ಭಾರತದಲ್ಲಿ ಓಮಿಕ್ರಾನ್ ರೂಪಾಂತರಿ BF.7 ಆತಂಕ; ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ತಜ್ಞರ ಸಲಹೆ

ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವುದು ಕೊರೊನಾ ವೈರಸ್ ವಿರುದ್ಧ ಪ್ರಾಥಮಿಕ ರಕ್ಷಣೆಯಾಗಿ ಉಳಿದಿದೆ. ಎರಡು ಅಧ್ಯಯನಗಳ ಪ್ರಕಾರ, BF.7 ಇತರ ಅನೇಕ ಓಮಿಕ್ರಾನ್ ಉಪ ತಳಿಗಿಂತಲೂ ಮುಂಚಿನ ಕಾಯಿಲೆಗಳು ಅಥವಾ ವ್ಯಾಕ್ಸಿನೇಷನ್‌ಗಳ...

ಭಾರತದಲ್ಲಿ ಓಮಿಕ್ರಾನ್ ರೂಪಾಂತರಿ BF.7 ಆತಂಕ; ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ತಜ್ಞರ ಸಲಹೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Oct 18, 2022 | 4:02 PM

ದೆಹಲಿ: ದೀಪಾವಳಿಗೆ ಕೇವಲ ಒಂದು ವಾರ ಬಾಕಿಯಿದ್ದು, ಹೆಚ್ಚು ಸಾಂಕ್ರಾಮಿಕವಾಗಿರುವ ಕೋವಿಡ್ (Covid-19) ರೂಪಾಂತರಿ ಬಿಎಫ್.7 (BF.7)ಮತ್ತು ಬಿಎ.5.1.7 ಬಗ್ಗೆ ಜನರು ಎಚ್ಚರವಹಿಸುವಂತೆ ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.  BF.7 ರೂಪಾಂತರವು ಮೊದಲು ಚೀನಾದಲ್ಲಿ ಪತ್ತೆಯಾಗಿದ್ದು ಈಗ ಯುನೈಟೆಡ್ ಸ್ಟೇಟ್ಸ್, ಯುಕೆ, ಆಸ್ಟ್ರೇಲಿಯಾ ಮತ್ತು ಬೆಲ್ಜಿಯಂನಲ್ಲಿ ಹರಡಿದೆ. ಭಾರತದಲ್ಲಿ ಓಮಿಕ್ರಾನ್ (Omicron) ಉಪ ತಳಿಯ ಮೊದಲ ಪ್ರಕರಣವನ್ನು ಗುಜರಾತ್‌ನಲ್ಲಿ ಪತ್ತೆಹಚ್ಚಲಾಗಿದೆ. ಗುಜರಾತ್ ಬಯೋಟೆಕ್ನಾಲಜಿ ರಿಸರ್ಚ್ ಸೆಂಟರ್ ಇದನ್ನು ದೃಢೀಕರಿಸಿದ್ದು ಇದನ್ನು’ಓಮಿಕ್ರಾನ್ ಸ್ಪಾನ್’ ಎಂದು ವಿವರಿಸಲಾಗಿದೆ.  ಓಮಿಕ್ರಾನ್ ಉಪ ತಳಿಯಾದ BA.5.1.7 ಮತ್ತು BF.7 ಚೀನಾದ ಮಂಗೋಲಿಯಾದ ಪ್ರದೇಶದಿಂದ ಹೊರಹೊಮ್ಮಿದ ನಂತರ ಈಗ ಇತರ ಭಾಗಗಳಿಗೆ ವ್ಯಾಪಿಸಿದ್ದು ಹೊಸ ಬೆದರಿಕೆಗಳನ್ನು ಒಡ್ಡುತ್ತಿದೆ.  ಐದು ದಿನಗಳ ದೀಪಾವಳಿ ಹಬ್ಬವು ಬಹಳಷ್ಟು ಪಾರ್ಟಿಗಳು ಮತ್ತು ಗೆಟ್-ಟುಗೆದರ್‌ಗಳನ್ನು ಒಳಗೊಂಡಿರುವುದರಿಂದ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕೆಂದು ಆರೋಗ್ಯ ತಜ್ಞರು ಸೂಚಿಸಿದ್ದಾರೆ. ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವುದು ಕೊರೊನಾ ವೈರಸ್ ವಿರುದ್ಧ ಪ್ರಾಥಮಿಕ ರಕ್ಷಣೆಯಾಗಿ ಉಳಿದಿದೆ. ಎರಡು ಅಧ್ಯಯನಗಳ ಪ್ರಕಾರ, BF.7 ಇತರ ಅನೇಕ ಓಮಿಕ್ರಾನ್ ಉಪ ತಳಿಗಿಂತಲೂ ಮುಂಚಿನ ಕಾಯಿಲೆಗಳು ಅಥವಾ ವ್ಯಾಕ್ಸಿನೇಷನ್‌ಗಳ ಪ್ರತಿಕಾಯಗಳಿಂದ ಪಾರಾಗಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ದೆಹಲಿಯಲ್ಲಿ ಕೋವಿಡ್ ಪ್ರಕರಣ ಏರಿಕೆ

ಅಧಿಕೃತ ಅಂಕಿಅಂಶಗಳ ಪ್ರಕಾರ ದೆಹಲಿಯಲ್ಲಿ ಕೋವಿಡ್ -19 ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದ್ದು ಪರೀಕ್ಷಾ ಸಕಾರಾತ್ಮಕತೆಯ ದರವು ಶೇಕಡಾ 2 ಕ್ಕಿಂತ ಹೆಚ್ಚಿದೆ. ಕಳೆದ ಎರಡು ದಿನಗಳಲ್ಲಿ ಯಾವುದೇ ಸಾವು ವರದಿಯಾಗದಿದ್ದರೂ, ದೆಹಲಿಯಲ್ಲಿ 135 ಹೊಸ ಕೋವಿಡ್ -19 ಪ್ರಕರಣಗಳು ಕಂಡುಬಂದಿವೆ. ನಗರದಲ್ಲಿ ಕಳೆದ ವಾರ 112 ಪ್ರಕರಣಗಳು ದಾಖಲಾಗಿವೆ. ಶೇಕಡಾ 1.84 ರ ಸಕಾರಾತ್ಮಕ ದರದೊಂದಿಗೆ ಶನಿವಾರ ಪ್ರಕರಣಗಳ ಸಂಖ್ಯೆ 130 ಆಗಿತ್ತು.

ಹೊಸ ಓಮಿಕ್ರಾನ್ ರೂಪಾಂತರವು ಮಾರಕವಾಗಿದೆಯೇ?

ಹೊಸ ರೂಪಾಂತರದ ಪ್ರಸರಣ ದರದ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.ಇದು ಲಸಿಕೆ ಪ್ರತಿರಕ್ಷೆಯನ್ನು ಮೀರಿ ಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಓಮಿಕ್ರಾನ್ BF.7 ನ ಲಕ್ಷಣಗಳು

ಎಲ್ಲಾ ಇತರ ರೂಪಾಂತರಗಳಂತೆ ಓಮಿಕ್ರಾನ್ BF.7 ನ ರೋಗಲಕ್ಷಣಗಳು ಒಂದೇ ಆಗಿರುತ್ತವೆ, ಆದರೆ ದೇಹದ ನೋವುಗಳು ಹೆಚ್ಚು ನೋವುಂಟುಮಾಡುತ್ತವೆ ಎಂದು ತಜ್ಞರು ಹೇಳಿದ್ದಾರೆ. ಉಸಿರು ಕಟ್ಟುವಿಕೆ ಗಂಟಲು ಕೆರತ ಆಯಾಸ ಕೆಮ್ಮು ಮತ್ತು ಶೀತ ನೆಗಡಿ ಜ್ವರ

ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ