ದೆಹಲಿಯ ಸರ್ಕಾರಿ ಶಾಲೆಯ ಗೋಡೆ ಮೇಲೆ ಖಲಿಸ್ತಾನ ಪರ ಬರಹ

|

Updated on: Jan 19, 2024 | 2:56 PM

ದೆಹಲಿಯ ಉತ್ತಮ್​ನಗರದಲ್ಲಿರುವ ಸರ್ಕಾರಿ ಶಾಲೆಯ ಗೋಡೆಯ ಮೇಲೆ ಖಲಿಸ್ತಾನ(Khalistan) ಪರ ಬರಹಗಳು ಪತ್ತೆಯಾಗಿವೆ. ಪ್ರತ್ಯೇಕತಾವಾದಿ ಖಲಿಸ್ತಾನ್ ಆಂದೋಲನವನ್ನು ಬೆಂಬಲಿಸುವ ಘೋಷಣೆಗಳನ್ನು ಶಾಲೆಯ ಗೋಡೆಯ ಮೇಲೆ ಬರೆಯಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಎಸ್​ಜೆಎಫ್​, ಖಲಿಸ್ತಾನ ಒಳಗೊಂಡಿರುವ ಬರಹವು ಖಲಿಸ್ತಾನಿ ಉಗ್ರ ಮತ್ತು ನಿಷೇಧಿತ ಸಂಘಟನೆಯಾಗಿರುವ ಸಿಖ್ಸ್ ಫಾರ್ ಜಸ್ಟೀಸ್ (SFJ) ನ ನಾಯಕ ಗುರುಪತ್ವಂತ್​ ಸಿಂಗ್ ಪನ್ನುಗೆ ಸಂಬಂಧಿಸಿದೆ.

ದೆಹಲಿಯ ಸರ್ಕಾರಿ ಶಾಲೆಯ ಗೋಡೆ ಮೇಲೆ ಖಲಿಸ್ತಾನ ಪರ ಬರಹ
ಖಲಿಸ್ತಾನಿ ಪರ ಬರಹ
Image Credit source: India Today
Follow us on

ದೆಹಲಿಯ ಉತ್ತಮ್​ನಗರದಲ್ಲಿರುವ ಸರ್ಕಾರಿ ಶಾಲೆಯ ಗೋಡೆಯ ಮೇಲೆ ಖಲಿಸ್ತಾನ(Khalistan) ಪರ ಬರಹಗಳು ಪತ್ತೆಯಾಗಿವೆ. ಪ್ರತ್ಯೇಕತಾವಾದಿ ಖಲಿಸ್ತಾನ್ ಆಂದೋಲನವನ್ನು ಬೆಂಬಲಿಸುವ ಘೋಷಣೆಗಳನ್ನು ಶಾಲೆಯ ಗೋಡೆಯ ಮೇಲೆ ಬರೆಯಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಎಸ್​ಜೆಎಫ್​, ಖಲಿಸ್ತಾನ ಒಳಗೊಂಡಿರುವ ಬರಹವು ಖಲಿಸ್ತಾನಿ ಉಗ್ರ ಮತ್ತು ನಿಷೇಧಿತ ಸಂಘಟನೆಯಾಗಿರುವ ಸಿಖ್ಸ್ ಫಾರ್ ಜಸ್ಟೀಸ್ (SFJ) ನ ನಾಯಕ ಗುರುಪತ್ವಂತ್​ ಸಿಂಗ್ ಪನ್ನುಗೆ ಸಂಬಂಧಿಸಿದೆ.

ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದಲ್ಲಿ ಪೌರತ್ವವನ್ನು ಹೊಂದಿರುವ ಪನ್ನು ಅವರನ್ನು ಭಾರತವು ಆಂತರಿಕ ಭಯೋತ್ಪಾದಕ ಎಂದು ಹೇಳಿದೆ.

ಪನ್ನು ಗಣರಾಜ್ಯೋತ್ಸವದಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ.

ಜನವರಿ 26 ರಂದು ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಮಂತ್ರಿಯ ಮೇಲೆ ಗ್ಯಾಂಗ್​ಸ್ಟರ್​ಗಳೆಲ್ಲಾ ಸೇರಿ ದಾಳಿ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಮತ್ತಷ್ಟು ಓದಿ: ಗಣರಾಜ್ಯೋತ್ಸವದಂದು ಪಂಜಾಬ್ ಸಿಎಂ ಭಗವಂತ್ ಮಾನ್​ರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ ಉಗ್ರ ಗುರು ಪತ್ವಂತ್​ಸಿಂಗ್ ಪನ್ನು

ಕಳೆದ ಜೂನ್‌ನಲ್ಲಿ ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ಮತ್ತೊಬ್ಬ ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ನಂತರ ಇದೀಗ ಅಮೆರಿಕದಲ್ಲಿ ಪನ್ನು ಹತ್ಯೆಯ ಸಂಚು ವಿಫಲವಾಗಿರುವುದಾಗಿ ವರದಿಯಾಗಿದೆ. ನಿಜ್ಜರ್ ಹತ್ಯೆಯ ನಂತರ ಅಲ್ಲಿನ ಅಂದರೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಹತ್ಯೆಯಲ್ಲಿ ಭಾರತ ಸರ್ಕಾರ ಭಾಗಿಯಾಗಿದೆ ಎಂದು ಆರೋಪಿಸಿದ್ದರು.

ರಾಮ ಮಂದಿರ ಶಂಕು ಸ್ಥಾಪನೆ ಕುರಿತು ಪನ್ನು ಹೇಳಿಕೆ ನೀಡಿದ್ದ ಒಂದು ವಾರದ ಬಳಿಕ ಹೇಳಿಕೆ ಬಂದಿದೆ.ರಾಮಮಂದಿರದಲ್ಲಿ ನಡೆಯುವ ಮಹಾಮಸ್ತಕಾಭಿಷೇಕ ಸಮಾರಂಭವು ಅತ್ಯಂತ ಅಪವಿತ್ರ, ಭಕ್ತಿಹೀನ, ಅನ್ಯಾಯದ ಸಮಾರಂಭವಾಗಿದೆ ಎಂದು ಹೇಳಿದ್ದ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:55 pm, Fri, 19 January 24