ಛತ್ತೀಸ್‌ಗಢದಲ್ಲಿ ಬೆಟ್ಟಕ್ಕೆ ಡಿಕ್ಕಿಯಾಗಿ ವಿಮಾನ ಪತನ; ಇಬ್ಬರು ಪೈಲಟ್​ ಸಾವು

ಛತ್ತೀಸ್​ಗಢದ ಜಶ್‌ಪುರದಲ್ಲಿ ಭೀಕರ ವಿಮಾನ ಅಪಘಾತ ನಡೆದಿದೆ. ಇಲ್ಲಿನ ಬೆಟ್ಟದ ಇಳಿಜಾರಿನಲ್ಲಿ ಖಾಸಗಿ ಜೆಟ್ ಡಿಕ್ಕಿ ಹೊಡೆದುಪತನವಾಗಿದೆ. ಈ ವಿಮಾನದೊಳಗಿದ್ದ ಪೈಲಟ್ ಮತ್ತು ಸಹ ಪೈಲಟ್ ಸಾವನ್ನಪ್ಪಿದ್ದಾರೆ. ಅರಣ್ಯ ಪ್ರದೇಶದಲ್ಲಿ ಮರಕ್ಕೆ ಡಿಕ್ಕಿ ಹೊಡೆದ ನಂತರ ಜೆಟ್ ಪತನಗೊಂಡಿದೆ ಎನ್ನಲಾಗಿದೆ. ಜಶ್ಪುರ್-ನಾರಾಯಣಪುರ್ ಪ್ರದೇಶದ ಬೆಟ್ಟದ ಇಳಿಜಾರಿನಲ್ಲಿ ಅಪಘಾತಕ್ಕೀಡಾದ ಜೆಟ್‌ನಿಂದ ದಟ್ಟವಾದ ಹೊಗೆ ಮತ್ತು ಜ್ವಾಲೆಗಳು ಕಾಣಿಸಿಕೊಂಡ ದೃಶ್ಯಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಛತ್ತೀಸ್‌ಗಢದಲ್ಲಿ ಬೆಟ್ಟಕ್ಕೆ ಡಿಕ್ಕಿಯಾಗಿ ವಿಮಾನ ಪತನ; ಇಬ್ಬರು ಪೈಲಟ್​ ಸಾವು
Chhattisgarh Plane Crash

Updated on: Apr 20, 2026 | 6:11 PM

ಜಶ್​ಪುರ, ಏಪ್ರಿಲ್ 20: ಛತ್ತೀಸ್‌ಗಢದ ಜಶ್‌ಪುರ ಜಿಲ್ಲೆಯಲ್ಲಿ ಇಂದು ಖಾಸಗಿ ವಿಮಾನವೊಂದು ಪತನಗೊಂಡಿದ್ದು (Plane Crash), ಇಬ್ಬರು ಪೈಲಟ್ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಜಶ್‌ಪುರ-ನಾರಾಯಣಪುರ ಪ್ರದೇಶದ ಅರಾ ಬೆಟ್ಟದ ಇಳಿಜಾರಿನಲ್ಲಿ ಪತನಗೊಂಡ ಜೆಟ್‌ನಿಂದ ದಟ್ಟವಾದ ಹೊಗೆ ಮತ್ತು ಜ್ವಾಲೆಗಳು ಕಾಣಿಸಿಕೊಂಡಿವೆ. ಈ ವಿಮಾನದಲ್ಲಿ ಎಷ್ಟು ಮಂದಿ ಇದ್ದರು ಎಂಬುದು ಇನ್ನೂ ಖಚಿತವಾಗಿಲ್ಲ.

ಜಶ್ಪುರ್-ನಾರಾಯಣಪುರ್ ಪ್ರದೇಶದ ಬೆಟ್ಟದ ಇಳಿಜಾರಿನಲ್ಲಿ ಅಪಘಾತಕ್ಕೀಡಾದ ಜೆಟ್‌ನಿಂದ ದಟ್ಟವಾದ ಹೊಗೆ ಮತ್ತು ಜ್ವಾಲೆಗಳು ಕಾಣಿಸಿಕೊಂಡ ದೃಶ್ಯಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಘಟನೆಯ ನಂತರ ಪೊಲೀಸರು ಮತ್ತು ಆಡಳಿತ ತಂಡಗಳು ಸ್ಥಳಕ್ಕೆ ಧಾವಿಸಿವೆ. ರಕ್ಷಣಾ ಕಾರ್ಯಾಚರಣೆ ನಡೆದಿದೆ.

ಇದನ್ನೂ ಓದಿ: ‘ಅದು ಕೊನೆಯ ಸಂದೇಶ’: ವಿಮಾನದೊಳಗೆ ನಡೆದಿದ್ದೇನು? ಸ್ಫೋಟಕ ಹೇಳಿಕೆ ನೀಡಿದ ಪ್ರಯಾಣಿಕ

ಈ ವಿಮಾನವು ಅರಾ ಬೆಟ್ಟಕ್ಕೆ ಡಿಕ್ಕಿ ಹೊಡೆದ ನಂತರ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಆರಂಭಿಕ ವರದಿಗಳ ಪ್ರಕಾರ, ಘಟನೆಯಲ್ಲಿ ಪೈಲಟ್ ಮತ್ತು ಸಹ-ಪೈಲಟ್ ಇಬ್ಬರೂ ಸಾವನ್ನಪ್ಪಿದ್ದಾರೆ. ಅಪಘಾತದ ಸಮಯದಲ್ಲಿ ವಿಮಾನದಲ್ಲಿ ಬೇರೆ ಯಾವುದೇ ಪ್ರಯಾಣಿಕರು ಇದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.


ಎನ್‌ಡಿಟಿವಿ ವರದಿಯ ಪ್ರಕಾರ, ಖುರಾಸಗರ್ಹ ಗ್ರಾಮದ ಬಳಿಯ ರತನ್‌ಪಹ್ಲಿ ಕಾಡಿನಲ್ಲಿ ಈ ಘಟನೆ ಸಂಭವಿಸಿದೆ. ಈ ವಿಮಾನ ನೆಲದಿಂದ ಸುಮಾರು 30 ಅಡಿ ಎತ್ತರದಲ್ಲಿ ಹಾರುತ್ತಿತ್ತು. ಮೃತಪಟ್ಟ ಪೈಲಟ್​ಗಳ ಗುರುತುಗಳು ಇನ್ನೂ ಬಹಿರಂಗಗೊಂಡಿಲ್ಲ. ಸ್ಥಳೀಯ ಪೊಲೀಸರು ಮೃತದೇಹಗಳನ್ನು ವಶಪಡಿಸಿಕೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:35 pm, Mon, 20 April 26

Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us