ಹೈದರಾಬಾದ್ ನಲ್ಲಿ ಅಪರೂಪದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಹಾನಗರದ ಕೆಬಿಆರ್ ಪಾರ್ಕ್‌ನಲ್ಲಿ ನಿಜಾಮರ ಕಾಲದ ಪೆಟ್ರೋಲ್ ಪಂಪ್ ಪತ್ತೆಯಾಗಿದೆ! ಉದ್ಯಾನದಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಅದನ್ನು ಗಮನಿಸಿದ್ದಾರೆ. ಅವರು ಪೆಟ್ರೋಲ್ ಬಂಕ್‌ನ ಫೋಟೋಗಳನ್ನು (Hyderabad Nizam Private Petrol Pump) ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ಅದು ವೈರಲ್ ಆಗಿದೆ. ಇಷ್ಟು ವರ್ಷ ಗಿಡ ಮರಗಳ ಮಧ್ಯೆ ಮರೆಯಾಗಿದ್ದ ಈ ಪೆಟ್ರೋಲ್ ಪಂಪ್ ಬೇಸಿಗೆ ಬಂದಾಗ… ಆ ಗಿಡಮರಗಳು ಒಣಗಿದಾಗ ಅದು ಪತ್ತೆಯಾಗಿದೆ.
ನಿಜಾಮ ತನ್ನ ಕಾರುಗಳು, ಮೋಟಾರು ಯಂತ್ರಗಳು ಮತ್ತು ಇತರ ವಾಹನಗಳಿಗೆ ಇಂಧನ ತುಂಬಲು ಇದನ್ನು ಬಳಸುತ್ತಿದ್ದ ಎಂದು ಹೇಳಲಾಗುತ್ತದೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಕೆಬಿಆರ್ ಪಾರ್ಕ್‌ಗೆ (Kasu Brahmananda Reddy National Park) ಬರುವ ಜನರು ಪೆಟ್ರೋಲ್ ಪಂಪ್ ನೋಡಲು ಆಸಕ್ತಿ ತೋರುತ್ತಿದ್ದಾರೆ. ಮೀರ್ ಉಸ್ಮಾನ್ ಅಲಿ ಖಾನ್ ಎಂಬಾತ ಹೈದರಾಬಾದ್ ರಾಜ್ಯವನ್ನು ಆಳಿದ ಕೊನೆಯ ನವಾಬ. ಆ ಸಮಯದಲ್ಲಿ ಅವರು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಗುರುತಿಸಲ್ಪಟ್ಟಿದ್ದರು.
#Hyderabad#Facebook user #RajusAlluri had shared info about a personal petrol pump/filling station of #Nizam of #Hyderabad for his fleet of cars, trucks & other machinery in #KBRPark, unnoticed & hidden in thick foliage!#ChiranFortPalace@syedurahman @HiHyderabad @stoppression pic.twitter.com/wyGYhWRUI0
— Muzzammil KhanⓂ️ مزمل خان (@MohdMuzzammilK) February 23, 2024
ಹೈದರಾಬಾದ್‌ನಲ್ಲಿರುವ ಕೆಬಿಆರ್ ರಾಷ್ಟ್ರೀಯ ಉದ್ಯಾನವನವು 142.5 ಹೆಕ್ಟೇರ್ ಪ್ರದೇಶವನ್ನು ಒಳಗೊಂಡಿದೆ. ಮೊದಲು ಇದನ್ನು ಜುಬಿಲಿ ಹಿಲ್ಸ್ ಫಾರೆಸ್ಟ್ ಬ್ಲಾಕ್ ಎಂದು ಕರೆಯಲಾಗುತ್ತಿತ್ತು.
ಇದನ್ನೂ ಓದಿ: ಭಾರತದ ಟಾಪ್ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಮೋದಿ ನಂಬರ್ 1, ಟಾಪ್ 10 ರಲ್ಲಿ ಸಿಜೆಐ ಚಂದ್ರಚೂಡ್
ಈ ಹಿಂದೆ ಹೈದರಾಬಾದ್ ನಿಜಾಮ್ ಒಡೆತನದಲ್ಲಿದ್ದ ಈ ಉದ್ಯಾನವನವನ್ನು ನಗರ ಭೂ ಸೀಲಿಂಗ್ ಕಾಯ್ದೆಯಡಿ ಸರ್ಕಾರ ಸ್ವಾಧೀನಪಡಿಸಿಕೊಂಡಿತು. ಆದರೆ, 2.4 ಹೆಕ್ಟೇರ್ ಭೂಮಿಯನ್ನು ನಿಜಾಮರ ಕುಟುಂಬ ಇಟ್ಟುಕೊಳ್ಳಲು ಅವಕಾಶ ಮಾಡಿಕೊಟ್ಟಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:12 pm, Thu, 29 February 24