Mumbai: ರೀಲ್ಸ್​ ಮಾಡಲು ಹೋಗಿ ಬಾವಿಗೆ ಬಿದ್ದು ಯುವಕ ಸಾವು, 32 ಗಂಟೆಗಳ ಬಳಿಕ ಸಿಕ್ತು ಶವ

ರೀಲ್ಸ್ ಮಾಡಲು ಹೋಗಿ ಯುವಕನೊಬ್ಬ ತನ್ನ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಾನೆ. ದೊಂಬಿವ್ಲಿಯ ಠಾಕುರ್ಲಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ, ಯುವಕನೊಬ್ಬ ತನ್ನ ಸ್ನೇಹಿತರ ಜತೆ ರೀಲ್ಸ್​ ಮಾಡಲು ತೆರಳಿ ಆಯತಪ್ಪಿ ಬಾವಿಗೆ ಬಿದ್ದು ಮೃತಪಟ್ಟಿದ್ದಾನೆ.

Mumbai: ರೀಲ್ಸ್​ ಮಾಡಲು ಹೋಗಿ ಬಾವಿಗೆ ಬಿದ್ದು ಯುವಕ ಸಾವು, 32 ಗಂಟೆಗಳ ಬಳಿಕ ಸಿಕ್ತು ಶವ
ಪಂಪ್​ಹೌಸ್Image Credit source: India TV
Follow us
ನಯನಾ ರಾಜೀವ್
|

Updated on: Jun 15, 2023 | 10:01 AM

ರೀಲ್ಸ್ ಮಾಡಲು ಹೋಗಿ ಯುವಕನೊಬ್ಬ ತನ್ನ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಾನೆ. ದೊಂಬಿವ್ಲಿಯ ಠಾಕುರ್ಲಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ, ಯುವಕನೊಬ್ಬ ತನ್ನ ಸ್ನೇಹಿತರ ಜತೆ ರೀಲ್ಸ್​ ಮಾಡಲು ತೆರಳಿ ಆಯತಪ್ಪಿ ಬಾವಿಗೆ ಬಿದ್ದು ಮೃತಪಟ್ಟಿದ್ದಾನೆ. ಠಾಕುರ್ಲಿಯ ಬ್ರಿಟಿಷರ ಕಾಲದ ಪಂಪ್ ಹೌಸ್‌ನ ಬಾವಿಯಲ್ಲಿ ಮುಳುಗಿ ಈತ ಮೃತಪಟ್ಟಿದ್ದಾನೆ. ಯುವಕ ತನ್ನ ಇಬ್ಬರು ಸ್ನೇಹಿತರೊಂದಿಗೆ ತನ್ನ ಸಾಮಾಜಿಕ ಮಾಧ್ಯಮ ಖಾತೆಗಾಗಿ ರೀಲ್ ಶೂಟ್ ಮಾಡಲು ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸತತ 32 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ವ್ಯಕ್ತಿಯ ಮೃತದೇಹವನ್ನು ಹುಡುಕಲಾಯಿತು. ಪೊಲೀಸರಿಂದ ಬಂದ ಮಾಹಿತಿಯ ಪ್ರಕಾರ ಮೃತರನ್ನು 18 ವರ್ಷದ ಬಿಲಾಲ್ ಸೊಹೈಲ್ ಶೇಖ್ ಎಂದು ಗುರುತಿಸಲಾಗಿದೆ.

ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ, ಬಿಲಾಲ್ ಬಾವಿಗೆ ಬೀಳುವುದನ್ನು ನೋಡಿದ ಇಬ್ಬರು ಸ್ನೇಹಿತರು ಸಹಾಯಕ್ಕಾಗಿ ಭದ್ರತಾ ಸಿಬ್ಬಂದಿಯ ಬಳಿಗೆ ಹೋದರು.

ಮತ್ತಷ್ಟು ಓದಿ: ರೀಲ್ಸ್ ಹುಚ್ಚು! ಚೆಕ್ ಡ್ಯಾಂ ರೀಲ್ಸ್ ಮಾಡುವಾಗ ಇಬ್ಬರು ಯುವಕರು ನೀರುಪಾಲು, ರೀಲ್ಸ್ ಮಾಡ್ತಿದ್ದ 6 ಮಹಿಳಾ ಪೊಲೀಸ್​ ಸಿಬ್ಬಂದಿ ಸೀದಾ ಮನೆಗೆ!

ಬಳಿಕ ವಿಷ್ಣುನಗರ ಠಾಣೆಗೆ ಮಾಹಿತಿ ನೀಡಿದ ಸಿಬ್ಬಂದಿ ಕೂಡಲೇ ಹುಡುಕಾಟ ಆರಂಭಿಸಿದ್ದಾರೆ. ಮುಂಬ್ರಾದ ಚಂದನಗರದ ನಿವಾಸಿಗಳಾದ ಮೂವರು ಸ್ನೇಹಿತರು ಕುಡಿದ ಅಮಲಿನಲ್ಲಿದ್ದರು ಎಂದು ಶಂಕಿಸಲಾಗಿದೆ.

ಹಿಂದೂಸ್ತಾನ್ ಟೈಮ್ಸ್ ಪ್ರಕಾರ, ಬಿಲಾಲ್ ರೀಲ್ ಮಾಡುವ ವೇಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದಾನೆ ಎಂದು ಬಿಲಾಲ್ ಸ್ನೇಹಿತರು ಹೇಳಿದ್ದಾರೆ. ಬ್ರಿಟಿಷರ ಕಾಲದಲ್ಲಿ ಪಂಪ್ ಹೌಸ್ ನಿರ್ಮಿಸಲಾಗಿತ್ತು. ಅಲ್ಲದೆ ಈ ಸ್ಥಳಕ್ಕೆ ಜನರು ಬರುವುದು ಕಡಿಮೆ.

ಬಾಲಕನ ಶವಕ್ಕಾಗಿ ಒಂದು ದಿನಕ್ಕೂ ಹೆಚ್ಚು ಕಾಲ ಶೋಧ ನಡೆಸಿತ್ತು, ಘಟನೆ ನಡೆದ 32 ಗಂಟೆಗಳ ನಂತರ ಶವ ಪತ್ತೆಯಾಗಿದೆ. ಬಿಲಾಲ್ ಅವರ ಚಿಕ್ಕಪ್ಪ ಖಾಲಿದ್ ಭಾಯ್ ಅವರು ತಮ್ಮ ಸ್ನೇಹಿತರೊಂದಿಗೆ ಠಾಕುರ್ಲಿಗೆ ಹೋಗುವುದಾಗಿ ನಮಗೆ ಹೇಳಿದರು ಎಂದು ಹೇಳಿದರು. ರಾತ್ರಿಯ ಹೊತ್ತಿಗೆ ಮನೆಗೆ ಹಿಂತಿರುಗುತ್ತಾನೆ ಎಂದು ನಾವು ಭಾವಿಸಿದ್ದೆವು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ