UPಗೆ ತೆರಳುತ್ತಿದ್ದ ಪ್ರಿಯಾಂಕಾ, ರಾಹುಲ್ ಗಾಂಧಿ ಪೊಲೀಸರ ವಶಕ್ಕೆ

|

Updated on: Oct 01, 2020 | 4:03 PM

ಲಖನೌ: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದಿದ್ದ ಗ್ಯಾಂಗ್‌ ರೇಪ್ ಪ್ರಕರಣಕ್ಕೆ ಸಂಬಂಧಿಸಿ ಇಂದು ಹತ್ರಾಸ್​ಗೆ ತೆರಳುತ್ತಿದ್ದ AICC ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾರನ್ನು ರಾಜ್ಯದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹತ್ರಾಸ್‌ನಲ್ಲಿ ನಡೆದಿದ್ದ ದಲಿತ ಯುವತಿಯ ಮೇಲೆ ಗ್ಯಾಂಗ್‌ ರೇಪ್ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ ಇಂದು ರಾಹುಲ್​ ಮತ್ತು ಪ್ರಿಯಾಂಕಾ ಸಂತ್ರಸ್ತೆಯ ಕುಟುಂಬಸ್ಥರನ್ನು ಭೇಟಿಯಾಗುವುದಕ್ಕೆ ದೆಹಲಿಯಿಂದ ಹತ್ರಾಸ್​ಗೆ ತೆರಳುತ್ತಿದ್ದರು. ಇದೇ ವೇಳೆ ಇಬ್ಬರನ್ನೂ ಉತ್ತರ ಪ್ರದೇಶದ ಪೊಲೀಸರು ರಾಜ್ಯದಲ್ಲಿರುವ ಯಮುನಾ ಎಕ್ಸ್‌ಪ್ರೆಸ್​ ವೇ ಮೇಲೆ […]

UPಗೆ ತೆರಳುತ್ತಿದ್ದ ಪ್ರಿಯಾಂಕಾ, ರಾಹುಲ್ ಗಾಂಧಿ ಪೊಲೀಸರ ವಶಕ್ಕೆ
Follow us on

ಲಖನೌ: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದಿದ್ದ ಗ್ಯಾಂಗ್‌ ರೇಪ್ ಪ್ರಕರಣಕ್ಕೆ ಸಂಬಂಧಿಸಿ ಇಂದು ಹತ್ರಾಸ್​ಗೆ ತೆರಳುತ್ತಿದ್ದ AICC ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾರನ್ನು ರಾಜ್ಯದ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹತ್ರಾಸ್‌ನಲ್ಲಿ ನಡೆದಿದ್ದ ದಲಿತ ಯುವತಿಯ ಮೇಲೆ ಗ್ಯಾಂಗ್‌ ರೇಪ್ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ ಇಂದು ರಾಹುಲ್​ ಮತ್ತು ಪ್ರಿಯಾಂಕಾ ಸಂತ್ರಸ್ತೆಯ ಕುಟುಂಬಸ್ಥರನ್ನು ಭೇಟಿಯಾಗುವುದಕ್ಕೆ ದೆಹಲಿಯಿಂದ ಹತ್ರಾಸ್​ಗೆ ತೆರಳುತ್ತಿದ್ದರು.

ಇದೇ ವೇಳೆ ಇಬ್ಬರನ್ನೂ ಉತ್ತರ ಪ್ರದೇಶದ ಪೊಲೀಸರು ರಾಜ್ಯದಲ್ಲಿರುವ ಯಮುನಾ ಎಕ್ಸ್‌ಪ್ರೆಸ್​ ವೇ ಮೇಲೆ ತಡೆದರು. ಕೂಡಲೇ ವಾಹನದಿಂದ ಇಳಿದ ರಾಹುಲ್​ ಮತ್ತು ಪ್ರಿಯಾಂಕಾ ಕಾರ್ಯಕರ್ತರ ಜೊತೆ ಪಾದಯಾತ್ರೆಯ ಮೂಲಕ ತೆರಳಲು ಮುಂದಾದರು. ಇದೇ ವೇಳೆ ಪೊಲೀಸರು ಅವರಿಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಇದೇ ವೇಳೆ ರಾಹುಲ್​ ಗಾಂಧಿ ನಾನು ಹತ್ರಾಸ್​ಗೆ ಒಬ್ಬನೇ ಕಾಲ್ನಡಿಗೆಯಲ್ಲಿ ಹೋಗಲು ಬಯಸುತ್ತೇನೆ. ಆದರೆ, ನನ್ನನ್ನ ಯಾವ ಸೆಕ್ಷನ್​ ಅಡಿಯಲ್ಲಿ ನೀವು ವಶಕ್ಕೆ ಪಡೆಯುತ್ತಿದ್ದೀರಾ ಎಂದು ಪ್ರಶ್ನಿಸಿದರು. ಆಗ ಪೊಲೀಸರು ನಿಮ್ಮನ್ನು IPC ಸೆಕ್ಷನ್​ 188 ಅಡಿಯಲ್ಲಿ ವಶಕ್ಕೆ ಪಡೆಯುತ್ತಿದ್ದೇವೆ ಎಂದು ಹೇಳಿದರು.

Published On - 3:30 pm, Thu, 1 October 20