ಚಂಡೀಗಡ: ಪಾಕಿಸ್ತಾನದಿಂದ ಬಂದಿದ್ದು ಎನ್ನಲಾದ ಡ್ರೋನ್ ಮೂಲಕ ನೆಲಕ್ಕೆ ಬಿದ್ದ 11 ಕೈಬಾಂಬ್ಗಳನ್ನು ಪಂಜಾಬ್ನ ಗುರುದಾಸ್ಪುರದಲ್ಲಿ ಪೊಲೀಸರು ಪತ್ತೆಹಚ್ಚಿ, ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಪಂಜಾಬ್ ಪೊಲೀಸರು ಮತ್ತು ಬಿಎಸ್ಎಫ್ ಸಿಬ್ಬಂದಿ ಈ ಡ್ರೋನ್ ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗುರುದಾಸ್ಪುರ ಜಿಲ್ಲೆಯಲ್ಲಿ ಡ್ರೋನ್ ಪತ್ತೆಯಾದ ತಕ್ಷಣವೇ ಪಂಜಾಬ್ ಪೊಲೀಸರು ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿದರು. ರಾತ್ರಿ 11.30ರಲ್ಲಿ ಪಾಕ್ ಗಡಿಯಿಂದ ಡ್ರೋನ್ ಭಾರತದ ಗಡಿ ಪ್ರವೇಶಿಸುವುದು ಗುರುತಿಸಿದ ಬಿಎಸ್ಎಫ್ ಯೋಧರು ಡ್ರೋನ್ನತ್ತ ಗುಂಡು ಹಾರಿಸಿದರು.
ಡ್ರೋನ್ ಸಂಚರಿಸಬಹುದು ಎಂದು ಶಂಕಿಸಲಾದ ಸ್ಥಳದಲ್ಲಿ ಭಾನುವಾರ ಮುಂಜಾನೆಯಿಂದ ವ್ಯಾಪಕ ಶೋಧ ಕಾರ್ಯಾಚರಣೆಯನ್ನು ನಡೆಸಲಾಯಿತು. ಈ ಸಂದರ್ಭ 84 ಗ್ರೆನೇಡ್ಗಳಿದ್ದ ಪ್ಲಾಸ್ಟಿಕ್ ಬಾಕ್ಸ್ ಪತ್ತೆಯಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಆಸ್ಟ್ರಿಯಾ ತಂತ್ರಜ್ಞಾನದ Arges Type HG 84 ಸರಣಿಯ ಗ್ರೆನೇಡ್ಗಳು ಸ್ಫೋಟಗೊಳ್ಳುವ ಕೇಂದ್ರದ ಸುತ್ತಲಿನ 30 ಮೀಟರ್ನಲ್ಲಿರುವ ಮನುಷ್ಯರನ್ನು ಕೊಲ್ಲುವ ಸಾಮರ್ಥ್ಯ ಹೊಂದಿವೆ.
ಡ್ರೋನ್ ಪತ್ತೆಹಚ್ಚಲು ಭದ್ರತಾ ಸಿಬ್ಬಂದಿಗೆ ಸಾಧ್ಯವಾಗಿಲ್ಲ. ಬಹುಶಃ ಅದು ಶಸ್ತ್ರಾಸ್ತ್ರಗಳನ್ನು ನೆಲಕ್ಕೆ ಹಾಕಿ, ಪಾಕಿಸ್ತಾನಕ್ಕೆ ಹಿಂದಿರುಗಿರಬಹುದು ಎಂದು ಶಂಕಿಸಲಾಗಿದೆ. ಸ್ಫೋಟಕ ಕಾಯ್ದೆಯ ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಡಿಜಿಪಿ ದಿನಕರ ಗುಪ್ತ ಮಾಹಿತಿ ನೀಡಿದ್ದಾರೆ.
Published On - 6:32 pm, Mon, 21 December 20