AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಮೋದಿಗಾಗಿಯೇ ಸಿದ್ಧವಾಯ್ತು ಸ್ಪೆಷಲ್ ವಿಮಾನ, ‘ಬೋಯಿಂಗ್‌‌ 777’ ಸ್ಪೆಷಾಲಿಟಿ ಏನು?

ದೆಹಲಿ: ರಫೇಲ್ ನಂತರ ಭಾರತದ ಆಗಸದಲ್ಲಿ ಗುಡುಗಲು ಮತ್ತೊಂದು ಲೋಹದ ಹಕ್ಕಿ ಭಾರತಕ್ಕೆ ಎಂಟ್ರಿ ಕೊಟ್ಟಿದೆ. ಆದರೆ ಈ ಬಾರಿ ಲೋಹದ ಹಕ್ಕಿ ಭಾರತೀಯ ವಾಯುಪಡೆ ಪರ ಘರ್ಜಿಸುವುದಿಲ್ಲ, ಬದಲಾಗಿ ಪಿಎಂ ಮೋದಿ ಅವರಿಗಾಗಿ ಎಂಟ್ರಿ ಕೊಟ್ಟಿದೆ. ಈವರೆಗೂ ಕಾಣದ ಅತ್ಯಾಧುನಿಕ ಭದ್ರತೆಯನ್ನು ಈ ಹೊಸ ವಿಮಾನ ಹೊಂದಿದೆ. ಭಾರತ ಬದಲಾಗುತ್ತಿದೆ, ದೇಶದ ಶಕ್ತಿಶಾಲಿ ರಾಷ್ಟ್ರವಾಗುತ್ತಿರುವ ಭಾರತದ ಪ್ರಧಾನಿಗೆ ಅತ್ಯಾಧುನಿಕ ತಂತ್ರಜ್ಞಾನದ ವಿಮಾನ ಅತ್ಯಗತ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಅಳೆದು ತೂಗಿ ಒಂದು ಅತ್ಯುತ್ತಮವಾದ ವಿಮಾನವನ್ನು ಪ್ರಧಾನಿಗಾಗಿ ತಯಾರು […]

ಪ್ರಧಾನಿ ಮೋದಿಗಾಗಿಯೇ ಸಿದ್ಧವಾಯ್ತು ಸ್ಪೆಷಲ್ ವಿಮಾನ, ‘ಬೋಯಿಂಗ್‌‌ 777’ ಸ್ಪೆಷಾಲಿಟಿ ಏನು?
ಆಯೇಷಾ ಬಾನು
|

Updated on: Oct 02, 2020 | 7:17 AM

Share

ದೆಹಲಿ: ರಫೇಲ್ ನಂತರ ಭಾರತದ ಆಗಸದಲ್ಲಿ ಗುಡುಗಲು ಮತ್ತೊಂದು ಲೋಹದ ಹಕ್ಕಿ ಭಾರತಕ್ಕೆ ಎಂಟ್ರಿ ಕೊಟ್ಟಿದೆ. ಆದರೆ ಈ ಬಾರಿ ಲೋಹದ ಹಕ್ಕಿ ಭಾರತೀಯ ವಾಯುಪಡೆ ಪರ ಘರ್ಜಿಸುವುದಿಲ್ಲ, ಬದಲಾಗಿ ಪಿಎಂ ಮೋದಿ ಅವರಿಗಾಗಿ ಎಂಟ್ರಿ ಕೊಟ್ಟಿದೆ. ಈವರೆಗೂ ಕಾಣದ ಅತ್ಯಾಧುನಿಕ ಭದ್ರತೆಯನ್ನು ಈ ಹೊಸ ವಿಮಾನ ಹೊಂದಿದೆ.

ಭಾರತ ಬದಲಾಗುತ್ತಿದೆ, ದೇಶದ ಶಕ್ತಿಶಾಲಿ ರಾಷ್ಟ್ರವಾಗುತ್ತಿರುವ ಭಾರತದ ಪ್ರಧಾನಿಗೆ ಅತ್ಯಾಧುನಿಕ ತಂತ್ರಜ್ಞಾನದ ವಿಮಾನ ಅತ್ಯಗತ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಅಳೆದು ತೂಗಿ ಒಂದು ಅತ್ಯುತ್ತಮವಾದ ವಿಮಾನವನ್ನು ಪ್ರಧಾನಿಗಾಗಿ ತಯಾರು ಮಾಡಲಾಗಿದ್ದು, ನಿನ್ನೆ ಭಾರತಕ್ಕೆ ಬಂದಿಳಿದಿದೆ.

ಅಂದಹಾಗೆ ಗಣ್ಯವಕ್ತಿಗಳು ಪ್ರಯಾಣಿಸುವುದಕ್ಕಾಗಿ ಭಾರತಕ್ಕೆ ಬಾಹುಬಲಿ ಕರೆಸಿಕೊಳ್ಳಲಾಗಿದೆ. ‘ಬೋಯಿಂಗ್‌‌ 777’ ವಿಮಾನ ಅಮೆರಿಕದಿಂದ ನಿನ್ನೆ ದೆಹಲಿಗೆ ಬಂದು ಇಳಿದಿದೆ. ಬಂದಿಳಿದಿರುವ ವಿಮಾನಕ್ಕೆ ಏರ್‌ ಇಂಡಿಯಾ ಒನ್ ಎಂದು ಹೆಸರಿಡಲಾಗಿದ್ದು ಅಮೆರಿಕದ ಟೆಕ್ಸಾಸ್‌ನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಅಮೇರಿಕಾದ ವಿಮಾನ ತಯಾರಕ ಕಂಪನಿ ಬೋಯಿಂಗ್‌ ಕಂಪನಿ ಈ ವಿಮಾನಗಳನ್ನು ಜುಲೈನಲ್ಲಿ ಏರ್ ಇಂಡಿಯಾ ಸಂಸ್ಥೆಗೆ ಹಸ್ತಾಂತರಿಸ ಬೇಕಿತ್ತು. ಕೊರೊನಾ ಲಾಕ್‌ಡೌನ್‌ ಕಾರಣದಿಂದಾಗಿ ವಿತರಣೆ ಎರಡು ಬಾರಿ ವಿಳಂಬವಾಗಿತ್ತು. ಇನ್ನು ಭಾರತಕ್ಕೆ ಬಂದಿರುವ ಪ್ರಧಾನಿ ಮೋದಿ‌ ಸಂಚರಿಸುವ ವಿಮಾನದ ವಿಶೇಷ ಏನು ಅನ್ನೋದನ್ನ ನೋಡೊದಾದ್ರೆ.

‘ಬೋಯಿಂಗ್‌‌ 777’ ಸ್ಪೆಷಾಲಿಟಿ! ಹೊಸ ವಿಮಾನಕ್ಕೆ ‘ಏರ್‌ ಇಂಡಿಯಾ ಒನ್’ ಎಂದು ಹೆಸರಿಡಲಾಗಿದೆ. ಭಾರಿ ವೆಚ್ಚಮಾಡಿ ತರಿಸಿರುವ ಈ ವಿಮಾನದ ಬೆಲೆ ₹8600 ಕೋಟಿಯಷ್ಟವಾಗಿದೆ. ಈ ಅತ್ಯಾಧುನಿಕ ವಿಮಾನಕ್ಕೆ ಕ್ಷಿಪಣಿ ದಾಳಿ ತಡೆಯುವ ವ್ಯವಸ್ಥೆ ಇದ್ದು ರಾಡಾರ್‌ ತಟಸ್ಥಗೊಳಿಬಲ್ಲದು. 17 ಗಂಟೆ ವಿಶ್ರಾಂತಿಇಲ್ಲದೆ ಹಾರಾಟ ನಡೆಸುವ ಸಾಮರ್ಥ್ಯ ಈ ವಿಮಾನಕ್ಕಿದೆ. ‘ಬೋಯಿಂಗ್ 777-300 ER’ ಪೈಕಿ ಮತ್ತೊಂದು ವಿಮಾನ ಸದ್ಯದಲ್ಲೇ ಬರಲಿದೆ. 1 ಪ್ರಧಾನಿ ಮೋದಿಗೆ ಹಾಗೂ ಇನ್ನೊಂದನ್ನು ರಾಷ್ಟ್ರಪತಿಯ ಓಡಾಟಕ್ಕೆ ಮೀಸಲು ಇಡಲಾಗಿದೆ. ಇನ್ನು ಈ 2 ಹೊಸ ವಿಮಾನಗಳನ್ನು ಅಮೆರಿಕದಲ್ಲಿ ತಯಾರು ಮಾಡಲಾಗಿದ್ದು, ಸಾಕಷ್ಟು ಆಧುನಿಕ ತಂತ್ರಜ್ಞಾನವನ್ನು ವಿಮಾನದಲ್ಲಿ ಅಳವಡಿಸಲಾಗಿದೆ.

ಪ್ರಧಾನಿ ತೆರಳುವ ವಿಮಾನವನ್ನು ನುರಿತ ಪೈಲಟ್‌ಗಳು ಇಲ್ಲಿಯವರೆಗೆ ಚಲಾಯಿಸಿರುವುದು ನೋಡಿದ್ದೇವೆ. ಆದರೆ ಏರ್​ ಇಂಡಿಯಾ ಒನ್ ವಿಮಾನಕ್ಕೆ ಭಾರತೀಯ ವಾಯುಪಡೆಯ ಪೈಲಟ್​ಗಳೇ ಪೈಲಟ್​ಗಳಾಗಿ ಇರಲಿದ್ದಾರೆ. ಒಟ್ಟಾರೆ ಹೊಸ ಅತ್ಯಾಧುನಿಕ ವಿಮಾನದ ಮೂಲಕ ಇಡೀ ಜಗತ್ತಿನ ಕಣ್ಣು ಭಾರತದ ಮೇಲೆ ಬಿದ್ದಿದೆ.