- Kannada News Photo gallery Healthy Breakfast Habits: Follow these morning breakfast habits for weight loss
Weight Loss Tips: ತೂಕ ನಷ್ಟಕ್ಕೆ ಬೆಳಿಗ್ಗೆ ಈ ಉಪಹಾರ ಪದ್ಧತಿಗಳನ್ನು ಪಾಲಿಸಿ
ತೂಕ ನಷ್ಟಕ್ಕೆ ಬಂದಾಗ ಬೆಳಗಿನ ಉಪಾಹಾರವು ಮುಖ್ಯವಾಗುತ್ತದೆ. ತೂಕ ನಷ್ಟಕ್ಕೆ ಸಹಾಯ ಮಾಡುವ ಕೆಲವು ಆರೋಗ್ಯಕರ ಉಪಹಾರ ಅಭ್ಯಾಸಗಳು ಇಲ್ಲಿವೆ.
Updated on: Oct 19, 2022 | 6:30 AM

health tips

health tips

ಪ್ರೊಟೀನ್ ಆಹಾರ ಸೇವಿಸಿ: ನೀವು ಬೆಳಗ್ಗೆ ಅಧಿಕ ಪ್ರೊಟೀನ್ ಇರುವ ಆಹಾರವನ್ನು ನಿಯಮಿತವಾಗಿ ತಿನ್ನಬೇಕು. ಯಾಕೆಂದರೆ ಇದು ನಿಮ್ಮ ಆರೋಗ್ಯದ ಜೊತೆಗೆ ಕೊಬ್ಬಿನ ಹೆಚ್ಚಳವನ್ನು ತಪ್ಪಿಸುತ್ತದೆ. ಹಸಿವು ಕಡಿಮೆಗೊಳಿಸಿ ಹೆಚ್ಚಿನ ಕ್ಯಾಲೊರಿ ಇರುವ ಆಹಾರ ಪದಾರ್ಥಗಳನ್ನು ಸೇವಿಸದಂತೆ ನಿಮ್ಮನ್ನು ತಡೆಯುತ್ತದೆ

ಮೊಟ್ಟೆ ಸೇವನೆ ಉತ್ತಮ: ಮೊಟ್ಟೆಗಳು ಉತ್ತಮ ಆಹಾರವಾಗಿದೆ. ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ ಆದರೆ ಪ್ರೋಟೀನ್ ಮತ್ತು ಇತರ ಅಗತ್ಯ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಬೆಳಗಿನ ಉಪಾಹಾರದಲ್ಲಿ ಮೊಟ್ಟೆಗಳನ್ನು ಸೇವಿಸುವುದರಿಂದ ತೂಕ ನಷ್ಟ ಉಂಟಾಗುತ್ತದೆ.

ಬೆಳಗಿನ ಉಪಾಹಾರ ತಪ್ಪಿಸಬೇಡಿ: ತೂಕ ನಷ್ಟ ಮಾಡಿಕೊಳ್ಳಲು ಬೆಳಗ್ಗೆ ತಿಂಡಿ ತಿನ್ನುವುದನ್ನೇ ಸ್ಕಿಪ್ ಮಾಡುತ್ತಾರೆ. ಆದರೆ ಇದು ತಪ್ಪು ಕಲ್ಪನೆ. ನೀವು ಬೆಳಗಿನ ಉಪಹಾರ ತಪ್ಪಿಸಿದರೆ ಅಧಿಕ ತೂಕ ಮತ್ತು ಸ್ಥೂಲಕಾಯದ ಹೆಚ್ಚಿನ ಅಪಾಯವನ್ನು ಹೊಂದುತ್ತೀರಿ.

ಆರೋಗ್ಯಕರ ಆಹಾರಗಳನ್ನು ಸೇವಿಸಿ: ನೀವು ತೂಕವನ್ನು ಕಡಿಮೆ ಮಾಡಲು ಆರೋಗ್ಯಕಾರವಾದ ಆಹಾರವನ್ನು ಸೇವನೆ ಮಾಡಬೇಕು. ನಿಮ್ಮ ಕ್ಯಾಲೊರಿಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಆರೋಗ್ಯಕರ ಆಹಾರವನ್ನು ಆರಿಸಿಕೊಳ್ಳಿ. ಫೈಬರ್‌ನಲ್ಲಿ ಸಮೃದ್ಧವಾಗಿರುವ ಆಹಾರಗಳನ್ನು ಸೇವನೆ ಮಾಡಿ. ಇದು ನಿಮ್ಮ ಹೃದಯದ ಆರೋಗ್ಯಕ್ಕೂ ಉತ್ತಮ.
