ಲಕ್ಷ್ಯವಿಲ್ಲ ಕೊರೊನಾ ಬಗ್ಗೆ.. ಸಾವನ್ನಪ್ಪಿದವರ ಸಂಖ್ಯೆ ಒಂದು ಲಕ್ಷದತ್ತ
ದೆಹಲಿ: ಅನ್ಲಾಕ್ 5.0ನ ಮಾರ್ಗಸೂಚಿ ಬಿಡುಗಡೆಯಾದ ಬಳಿಕ ಹಲವು ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ. ಈ ನಡುವೆ ದೇಶದಲ್ಲಿ ಸೋಂಕಿತರ ಸಂಖ್ಯೆ 64ಲಕ್ಷದ ಹತ್ತಿರ ಬಂದು ತಲುಪಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 81,484 ಜನರಿಗೆ ಕೊರೊನಾ ಪಾಸಿಟಿವ್ ವರದಿಯಾಗಿದೆ. ಜೊತೆಗೆ, 1,095 ಜನರು ಸೋಂಕಿಗೆ ಕೊನೆಯುಸಿರೆಳೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಲಕ್ಷ್ಯವಿಲ್ಲ ಕೊರೊನಾ ಬಗ್ಗೆ.. ಭಾರತದಲ್ಲಿ ಇದೀಗ ಒಟ್ಟು ಸೋಂಕಿತರ ಸಂಖ್ಯೆ 63,94,069ಗೆ ತಲುಪಿದೆ. ಇದರಲ್ಲಿ, 9,42,217 ಸಕ್ರಿಯ ಪ್ರಕರಣಗಳು […]
ದೆಹಲಿ: ಅನ್ಲಾಕ್ 5.0ನ ಮಾರ್ಗಸೂಚಿ ಬಿಡುಗಡೆಯಾದ ಬಳಿಕ ಹಲವು ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ. ಈ ನಡುವೆ ದೇಶದಲ್ಲಿ ಸೋಂಕಿತರ ಸಂಖ್ಯೆ 64ಲಕ್ಷದ ಹತ್ತಿರ ಬಂದು ತಲುಪಿದೆ.
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 81,484 ಜನರಿಗೆ ಕೊರೊನಾ ಪಾಸಿಟಿವ್ ವರದಿಯಾಗಿದೆ. ಜೊತೆಗೆ, 1,095 ಜನರು ಸೋಂಕಿಗೆ ಕೊನೆಯುಸಿರೆಳೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಲಕ್ಷ್ಯವಿಲ್ಲ ಕೊರೊನಾ ಬಗ್ಗೆ.. ಭಾರತದಲ್ಲಿ ಇದೀಗ ಒಟ್ಟು ಸೋಂಕಿತರ ಸಂಖ್ಯೆ 63,94,069ಗೆ ತಲುಪಿದೆ. ಇದರಲ್ಲಿ, 9,42,217 ಸಕ್ರಿಯ ಪ್ರಕರಣಗಳು ಇದೆ. ಜೊತೆಗೆ, ದೇಶದಲ್ಲಿ ಕೊರೊನಾಗೆ ಸಾವನ್ನಪ್ಪಿರೋರ ಸಂಖ್ಯೆ ಒಂದು ಲಕ್ಷದತ್ತ ತಲುಪಿದ್ದು 99,773 ಎಂದು ವರದಿಯಾಗಿದೆ.