
ಕೋಲ್ಕತ್ತಾ, ಮೇ 14: ಬಿಜೆಪಿ ನಾಯಕ ಮತ್ತು ಮಾಜಿ ಸಂಸದ ದಿಲೀಪ್ ಘೋಷ್(Dilip Ghosh) ಅವರ ಮಲಮಗ ಶವವಾಗಿ ಪತ್ತೆಯಾಗಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. ದಿಲೀಪ್ ಘೋಷ್ ಅವರ ಪತ್ನಿಯ ಮೊದಲ ಪತಿಯಿಂದ ಜನಿಸಿದ್ದ ಪ್ರೀತಮ್ ಕೋಲ್ಕತ್ತಾದ ಅಪಾರ್ಟ್ಮೆಂಟ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮಂಗಳವಾರ ಬೆಳಿಗ್ಗೆ ಕೋಲ್ಕತ್ತಾದ ನ್ಯೂ ಟೌನ್ ಪ್ರದೇಶದಲ್ಲಿರುವ ಅವರ ಮನೆಯಿಂದ ರಿಂಕು ಮಜುಂದಾರ್ ಅವರ ಪುತ್ರ 26 ವರ್ಷದ ಪ್ರೀತಮ್ ಮಜುಂದಾರ್ ಅವರ ಮೃತದೇಹ ಪತ್ತೆಯಾಗಿದೆ.
60 ವರ್ಷದ ದಿಲೀಪ್ ಘೋಷ್, ಪಕ್ಷದ ಮಹಿಳಾ ವಿಭಾಗದ ನಾಯಕಿ ರಿಂಕು ಮಜುಂದಾರ್ ಅವರನ್ನು ಕಳೆದ ತಿಂಗಳು ವಿವಾಹವಾಗಿದ್ದರು. ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಆದರೆ ಪ್ರೀಮತ್ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಪ್ರೀತಮ್ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ತನಿಖೆ ನಡೆಸಲಾಗುತ್ತಿದೆ. ಇಲ್ಲಿಯವರೆಗೆ, ರಿಂಕು ಮಜುಂದಾರ್ ಅಥವಾ ಪ್ರೀತಮ್ ಕುಟುಂಬದ ಯಾವುದೇ ಸದಸ್ಯರಿಂದ ಪೊಲೀಸರಿಗೆ ಯಾವುದೇ ಔಪಚಾರಿಕ ದೂರು ಬಂದಿಲ್ಲ.
ಇದು ಘೋಷ್ ಅವರ ಮೊದಲ ವಿವಾಹ ಮತ್ತು ಕಳೆದ ತಿಂಗಳು ಮಜುಂದಾರ್ ಅವರ ಎರಡನೇ ವಿವಾಹವಾಗಿದ್ದರು. ದೀರ್ಘಕಾಲದ ಆರ್‌ಎಸ್‌ಎಸ್ ಸದಸ್ಯರಾಗಿರುವ ಘೋಷ್ 2015 ರಿಂದ 2021 ರವರೆಗೆ ಬಿಜೆಪಿಯ ಬಂಗಾಳದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಎಡಪಂಥೀಯರು ಮತ್ತು ತೃಣಮೂಲ ಪಕ್ಷಗಳು ಪ್ರಾಬಲ್ಯ ಹೊಂದಿರುವ ಬಂಗಾಳದಲ್ಲಿ ಬಿಜೆಪಿಗೆ ವೇಗ ನೀಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು.
ಮತ್ತಷ್ಟು ಓದಿ: ತಾಯಿಯ ಪ್ರಿಯಕರನಿಂದ ಬಾಲಕನ ಹತ್ಯೆ, ಸೂಟ್‌ಕೇಸ್‌ನಲ್ಲಿ ಶವ ಪತ್ತೆ
ಅವರ ನಾಯಕತ್ವದಲ್ಲಿ, 2019 ರ ಲೋಕಸಭಾ ಚುನಾವಣೆಯಲ್ಲಿ ಬಂಗಾಳದ 42 ಸ್ಥಾನಗಳಲ್ಲಿ 18 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತು. ನಂತರ ಘೋಷ್ ರಾಜ್ಯ ಬಿಜೆಪಿ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿದು ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷರಾದರು.
ದಿಲೀಪ್ ಘೋಷ್ ಅವರು ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯನ್ನು ಪ್ರಬಲ ಪ್ರತಿಪಕ್ಷವಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಖಡಕ್ ಭಾಷಣಗಳು ಮತ್ತು ದಿಟ್ಟ ನಡವಳಿಕೆಯಿಂದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವ ಘೋಷ್, ರಾಜಕೀಯದ ಜೊತೆಗೆ ತಮ್ಮ ವೈಯಕ್ತಿಕ ಜೀವನದಲ್ಲೂ ಗಮನಾರ್ಹ ನಿರ್ಧಾರ ಕೈಗೊಂಡಿದ್ದಾರೆ.
ಇನ್ನು ಈ ವಿವಾಹವು ದಿಲೀಪ್ ಘೋಷ್ ಅವರ ವೈಯಕ್ತಿಕ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರುತ್ತದೆ ಏಕೆಂದರೆ ಅವರು ಇಲ್ಲಿಯವರೆಗೆ ಅವಿವಾಹಿತರಾಗಿದ್ದಾರೆ.
ಅವರ ಪುತ್ರ ಕೋಲ್ಕತ್ತಾದ ಸಾಲ್ಟ್ ಲೇಕ್‌ನ ಐಟಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ, 2021ರ ಚುನಾವಣೆಯ ಸಂದರ್ಭದಲ್ಲಿ ದಿಲೀಪ್ ಘೋಷ್ ಮತ್ತು ರಿಂಕು ಅವರ ಸಂಬಂಧ ಆರಂಭವಾಯಿತು ಎನ್ನಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ