Purvanchal Expressway Accidents: ಭಾರತವನ್ನೇ ಬೆಚ್ಚಿಬೀಳಿಸಿದ್ದ 7 ಕಾರ್ ಆಕ್ಸಿಡೆಂಟ್ಸ್… ಒಂದಕ್ಕಿಂತ ಒಂದು ಘೋರ!

|

Updated on: Oct 18, 2022 | 5:02 PM

ಅಪಘಾತಗೊಂಡ ಕಾರುಗಳು ಎಲ್ಲವೂ ಐಷಾರಾಮಿ ಕಾರುಗಳು, ಈ ಕಾರುಗಳೆಲ್ಲವು ಹೆದ್ದಾರಿಗಳಲ್ಲಿ ದುರಂತಕ್ಕೆ ಒಳಲಾಗಿರುವುದು ಎಂದು ವರದಿ ಹೇಳಿದೆ. ಐಷಾರಾಮಿ ಕಾರುಗಳು ಎಲೆಕ್ಟ್ರಾನಿಕ್ ನಿಯಂತ್ರಣ ಮಾಡ್ಯೂಲ್ ಅನ್ನು ಹೊಂದಿದ್ದರು ಕೂಡು ಅಪಘಾತಗೊಂಡಿದೆ.

Purvanchal Expressway Accidents: ಭಾರತವನ್ನೇ ಬೆಚ್ಚಿಬೀಳಿಸಿದ್ದ 7 ಕಾರ್ ಆಕ್ಸಿಡೆಂಟ್ಸ್... ಒಂದಕ್ಕಿಂತ ಒಂದು ಘೋರ!
Purvanchal Expressway Accidents
Follow us on

ಉತ್ತರಪ್ರದೇಶ: ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಯಲ್ಲಿ ಶುಕ್ರವಾರ 200 ಕಿಮೀ ವೇಗದಲ್ಲಿ ಚಲಿಸುತ್ತಿದ್ದ ಬಿಎಂಡಬ್ಲ್ಯು (BMW) ಕಾರು ಅಪಘಾತಕ್ಕೀಡಾಗಿ ನಾಲ್ವರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಪ್ರಯಾಣಿಕರೊಬ್ಬರ ಫೇಸ್‌ಬುಕ್​​ನಲ್ಲಿ ಈ ಬಗ್ಗೆ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಬಿಹಾರದ ರೋಹ್ತಾಸ್‌ನಲ್ಲಿರುವ ಖಾಸಗಿ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ವೃತ್ತಿಯನ್ನು ಮಾಡುತ್ತಿರುವ 35 ವಯಸ್ಸಿನ ಡಾ.ಆನಂದ್ ಪ್ರಕಾಶ್ 230 ಕಿಲೋಮೀಟರ್ ವೇಗದಲ್ಲಿ ಬಿಎಂಡಬ್ಲ್ಯು ಚಲಾಯಿಸುತ್ತಿರುವುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. ಹಾಡು ಹಾಕಿಕೊಂಡು ಫೇಸ್ ಬುಕ್​ನಲ್ಲಿ ಲೈವ್ ಬಂದು ಒಬ್ಬ ಹಿಂದಿಯಲ್ಲಿ ಯೇ ಗಣ ಪೆ 300 ಪಹುಚಾ ದೇಗಾ. ಸೀಟ್ ಬೆಲ್ಟ್ ಲಗಾ ಲಿಯೇ ಎಂದು ಹೇಳುತ್ತಾ ವೇಗವಾಗಿ ಬಂದ ಕಾರು ಎದುರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಈ ಬಗ್ಗೆ ಈಗ ತನಿಖೆ ನಡೆಸುತ್ತಿದ್ದ, ಟ್ರಕ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತ ತಲೆಮರೆಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದಲ್ಲಿ ಅನೇಕ ಕಡೆ ಇಂತಹ ಘಟನೆಗಳು ನಡೆದಿದೆ. ಅಪಘಾತಗೊಂಡ ಕಾರುಗಳು ಎಲ್ಲವೂ ಐಷಾರಾಮಿ ಕಾರುಗಳು, ಈ ಕಾರುಗಳೆಲ್ಲವು ಹೆದ್ದಾರಿಗಳಲ್ಲಿ ದುರಂತಕ್ಕೆ ಒಳಲಾಗಿರುವುದು ಎಂದು ವರದಿ ಹೇಳಿದೆ. ಐಷಾರಾಮಿ ಕಾರುಗಳು ಎಲೆಕ್ಟ್ರಾನಿಕ್ ನಿಯಂತ್ರಣ ಮಾಡ್ಯೂಲ್ ಅನ್ನು ಹೊಂದಿದ್ದರು, ಬ್ರೇಕ್ ವೈಫಲ್ಯ ಅಥವಾ ಕಡಿಮೆ ಬ್ರೇಕ್ ದ್ರವದಂತಹ ತಾಂತ್ರಿಕ ಸಮಸ್ಯೆಗಳಳಿ ಈ ಕಾರುಗಳಲ್ಲಿ ಕಂಡುಬಂದಿರುವುದನ್ನು ಗಮನಿಸಿರಬಹುದು ಇವುಗಳ ಸಮಸ್ಯೆಗಳ ಕಂಡುಹಿಡಿಯಲು ತನಿಖಾ ಸಂಸ್ಥೆಗಳು ನಿರ್ಧರಿಸಿದೆ.

ಸೈರಸ್ ಮಿಸ್ತ್ರಿ ಮರ್ಸಿಡಿಸ್ ಅಪಘಾತ

ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಮತ್ತು ಅವರ ಸ್ನೇಹಿತ ಜಹಾಂಗೀರ್ ಪಾಂಡೋಲೆ ಸೆಪ್ಟೆಂಬರ್ 4 ರಂದು ಪಾಲ್ಘರ್ ಜಿಲ್ಲೆಯಲ್ಲಿ ಅವರ ಮರ್ಸಿಡಿಸ್ ಕಾರು ರಸ್ತೆ ಡಿವೈಡರ್​ಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದರು. ಇನ್ನಿಬ್ಬರು ಕಾರಿನಲ್ಲಿದ್ದ ಅನಾಹಿತಾ ಪಾಂಡೋಲೆ (55) ಮತ್ತು ಆಕೆಯ ಪತಿ ಡೇರಿಯಸ್ ಪಾಂಡೋಲೆ (60) ಗಾಯಗೊಂಡಿದ್ದು, ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕಾರು 100 ಕಿಮೀ ವೇಗದಲ್ಲಿ ಚಲಿಸುತ್ತಿತ್ತು ಮತ್ತು ಅಪಘಾತ ಸಂಭವಿಸುವ ಐದು ನಿಮಿಷಗಳ ಮೊದಲು ಬ್ರೇಕ್ ಹಾಕಲಾಯಿತು ಎಂದು ತನಿಖೆಯಿಂದ ತಿಳಿದು ಬಂದಿದೆ. ಮುಂಬೈನಿಂದ 120 ಕಿಮೀ ದೂರದಲ್ಲಿರುವ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಚರೋಟಿ ಚೆಕ್ ಪೋಸ್ಟ್ ದಾಟಿದ ನಂತರ ಮರ್ಸಿಡಿಸ್ ಕಾರು ಒಂಬತ್ತು ನಿಮಿಷಗಳಲ್ಲಿ 20 ಕಿಮೀ ದೂರವನ್ನು ಕ್ರಮಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಮೃತರಿಬ್ಬರೂ ಸೀಟ್ ಬೆಲ್ಟ್ ಧರಿಸಿರಲಿಲ್ಲ.

ಕರ್ನಾಟಕದ ಕಂದಾಯ ಸಚಿವ ಆರ್ ಅಶೋಕ ಪುತ್ರರ ಮರ್ಸಿಡಿಸ್ ಬೆಂಜ್ ಅಪಘಾತ

2020ರಲ್ಲಿ, ಕರ್ನಾಟಕದ ಆಗಿನ ಕಂದಾಯ ಸಚಿವ ಆರ್ ಅಶೋಕ ಅವರ ಪುತ್ರ ಹೊಸಪೇಟೆ ಬಳಿಯ ಮರಿಯಮ್ಮನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಕಾರು ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದರು. ಮರ್ಸಿಡಿಸ್ ಬೆಂಝ್ ಕಾರು ವಾಹನದ ನಿಯಂತ್ರಣ ಸಿಗದೇ ಪಾದಚಾರಿ ರವಿ ನಾಯಕ್ (18) ಎಂಬುವವರಿಗೆ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ. ಈ ಕಾರು ಬೆಂಗಳೂರು ದಕ್ಷಿಣದಲ್ಲಿರುವ ನ್ಯಾಷನಲ್ ಪಬ್ಲಿಕ್ ಶಾಲೆಗೆ ಸೇರಿದ್ದು, ಇದರಲ್ಲಿ ಕಂದಾಯ ಸಚಿವ ಆರ್ ಅಶೋಕ್ ಭಾಗಿಯಾಗಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಡಿಎಂಕೆ ಶಾಸಕರ ಪುತ್ರ ಆಡಿ ಕಾರು ಅಪಘಾತ

ಡಿಎಂಕೆ ಶಾಸಕ ವೈ ಪ್ರಕಾಶ್ ಅವರ ಪುತ್ರ ಕರುಣಾ ಸಾಗರ್ ಮತ್ತು ಇತರ ಆರು ಮಂದಿ 2021ರಲ್ಲಿ ಬೆಂಗಳೂರಿನ ಕೋರಮಂಗಲ ಪ್ರದೇಶದಲ್ಲಿ ಕಟ್ಟಡಕ್ಕೆ ಡಿಕ್ಕಿ ಹೊಡೆದ ಆಡಿ ಕ್ಯೂ 3 ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆರು ಮಂದಿ ಸ್ಥಳದಲ್ಲೇ ಮೃತಪಟ್ಟರೆ, ಸಾಗರ್ ಅವರು ತಮಿಳುನಾಡಿನ ಹೊಸೂರು ಕ್ಷೇತ್ರವನ್ನು ಪ್ರತಿನಿಧಿಸುವ ಡಿಎಂಕೆ ಶಾಸಕ ವೈ ಪ್ರಕಾಶ್ ಅವರ ಮಗ.

ದೆಹಲಿಯಲ್ಲಿ ಬಿಎಂಡಬ್ಲ್ಯು ಅಪಘಾತ

ದೆಹಲಿಯ ಕೆಂಪು ಕೋಟೆಯ ಬಳಿಯ ರಿಂಗ್ ರೋಡ್‌ನಲ್ಲಿ ವೇಗವಾಗಿ ಬಂದ BMW ಕಾರು ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮದಿಂದ ಐದು ಜನರು ಗಾಯಗೊಂಡಿದ್ದರು, ಗೀತಾ ಕಾಲೋನಿಯಿಂದ ರಾಜ್‌ಘಾಟ್‌ಗೆ ತೆರಳುತ್ತಿದ್ದ ಕಾರು ಆಗಸ್ಟ್ 6 ರಂದು ರಾತ್ರಿ 11:30 ಕ್ಕೆ ಹಿಂದಿನಿಂದ ಬಂದು ಎರಡು ಕಾರುಗಳು ದ್ವಿಚಕ್ರ ವಾಹನವನ್ನು ಡಿಕ್ಕಿ ಹೊಡೆದಿದೆ. ಚಾಲಕ ಸುನಿಲ್ ಜೈನ್, ಮಧ್ಯಪ್ರದೇಶದ ಸಾಗರದ ಮಾಜಿ ಸ್ವತಂತ್ರ ಶಾಸಕ ಎಂದು ಗುರುತಿಸಲಾಗಿದೆ.

ತ್ರಿಶೂರ್ ಥಾರ್, BMW ಕಾರು ಅಪಘಾತಗಳು

ಜುಲೈನಲ್ಲಿ, ಮಧ್ಯ ಕೇರಳದ ತ್ರಿಶೂರ್ ಜಿಲ್ಲೆಯ ಕೊಟ್ಟೆಕ್ಕಾಡ್ ಪ್ರದೇಶದಲ್ಲಿ ಮಹೀಂದ್ರಾ ಥಾರ್ ಮತ್ತು ಬಿಎಂಡಬ್ಲ್ಯು ನಡುವೇ ರೇಸ್​ನಿಂದಾಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಮೃತರ ಪತ್ನಿ, ಮಗಳು ಮತ್ತು ಮೊಮ್ಮಗಳು ಹಾಗೂ ಟ್ಯಾಕ್ಸಿ ಚಾಲಕ ಗಾಯಗೊಂಡಿದ್ದಾರೆ.

ದೆಹಲಿ ಗ್ಯಾರೇಜ್ ಮಾಲೀಕನ ಬಿಎಂಡಬ್ಲ್ಯು ಕಾರು ಅಪಘಾತ

BMW ಕಾರು ದಕ್ಷಿಣ ದೆಹಲಿಯ ಗ್ರೇಟರ್ ಕೈಲಾಶ್ ಪ್ರದೇಶದಲ್ಲಿ ಗ್ಯಾರೇಜ್ ಮಾಲೀಕರು ಗ್ರಾಹಕರ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಕೆಂಪು ಬಣ್ಣದ ಬಿಎಂಡಬ್ಲ್ಯು ಕಾರು ಲಜಪತ್ ರಾಯ್ ರಸ್ತೆಯಲ್ಲಿ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದಿದೆ. ವೇಗದಿಂದಾಗಿ ವಾಹನವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಂಟಿ ಚಡ್ಡಾ ಅವರ ಸೋದರಳಿಯ ಬೆಂಟ್ಲಿ ಕಾರು ಆಟೋಗೆ ಡಿಕ್ಕಿ

2019 ರಲ್ಲಿ, ದೆಹಲಿಯ ಚಾಣಕ್ಯಪುರಿ ಪ್ರದೇಶದಲ್ಲಿ ಮದ್ಯದ ದೊರೆ ಪಾಂಟಿ ಚಡ್ಡಾ ಅವರ ಸೋದರಳಿಯ ಅಸಿಸ್ ಸಿಂಗ್ ಚಡ್ಡಾ ಅವರ ಬೆಂಟ್ಲಿ ಕಾರು ಡಿಕ್ಕಿ ಹೊಡೆದು ತುರ್ಕಮೆನಿಸ್ತಾನದ ಮೂವರು ಮಹಿಳಾ ಪ್ರಯಾಣಿಕರು ಗಾಯಗೊಂಡಿದ್ದರು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304A (ಸಾವಿಗೆ ನಿರ್ಲಕ್ಷ್ಯ ಕಾರಣ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

ಇದನ್ನು ಓದಿಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಯಲ್ಲಿ ಕಂಟೈನರ್ ಟ್ರಕ್​ಗೆ ಡಿಕ್ಕಿ ಹೊಡೆದ BMW ಕಾರು, ನಾಲ್ವರು ಸ್ಥಳದಲ್ಲೇ ಸಾವು

ದೆಹಲಿ ಪೊಲೀಸರ ಸಲಹೆ

ಸೈರಸ್ ಮಿಸ್ತ್ರಿ ಅವರ ಕಾರು ಅಪಘಾತದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ನಾಗರಿಕರಿಗೆ ಸಲಹೆ ನೀಡಿದ್ದಾರೆ. ಕಾರನ್ನು ಚಲಿಸುವಾಗ ಹೆಚ್ಚಿನ ವೇಗವನ್ನು ನೀಡದಂತೆ ಮತ್ತು ಯಾವಾಗಲೂ ಸೀಟ್ ಬೆಲ್ಟ್ ಧರಿಸುವಂತೆ ಸಲಹೆಯನ್ನು ನೀಡಿದ್ದಾರೆ. ರಸ್ತೆ ಅಪಘಾತದ ಸಮಯದಲ್ಲಿ ಸುರಕ್ಷತೆಯನ್ನು ಹೇಗೆ ಖಾತ್ರಿಪಡಿಸಿಕೊಳ್ಳುವುದು ಎಂಬುದರ ಕುರಿತು ಪೊಲೀಸರು ಒಂದು ಚಿತ್ರವನ್ನು ಹಂಚಿಕೊಂಡಿದ್ದಾರೆ, ತುರ್ತು ಸಂದರ್ಭದಲ್ಲಿ ಏರ್‌ಬ್ಯಾಗ್‌ಗಳನ್ನು ತೆರೆಯಲು ಮತ್ತು ಅನ್ಪ್ಯಾಕ್ ಮಾಡಲು ಚಾಲಕರು ಮತ್ತು ಪ್ರಯಾಣಿಕರಿಗೆ ಸಲಹೆ ನೀಡಿದರು. ಯಾವುದೇ ಕಾರಣಕ್ಕೂ ಆತುರಪಡಬೇಡಿ. ಕಡ್ಡಾಯವಾಗಿ ಸೀಟ್ ಬೆಲ್ಟ್‌ಗಳನ್ನು ಹಾಕಿಕೊಳ್ಳಲಿ. ರಸ್ತೆ ಸುರಕ್ಷತೆ ಮತ್ತು ದೆಹಲಿ ಪೊಲೀಸ್ ಕೇರ್ಸ್ ಎಂಬ ಹ್ಯಾಶ್‌ಟ್ಯಾಗ್‌ಗಳೊಂದಿಗೆ ದೆಹಲಿ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಅತಿ ಹೆಚ್ಚು ರಸ್ತೆ ಅಪಘಾತದಲ್ಲಿ ಸಾವುಗಳು

ಭಾರತದಲ್ಲಿ ಅಪಘಾತ ಸಾವುಗಳು ಮತ್ತು ಆತ್ಮಹತ್ಯೆಗಳು 2021 ರ ವರದಿಯ ಪ್ರಕಾರ, ದೇಶದಲ್ಲಿ 4.03 ಲಕ್ಷ ಅಪಘಾತಗಳು ದಾಖಲಾಗಿವೆ, ಇದರ ಪರಿಣಾಮವಾಗಿ 1.55 ಲಕ್ಷಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಅಂಕಿಅಂಶಗಳ ಪ್ರಕಾರ ಪ್ರತಿದಿನ ಸರಾಸರಿ 426 ಅಥವಾ ಪ್ರತಿ ಗಂಟೆಗೆ 18 ರಸ್ತೆ ಅಪಘಾತಗಳಲ್ಲಿ 18 ಸಾವುಗಳು ಸಂಭವಿಸುತ್ತವೆ.

59.7 ರಷ್ಟು ರಸ್ತೆ ಅಪಘಾತಗಳು ಮಿತಿಮೀರಿದ ವೇಗದಿಂದ ಸಂಭವಿಸುತ್ತವೆ, ಇದರ ಪರಿಣಾಮವಾಗಿ 87,050 ಸಾವು ಮತ್ತು 2.28 ಲಕ್ಷ ಅಪಘಾತ ಗಾಯಗಳು ಸಂಭವಿಸಿದೆ ಎಂದು ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಎನ್‌ಸಿಆರ್‌ಬಿ ತಿಳಿಸಿದೆ. ಎನ್‌ಸಿಆರ್‌ಬಿ ವರದಿಯು ಕಳೆದ ವರ್ಷ ರಸ್ತೆ ಅಪಘಾತಗಳಲ್ಲಿ ಸಾವಿನ ಸಂಖ್ಯೆ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ಹೆಳಿದೆ. ಆದರೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ರಸ್ತೆ ಅಪಘಾತಗಳು ಮತ್ತು ಗಾಯಗಳ ಸಂಖ್ಯೆ ಕಡಿಮೆಯಾಗಿದೆ. 2020 (0.45) ಮತ್ತು 2019 (0.52) ಗಿಂತ 2021 (0.53) ನಲ್ಲಿ ಪ್ರತಿ ಸಾವಿರ ವಾಹನಗಳ ಸಾವಿನ ಪ್ರಮಾಣ ಹೆಚ್ಚಾಗಿದೆ, ಆದರೆ 2018 (0.56) ಮತ್ತು 2017 (0.59) ಗಿಂತ ಕಡಿಮೆಯಾಗಿದೆ ಎಂದು ವರದಿ ಹೇಳಿದೆ.

Published On - 4:42 pm, Tue, 18 October 22