತಿಹಾಸಿಕ ಸಮಾರಂಭವು ಆಗಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರ ಸಮ್ಮುಖದಲ್ಲಿ ನಡೆಯಿತು. ಸೋಮನಾಥ ದೇವಾಲಯದ ಪುನರ್ನಿರ್ಮಾಣದಲ್ಲಿ ಸರ್ದಾರ್ ಪಟೇಲ್ ಮತ್ತು ಕೆ.ಎಂ. ಮುನ್ಷಿ ಮತ್ತು ಇತರ ಅನೇಕ ಮಹಾನ್ ವ್ಯಕ್ತಿಗಳ ಪ್ರಯತ್ನಗಳು ಹೆಚ್ಚಿತ್ತು. 2001 ರ ಈ ಕಾರ್ಯಕ್ರಮದಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಗೃಹ ಸಚಿವ ಅಡ್ವಾಣಿ ಮತ್ತು ಇತರ ಅನೇಕ ಗಣ್ಯರು ಭಾಗವಹಿಸಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ