ಸ್ವಘೋಷಿತ ದೇವಮಾನವ ಗುರ್ಮಿತ್ ರಾಮ್ ರಹೀಮ್ ಸಿಂಗ್ ತದ್ರೂಪಿ ಇದ್ದಾನೆ ಎಂಬ ಅರ್ಜಿ ವಜಾಗೊಳಿಸಿದ ಹೈಕೋರ್ಟ್

| Updated By: ರಶ್ಮಿ ಕಲ್ಲಕಟ್ಟ

Updated on: Jul 04, 2022 | 5:54 PM

Gurmeet Ram Rahim ಅರ್ಜಿ ಸಲ್ಲಿಸುವಾಗ ಅರ್ಜಿದಾರರು ತಮ್ಮ ಬುದ್ದಿಯನ್ನು ಬಳಸಬೇಕಿತ್ತು ಎಂದು ನ್ಯಾಯಾಧೀಶರು ಹೇಳಿದರು. "ಮಾನವನ ತದ್ರೂಪಿಯನ್ನು ಸೃಷ್ಟಿಸಲು ಸಾಧ್ಯವೇ?". "ಸಿನಿಮಾದ ಕಥೆಯ ಶೈಲಿಯಲ್ಲಿ ಮಾತನಾಡಬೇಡಿ" ಎಂದು ಅರ್ಜಿಯನ್ನು ವಜಾಗೊಳಿಸುವಾಗ ನ್ಯಾಯಾಧೀಶರು ಹೇಳಿದರು.

ಸ್ವಘೋಷಿತ ದೇವಮಾನವ ಗುರ್ಮಿತ್ ರಾಮ್ ರಹೀಮ್ ಸಿಂಗ್ ತದ್ರೂಪಿ ಇದ್ದಾನೆ ಎಂಬ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಗುರ್ಮಿತ್ ರಾಮ್ ರಹೀಮ್ ಸಿಂಗ್
Follow us on

ಸ್ವ ಘೋಷಿತ ದೇವಮಾನವ ಗುರ್ಮಿತ್ ರಾಮ್ ರಹೀಮ್ ಸಿಂಗ್ (Gurmeet Ram Rahim )ತದ್ರೂಪಿಯೊಬ್ಬ ಇದ್ದಾನೆ. ಸದ್ಯ ಜೈಲಿನಿಂದ ಪೆರೋಲ್ ಮೇಲೆ ಬಿಡುಗಡೆಯಾಗಿರುವುದು ಅಸಲಿ ಗುರ್ಮಿತ್ ರಾಮ್ ರಹೀಮ್ ಸಿಂಗ್ ಅಲ್ಲ, ತದ್ರೂಪಿ ವ್ಯಕ್ತಿಯು ಜೈಲಿನಿಂದ ಹೊರಬಂದು ಉತ್ತರ ಪ್ರದೇಶದ ಆಶ್ರಮದಲ್ಲಿ ಇದ್ದಾನೆ ಎಂದು ವಕೀಲರೊಬ್ಬರು ಹರಿಯಾಣ-ಪಂಜಾಬ್ ಹೈಕೋರ್ಟ್​​​ಗೆ (Punjab and Haryana High Court) ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ಹರಿಯಾಣ-ಪಂಜಾಬ್ ಹೈಕೋರ್ಟ್ ಹೇಳಿದ್ದೇನು? ಗುರ್ಮಿತ್ ರಾಮ್ ರಹೀಮ್ ಸಿಂಗ್ ವಕ್ತಾರರು ಇದಕ್ಕೆ ಕೊಟ್ಟ ಪ್ರತಿಕ್ರಿಯೆ ಏನು? ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ

ಗುರ್ಮಿತ್ ರಾಮ್ ರಹೀಮ್ ತದ್ರೂಪಿ ಇದ್ದಾರಾ?

ಈಗಿನ ಕಾಲದಲ್ಲಿ ಒಬ್ಬ ವ್ಯಕ್ತಿಯನ್ನೇ ಥೇಟ್ ಹೋಲುವ ತದ್ರೂಪಿ ವ್ಯಕ್ತಿಯನ್ನು ಸೃಷ್ಟಿಸಲು ಸಾಧ್ಯವೇ? ಆದರೇ, ಗುರ್ಮಿತ್ ರಾಮ್ ರಹೀಮ್ ಸಿಂಗ್ ರನ್ನೇ ಹೋಲುವ ತದ್ರೂಪಿ ವ್ಯಕ್ತಿಯನ್ನು ಸೃಷ್ಟಿಸಲಾಗಿದೆ ಎಂಬ ಅರ್ಜಿ ಇಂದು ಪಂಜಾಬ್-ಹರಿಯಾಣ ಹೈಕೋರ್ಟ್ ಮುಂದೆ ವಿಚಾರಣೆಗೆ ಬಂದಿತ್ತು. ಪೆರೋಲ್ ಮೇಲೆ ಜೈಲಿನಿಂದ ಹೊರಗಿರುವ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ವೇಷಧಾರಿ. ಗುರ್ಮಿತ್ ರಾಮ್ ರಹೀಮ್ ಸಿಂಗ್ ನೇ ಹೋಲುವ ತದ್ರೂಪಿ ವ್ಯಕ್ತಿಯೊಬ್ಬನಿದ್ದಾನೆ ಎಂಬ ಆರೋಪವನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತಳ್ಳಿಹಾಕಿದೆ.

ಪೆರೋಲ್ ಮೇಲೆ ಜೈಲಿನಿಂದ ಹೊರಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರನ್ನು ವಂಚಕ ಎಂದು ಕರೆಯುವ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್, ಅರ್ಜಿದಾರರು ಇಂತಹ ವಾದಗಳನ್ನು ಮಾಡುವ ಮೊದಲು ವೈಜ್ಞಾನಿಕ ಕಾಲ್ಪನಿಕ ಚಲನಚಿತ್ರವನ್ನು ವೀಕ್ಷಿಸಿರಬೇಕು ಎಂದು ಹೇಳಿದೆ. ಪ್ರಕರಣವನ್ನು ಹಿಂಪಡೆಯುವಂತೆ ನ್ಯಾಯಾಧೀಶರು ಅರ್ಜಿದಾರರಿಗೆ ಸೂಚಿಸಿದರು. ಇಂತಹ ಪ್ರಕರಣಗಳ ವಿಚಾರಣೆಯನ್ನು ನ್ಯಾಯಾಲಯ ಮಾಡಲ್ಲ ಎಂದರು. ಏತನ್ಮಧ್ಯೆ, ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರಿಗೆ ಬಿಗಿ ಭದ್ರತೆ ನೀಡಲಾಗಿದ್ದು, ಅವರನ್ನು ಅಪಹರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹರಿಯಾಣ ಸರ್ಕಾರ ಹೇಳಿದೆ.

ಅರ್ಜಿ ಸಲ್ಲಿಸುವಾಗ ಅರ್ಜಿದಾರರು ತಮ್ಮ ಬುದ್ದಿಯನ್ನು ಬಳಸಬೇಕಿತ್ತು ಎಂದು ನ್ಯಾಯಾಧೀಶರು ಹೇಳಿದರು. “ಮಾನವನ ತದ್ರೂಪಿಯನ್ನು ಸೃಷ್ಟಿಸಲು ಸಾಧ್ಯವೇ?”. “ಸಿನಿಮಾದ ಕಥೆಯ ಶೈಲಿಯಲ್ಲಿ ಮಾತನಾಡಬೇಡಿ” ಎಂದು ಅರ್ಜಿಯನ್ನು ವಜಾಗೊಳಿಸುವಾಗ ನ್ಯಾಯಾಧೀಶರು ಹೇಳಿದರು.

ಗುರ್ಮೀತ್ ರಾಮ್ ರಹೀಮ್ ಸಿಂಗ್ ಡೇರಾದ ಪ್ರಧಾನ ಕಛೇರಿ ಇರುವ ಸಿರ್ಸಾದಲ್ಲಿರುವ ತನ್ನ ಆಶ್ರಮದಲ್ಲಿ ಇಬ್ಬರು ಮಹಿಳಾ ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ 20 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಆಗಸ್ಟ್ 2017 ರಲ್ಲಿ ಪಂಚಕುಲದ ವಿಶೇಷ ಸಿಬಿಐ ನ್ಯಾಯಾಲಯವು ಅವರನ್ನು ದೋಷಿ ಎಂದು ಘೋಷಿಸಿತು. ಅವರು ಜೂನ್ 17 ರಂದು ಹರಿಯಾಣದ ರೋಹ್ಟಕ್‌ನಲ್ಲಿರುವ ಸುನಾರಿಯಾ ಜೈಲಿನಿಂದ ತಿಂಗಳ ಅವಧಿಯ ಪೆರೋಲ್‌ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಗುರ್ಮಿತ್ ರಾಮ್ ರಹೀಮ್ ಸಿಂಗ್ ಅವರು ಉತ್ತರ ಪ್ರದೇಶದ ಬಾಗಪತ್ ಜಿಲ್ಲೆಯಲ್ಲಿರುವ ಬರ್ನಾವಾ ಡೇರಾ ಸಚ್ಚಾ ಸೌದಾ ಆಶ್ರಮಕ್ಕೆ ಹೋಗಬೇಕೆಂದು ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.

ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರ ವಕ್ತಾರ ಮತ್ತು ವಕೀಲ ಜಿತೇಂದ್ರ ಖುರಾನಾ, ಇಂತಹ ಅರ್ಜಿಗಳನ್ನು ಸಲ್ಲಿಸುವ ಮೂಲಕ ಡೇರಾ ಮುಖ್ಯಸ್ಥರ ಮಾನಹಾನಿ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಡೇರಾ ಸಚ್ಚಾ ಸೌದಾ ಆಶ್ರಮದ ವಿರುದ್ಧದ ಇತರ ಪ್ರಕರಣಗಳ ಮೇಲೆ ಪ್ರಭಾವ ಬೀರಲು ಈ ಜನರು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದರು. ಅರ್ಜಿದಾರರು ಈ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಹೋದರೆ, ನಾವು ವಿಷಯವನ್ನು ಪರಿಶೀಲಿಸುತ್ತೇವೆ.

ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವ ಅಶೋಕ್‌ಕುಮಾರ್, ಅರ್ಜಿ ವಜಾಗೊಂಡ ನಂತರ ನಾವು ಈಗ ಸುಪ್ರೀಂಕೋರ್ಟ್‌ಗೆ ಹೋಗುತ್ತೇವೆ. ಸಿಂಗ್ ಅವರನ್ನು ಬದಲಾಯಿಸಲಾಗಿದೆ ಮತ್ತು ಆಶ್ರಮದಲ್ಲಿರುವವರು ನಕಲಿ ಎಂದು ನಮಗೆ ಮನವರಿಕೆಯಾಗಿರುವುದರಿಂದ ನಾವು ಈಗ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ.