Video: ಮೊಹಾಲಿಯಲ್ಲಿ ಕುಸಿದ ಪಾರ್ಕಿಂಗ್​ಲಾಟ್, ಹತ್ತಾರು ವಾಹನಗಳು ಜಖಂ

ಭೂಕಂಪವಲ್ಲ, ಮಳೆಯೂ ಇಲ್ಲ ಯಾವುದೇ ರೀತಿಯ ಪ್ರಕೃತಿಯ ವಿಕೋಪವಿಲ್ಲದಿದ್ದರೂ ಪಾರ್ಕಿಂಗ್​ ಲಾಟ್​ ಕುಸಿದುಬಿದ್ದು ಹತ್ತಾರು ವಾನಗಳು ಜಖಂಗೊಂಡಿವೆ.

Video: ಮೊಹಾಲಿಯಲ್ಲಿ ಕುಸಿದ ಪಾರ್ಕಿಂಗ್​ಲಾಟ್, ಹತ್ತಾರು ವಾಹನಗಳು ಜಖಂ
ಪಾರ್ಕಿಂಗ್ ಕುಸಿತ
Image Credit source: ANI

Updated on: Jun 15, 2023 | 9:04 AM

ಭೂಕಂಪವಲ್ಲ, ಮಳೆಯೂ ಇಲ್ಲ ಯಾವುದೇ ರೀತಿಯ ಪ್ರಕೃತಿಯ ವಿಕೋಪವಿಲ್ಲದಿದ್ದರೂ ಪಾರ್ಕಿಂಗ್​ ಲಾಟ್​ ಕುಸಿದುಬಿದ್ದು ಹತ್ತಾರು ವಾನಗಳು ಜಖಂಗೊಂಡಿವೆ. ಪಂಜಾಬ್​ನ ಮೊಹಾಲಿಯಲ್ಲಿ ಈ ಘಟನೆ ನಡೆದಿದ್ದು, ವಿಡಿಯೋಗಳು ವೈರಲ್ ಆಗುತ್ತಿವೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪಾರ್ಕಿಂಗ್​ನಲ್ಲಿ ನಿಲ್ಲಿಸಿದ್ದ ಹಲವು ವಾಹನಗಳು ಅವಶೇಷಗಳಡಿ ಹೂತು ಹೋಗಿವೆ. ಮೊಹಾಲಿ ಸೆಕ್ಟರ್-83ರಲ್ಲಿ ಬುಧವಾರ ಸಂಜೆ ಈ ಘಟನೆ ನಡೆದಿದೆ. ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ನಡೆದಾಗ ಅಲ್ಲಿ ಯಾರೂ ಇರಲಿಲ್ಲ. ಆ ಸಮಯದಲ್ಲಿ ಯಾರಾದರೂ ಇದ್ದಿದ್ದರೆ ದೊಡ್ಡ ಅಪಘಾತ ಸಂಭವಿಸುತ್ತಿತ್ತು. ಕುಸಿದು ಬಿದ್ದಿರುವ ಪಾರ್ಕಿಂಗ್ ಸ್ಥಳದ ಪಕ್ಕದಲ್ಲೇ ನಿರ್ಮಾಣ ಹಂತದಲ್ಲಿರುವ ಕಟ್ಟಡದ ನೆಲಮಾಳಿಗೆಯಲ್ಲಿ ಅಗೆಯುವ ಕಾರ್ಯ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆಗ ಪಾರ್ಕಿಂಗ್ ಕುಸಿದು ಬಿದ್ದಿದೆ.

ಮತ್ತಷ್ಟು ಓದಿ: Bihar: ಗಂಗಾನದಿಗೆ ಅಡ್ಡಲಾಗಿ ನಿರ್ಮಿಸುತ್ತಿದ್ದ ಸೇತುವೆ 2ನೇ ಸಲ ಕುಸಿತ

ಪಾರ್ಕಿಂಗ್ ಸ್ಥಳದಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗಿತ್ತು. ವೀಡಿಯೋ ನೋಡಿದ ಜನರು ಒಂದೇ ಮಾತನ್ನು ಹೇಳುತ್ತಿದ್ದಾರೆ, ಅದೃಷ್ಟವಶಾತ್ ಯಾರೂ ಅಲ್ಲಿ ಇರಲಿಲ್ಲ. ಪಾರ್ಕಿಂಗ್ ಸಂಪೂರ್ಣ ಕುಸಿದಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಅಲ್ಲೇ ನಿಂತ ವಾಹನಗಳು ಕೂಡ ಕೆಳಗೆ ಬಿದ್ದಿವೆ. ಕಾರು ಕೂಡ ಬೀಳುತ್ತಿರುವ ದೃಶ್ಯವನ್ನು ನೀವು ನೋಡಬಹುದು.

ಘಟನೆಯಲ್ಲಿ ಕೆಲವು ವಾಹನಗಳು ಸಂಪೂರ್ಣ ಜಖಂಗೊಂಡಿವೆ ಆದರೆ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ ಎಂಬುದು ನೆಮ್ಮದಿಯ ವಿಚಾರ ಎಂದು ಪೊಲೀಸರು ತಿಳಿಸಿದ್ದಾರೆ. ಮೊಹಾಲಿ ಡಿಎಸ್ಪಿ ಹರ್ಸಿಮ್ರಾನ್ ಸಿಂಗ್ ಪ್ರಕಾರ, ಘಟನೆಯಲ್ಲಿ 9-10 ಬೈಕ್‌ಗಳು ಮತ್ತು ಎರಡು ಕಾರುಗಳು ಹಾನಿಗೊಳಗಾಗಿವೆ. ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ