ತಂದೆ, ಚಿಕ್ಕಪ್ಪ ಸೇರಿ ಹಲವು ಮಂದಿಯಿಂದ ಬಾಲಕಿ ಮೇಲೆ ಅತ್ಯಾಚಾರ, ಕೆಟ್ಟ ಸ್ಪರ್ಶ, ಒಳ್ಳೆಯ ಸ್ಪರ್ಶ ಪಾಠ ಸಮಯದಲ್ಲಿ ತಿಳೀತು ವಿಚಾರ

|

Updated on: Jun 24, 2024 | 9:22 AM

ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಒಳ್ಳೆಯ ಸ್ಪರ್ಶ ಯಾವುದು, ಕೆಟ್ಟ ಸ್ಪರ್ಶ ಯಾವುದು ಎಂದು ತಿಳಿಸಿಕೊಡುತ್ತಿರುವ ವೇಳೆ ಆಕೆಯ ಮೇಲೆ ನಡೆಸಿದ್ದ ಅತ್ಯಾಚಾರದ ಘಟನೆಯನ್ನು ವಿದ್ಯಾರ್ಥಿನಿ ಶಿಕ್ಷಕಿಯೊಂದಿಗೆ ಹಂಚಿಕೊಂಡಿದ್ದಾಳೆ. ಆಕೆಯ ಮೇಲೆ ತಂದೆ, ಚಿಕ್ಕಪ್ಪ ಹಾಗೂ ಇತರರಿಂದ ಅತ್ಯಾಚಾರವಾಗಿದೆ ಎಂದು ಹೇಳಿದ್ದಾಳೆ.

ತಂದೆ, ಚಿಕ್ಕಪ್ಪ ಸೇರಿ ಹಲವು ಮಂದಿಯಿಂದ ಬಾಲಕಿ ಮೇಲೆ ಅತ್ಯಾಚಾರ, ಕೆಟ್ಟ ಸ್ಪರ್ಶ, ಒಳ್ಳೆಯ ಸ್ಪರ್ಶ ಪಾಠ ಸಮಯದಲ್ಲಿ ತಿಳೀತು ವಿಚಾರ
ಕ್ರೈಂ
Image Credit source: News 18
Follow us on

ತಂದೆ, ಚಿಕ್ಕಪ್ಪ ಹಾಗೂ ಸೋದರ ಸಂಬಂಧಿಯಿಂದ ಪದೇ ಪದೇ ತನ್ನ ಮೇಲೆ ಅತ್ಯಾಚಾರ ನಡೆದಿರುವ ವಿಚಾರವನ್ನು 13 ವರ್ಷದ ಬಾಲಕಿ ಶಿಕ್ಷಕಿಯ ಮುಂದೆ ಬಿಚ್ಚಿಟ್ಟಿದ್ದಾಳೆ. ಶಾಲೆಯಲ್ಲಿ ಒಳ್ಳೆಯ ಸ್ಪರ್ಶ ಯಾವುದು, ಕೆಟ್ಟ ಸ್ಪರ್ಶ ಯಾವುದು ಎಂಬುದರ ಕುರಿತು ವಿದ್ಯಾರ್ಥಿನಿಯರಿಗೆ ಶಿಕ್ಷಕರು ಮನದಟ್ಟು ಮಾಡಿಕೊಡುತ್ತಿದ್ದರು. ಆ ಸಮಯದಲ್ಲಿ ವಿದ್ಯಾರ್ಥಿನಿ ನಡೆದಿರುವ ಎಲ್ಲಾ ವಿಚಾರವನ್ನು ತೆರೆದಿಟ್ಟಿದ್ದಾಳೆ.

ಈ ಸಂದರ್ಭದಲ್ಲಿ ವಿದ್ಯಾರ್ಥಿನಿಗೆ ಕೆಟ್ಟ ಸ್ಪರ್ಶ ಯಾವುದು ಎಂದು ಹೇಳಿಕೊಡುತ್ತಿರುವಾಗ ಆಕೆ ನಡೆದಿರುವ ಎಲ್ಲಾ ವಿಚಾರವನ್ನು ಬಹಿರಂಗಪಡಿಸಿದ್ದಾಳೆ. ಆಕೆಯ ಸೋದರ ಸಂಬಂಧಿ 2023ರಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಮತ್ತು ಹಲ್ಲೆ ಕೂಡ ನಟೆಸಿದ್ದಾನೆ, ಆದರೆ ಯಾರಿಗಾದರೂ ಹೇಳಿದರೆ ಕೆಟ್ಟ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದರು.

2024ರ ಜನವರಿಯಲ್ಲಿ ಆಕೆಯ ಚಿಕ್ಕಪ್ಪ ಅತ್ಯಾಚಾರವೆಸಗಿದ್ದರು, ಇದನ್ನು ವಿರೋಧಿಸಿ ಕಿರುಚಾಡಿದಾಗ ಆಕೆಯ ಬಾಯಿಯನ್ನು ಕಟ್ಟಿ ಆಕೆಯ ಮೇಲೆ ಹಲ್ಲೆ ನಡೆಸಿದ್ದರು ಎಂದು ಆಕೆ ತಿಳಿಸಿದ್ದಾಳೆ.

ಮತ್ತಷ್ಟು ಓದಿ: ಅತ್ಯಾಚಾರ ಪ್ರತಿರೋಧಿಸಿದ ನವವಿವಾಹಿತ ಮಹಿಳೆಗೆ ಚಾಕು ಇರಿತ

ಬಾಲಕಿ ತಂದೆ ಕೂಡ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎನ್ನುವ ಆತಂಕದ ವಿಚಾರವನ್ನು ಕೂಡ ಆಕೆ ಹೇಳಿಕೊಂಡಿದ್ದಾಳೆ. ಒಳ್ಳೆಯ ಸ್ಪರ್ಶ ಹಾಗೂ ಕೆಟ್ಟ ಸ್ಪರ್ಶ ಕುರಿತು ಶಾಲೆಯಲ್ಲಿ ನಡೆದ ಕೌನ್ಸೆಲಿಂಗ್ ಸಮಯದಲ್ಲಿ ಬಾಲಕಿ ಈ ವಿಚಾರವನ್ನು ತಿಳಿಸಿದ್ದಾಳೆ. ನಂತರ ಶಿಕ್ಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಅತ್ಯಾಚಾರ ಆರೋಪದಡಿ ಮೂವರನ್ನು ಬಂಧಿಸಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ