AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಪುಣೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ: 65 ವರ್ಷದ ಆರೋಪಿಗಿದೆ ಕ್ರಿಮಿನಲ್ ಹಿನ್ನೆಲೆ

ಪುಣೆ ಜಿಲ್ಲೆಯಲ್ಲಿ ನಾಲ್ಕು ವರ್ಷದ ಪುಟ್ಟ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಂದ ಆರೋಪದ ಮೇಲೆ ಬಂಧಿತನಾಗಿರುವ 65 ವರ್ಷದ ವ್ಯಕ್ತಿಯ ಕರಾಳ ಮುಖ ಈಗ ಬೆಳಕಿಗೆ ಬಂದಿದೆ. ಈತ ಕೇವಲ ಆಕಸ್ಮಿಕವಾಗಿ ಅಪರಾಧವೆಸಗಿದ್ದಲ್ಲ, ಬದಲಿಗೆ ದಶಕಗಳಿಂದ ಲೈಂಗಿಕ ಅಪರಾಧಗಳಲ್ಲಿ ತೊಡಗಿದ್ದವನು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. 1998ರಲ್ಲಿ ಆರೋಪಿಯ ವಿರುದ್ಧ ಮೊದಲ ಬಾರಿಗೆ ಲೈಂಗಿಕ ಕಿರುಕುಳದ ಪ್ರಕರಣ ದಾಖಲಾಗಿತ್ತು, 2015ರಲ್ಲಿ ಲೈಂಗಿಕ ಕಿರುಕುಳ ಮತ್ತು ಕೊಲೆಯತ್ನದ ಮತ್ತೊಂದು ಪ್ರಕರಣ ದಾಖಲಾಗಿತ್ತು.

Video: ಪುಣೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ:  65 ವರ್ಷದ ಆರೋಪಿಗಿದೆ ಕ್ರಿಮಿನಲ್ ಹಿನ್ನೆಲೆ
ಕ್ರೈಂ
ನಯನಾ ರಾಜೀವ್
|

Updated on: May 03, 2026 | 11:25 AM

Share

ಪುಣೆ, ಮೇ 03: ಪುಣೆ ಜಿಲ್ಲೆಯಲ್ಲಿ ನಾಲ್ಕು ವರ್ಷದ ಪುಟ್ಟ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಂದ ಆರೋಪದ ಮೇಲೆ ಬಂಧಿತನಾಗಿರುವ 65 ವರ್ಷದ ವ್ಯಕ್ತಿಯ ಕರಾಳ ಮುಖ ಈಗ ಬೆಳಕಿಗೆ ಬಂದಿದೆ. ಈತ ಕೇವಲ ಆಕಸ್ಮಿಕವಾಗಿ ಅಪರಾಧವೆಸಗಿದ್ದಲ್ಲ, ಬದಲಿಗೆ ದಶಕಗಳಿಂದ ಲೈಂಗಿಕ ಅಪರಾಧಗಳಲ್ಲಿ ತೊಡಗಿದ್ದವನು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

1998ರಲ್ಲಿ ಆರೋಪಿಯ ವಿರುದ್ಧ ಮೊದಲ ಬಾರಿಗೆ ಲೈಂಗಿಕ ಕಿರುಕುಳದ ಪ್ರಕರಣ ದಾಖಲಾಗಿತ್ತು, 2015ರಲ್ಲಿ ಲೈಂಗಿಕ ಕಿರುಕುಳ ಮತ್ತು ಕೊಲೆಯತ್ನದ ಮತ್ತೊಂದು ಪ್ರಕರಣ ದಾಖಲಾಗಿತ್ತು. 2015 ರಲ್ಲಿ ಪಕ್ಕದ ಮನೆ ಹುಡುಗಿಯ ಮೇಲೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಆರೋಪದ ಮೇಲೆ ಪೋಕ್ಸೊ (POCSO) ಕಾಯ್ದೆಯಡಿ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು.

ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ 1998 ಮತ್ತು 2015ರ ಎರಡೂ ಪ್ರಕರಣಗಳಲ್ಲಿ ಈತ ನ್ಯಾಯಾಲಯದಿಂದ ಖುಲಾಸೆಗೊಂಡಿದ್ದನು. 2019 ರಲ್ಲಿ ನ್ಯಾಯಾಲಯವು ಈತನನ್ನು ಮುಕ್ತಗೊಳಿಸಿತ್ತು, ಇದು ಈತನ ಕ್ರೂರ ಪ್ರವೃತ್ತಿ ಮುಂದುವರೆಯಲು ಕಾರಣವಾಯಿತು.

ಬಾಲಕಿ ನಾಪತ್ತೆಯಾದ ನಂತರ ಕುಟುಂಬದವರು ಹುಡುಕಾಟ ಆರಂಭಿಸಿದಾಗ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿವೆ. 36 ಸೆಕೆಂಡುಗಳ ಈ ವೀಡಿಯೊದಲ್ಲಿ, ಆರೋಪಿಯು ಮಗುವಿಗೆ ಆಮಿಷವೊಡ್ಡಿ ಗಲ್ಲಿಯೊಂದಕ್ಕೆ ಕರೆದೊಯ್ಯುತ್ತಿರುವುದು ಸ್ಪಷ್ಟವಾಗಿ ದಾಖಲಾಗಿದೆ. ಈ ಸಾಕ್ಷ್ಯದ ಆಧಾರದ ಮೇಲೆ ಪುಣೆ ಗ್ರಾಮೀಣ ಪೊಲೀಸರು ಮಾಹಿತಿ ಬಂದ ಒಂದು ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ್ದಾರೆ.

ಮತ್ತಷ್ಟು ಓದಿ: ಯಾರಿಗಾದರೂ ಹೇಳಿದ್ರೆ ಗಂಡ-ಮಗ ರಕ್ತ ಕಾರಿ ಸಾಯ್ತಾರೆ: ಮಾಟ-ಮಂತ್ರದ ಹೆಸರಲ್ಲಿ ಬ್ಯೂಟಿಷಿಯನ್ ಮೇಲೆ ಜ್ಯೋತಿಷಿಯಿಂದ ನಿರಂತರ ಅತ್ಯಾಚಾರ!

ಮಹಾರಾಷ್ಟ್ರ ಸರ್ಕಾರವು ಆರೋಪಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದೆ. ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು, ಆರೋಪಿಯನ್ನು ಗಲ್ಲಿಗೇರಿಸಲು ಅಗತ್ಯವಿರುವ ಭದ್ರವಾದ ಪುರಾವೆಗಳನ್ನು ಸಂಗ್ರಹಿಸುವಂತೆ ಪೊಲೀಸರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

ಪ್ರಕರಣದ ವಿಚಾರಣೆಯನ್ನು ತ್ವರಿತ ನ್ಯಾಯಾಲಯದಲ್ಲಿ (Fast-track Court) ನಡೆಸುವಂತೆ ಆದೇಶಿಸಲಾಗಿದೆ. ಪ್ರಸ್ತುತ, ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (BNS) ಮತ್ತು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಮೇ 7 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
RSS ಪಥಸಂಚಲನಕ್ಕೆ ಸಿದ್ಧತೆ: ಕೆಲವೆಡೆ ಷರತ್ತುಬದ್ಧ ಅನುಮತಿ; ಕೆಲವೆಡೆ ನಕಾರ
RSS ಪಥಸಂಚಲನಕ್ಕೆ ಸಿದ್ಧತೆ: ಕೆಲವೆಡೆ ಷರತ್ತುಬದ್ಧ ಅನುಮತಿ; ಕೆಲವೆಡೆ ನಕಾರ
‘ಪ್ರೇಮದ ಊರಲಿ’ ಸಿನಿಮಾ ಸಂಗೀತ ನಿರ್ದೇಶಕರಿಗೆ ಸಿಕ್ಕ ಸಂಭಾವನೆ ಎಷ್ಟು?
‘ಪ್ರೇಮದ ಊರಲಿ’ ಸಿನಿಮಾ ಸಂಗೀತ ನಿರ್ದೇಶಕರಿಗೆ ಸಿಕ್ಕ ಸಂಭಾವನೆ ಎಷ್ಟು?
ದೊಡ್ಡಬಳ್ಳಾಪುರ ಬೆನ್ನಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಲಘು ಭೂಕಂಪನ
ದೊಡ್ಡಬಳ್ಳಾಪುರ ಬೆನ್ನಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಲಘು ಭೂಕಂಪನ
ಸುದೀಪ್ ಮಾತಿಗೆ ಕಣ್ಣೀರಿಟ್ಟ ತಾಂಡವ್, ಕುಣಿದಾಡಿದ ಸೌಂದರ್ಯಾ: ವಿಡಿಯೋ
ಸುದೀಪ್ ಮಾತಿಗೆ ಕಣ್ಣೀರಿಟ್ಟ ತಾಂಡವ್, ಕುಣಿದಾಡಿದ ಸೌಂದರ್ಯಾ: ವಿಡಿಯೋ
ದೊಡ್ಡಬಳ್ಳಾಪುರ ತಾಲೂಕಿನ ಹಲವೆಡೆ ಮತ್ತೆ ಭೂಕಂಪನ; ಸ್ಥಳೀಯರಲ್ಲಿ ಆತಂಕ
ದೊಡ್ಡಬಳ್ಳಾಪುರ ತಾಲೂಕಿನ ಹಲವೆಡೆ ಮತ್ತೆ ಭೂಕಂಪನ; ಸ್ಥಳೀಯರಲ್ಲಿ ಆತಂಕ
ಭೀಕರ ಬರದಿಂದ ಬತ್ತಿದ ಭತ್ತದ ನಾಡು: ಇಡೀ ರಾಜ್ಯಕ್ಕೆ ಅಕ್ಕಿ ದರ ಏರಿಕೆಯ ಬಿಸಿ
ಭೀಕರ ಬರದಿಂದ ಬತ್ತಿದ ಭತ್ತದ ನಾಡು: ಇಡೀ ರಾಜ್ಯಕ್ಕೆ ಅಕ್ಕಿ ದರ ಏರಿಕೆಯ ಬಿಸಿ
ರೆಸ್ಯೂಮ್​​ನಲ್ಲಿ ಕನ್ನಡ ಇದ್ರೆ ರಿಜೆಕ್ಟ್​: ಅಳಲು ತೋಡಿಕೊಂಡ ಯುವತಿ
ರೆಸ್ಯೂಮ್​​ನಲ್ಲಿ ಕನ್ನಡ ಇದ್ರೆ ರಿಜೆಕ್ಟ್​: ಅಳಲು ತೋಡಿಕೊಂಡ ಯುವತಿ
ಹಿಂಗಾರು ಮಳೆ ಅಬ್ಬರಕ್ಕೆ ಹಚ್ಚ ಹಸಿರಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟ
ಹಿಂಗಾರು ಮಳೆ ಅಬ್ಬರಕ್ಕೆ ಹಚ್ಚ ಹಸಿರಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟ
2 ವರ್ಷ 10 ತಿಂಗಳ ಕಂದನಿಂದ ತಬಲಾ ವಾದನ
2 ವರ್ಷ 10 ತಿಂಗಳ ಕಂದನಿಂದ ತಬಲಾ ವಾದನ
40 ದಿನ ನಂತರ ಪತ್ತೆಯಾದ ಕೆಆರ್‌ಐಡಿಎಲ್ ಎಇಇ ಪರ್ವೀಜ್​ಗೆ ಈಗ ಪೊಲೀಸರ ಗ್ರಿಲ್
40 ದಿನ ನಂತರ ಪತ್ತೆಯಾದ ಕೆಆರ್‌ಐಡಿಎಲ್ ಎಇಇ ಪರ್ವೀಜ್​ಗೆ ಈಗ ಪೊಲೀಸರ ಗ್ರಿಲ್