ಇಂದು ಶಾಂಘೈ ಸಹಕಾರ ಸಂಘಟನೆಯ 21ನೇ ಶೃಂಗಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi), ಹೆಚ್ಚುತ್ತಿರುವ ತೀವ್ರಗಾಮಿತ್ವ ಜಗತ್ತಿನ ಶಾಂತಿ, ಭದ್ರತೆ, ಪ್ರಾದೇಶಿಕತೆಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಹೇಳಿದ್ದಾರೆ. ಶಾಂಘೈ ಶೃಂಗಸಭೆ (SCO Summit) ತಜಕಿಸ್ತಾನದ ರಾಜಧಾನಿ ದುಶಾಂಬೆಯಲ್ಲಿ ನಡೆದಿದ್ದು, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಪಾಲ್ಗೊಂಡಿದ್ದಾರೆ. ಹಾಗೇ, ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದಾರೆ.
ಶೃಂಗಸಭೆಯಲ್ಲಿ 6 ನಿಮಿಷಗಳ ಕಾಲ ಮಾತನಾಡಿದ ಪ್ರಧಾನಿ ಮೋದಿ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಬಂದ ನಂತರದ ಪರಿಸ್ಥಿತಿಯ ಬಗ್ಗೆ ಮಾತನಾಡಿದರು. ಶಾಂತಿ-ಭದ್ರತೆಯ ಬಗ್ಗೆಯೇ ಹೆಚ್ಚಾಗಿ ಮಾತನಾಡಿದ ಪ್ರಧಾನಿ ಮೋದಿ, ತೀವ್ರವಾದದಿಂದ ಎದುರಾಗುತ್ತಿರುವ ಸವಾಲುಗಳನ್ನು ಎದುರಿಸಲು ಶಾಂಘೈ ಸಹಕಾರ ಸಂಘಟನೆ (SCO) ಒಂದು ಸಾಮಾನ್ಯ ವಿನ್ಯಾಸದ ಯೋಜನೆ ರೂಪಿಸಬೇಕು ಎಂದು ಹೇಳಿದ್ದಾರೆ.
ಇಂದು ಎಸ್ಸಿಒದ 20ನೇ ಶೃಂಗಸಭೆ. ಈ ಸಂಘಟನೆಯ ಭವಿಷ್ಯದ ಬಗ್ಗೆ ಯೋಜನೆ ರೂಪಿಸಲು ಇದ ಸರಿಯಾದ ಸಮಯವಾಗಿದೆ. ಅದರಲ್ಲೂ ಶಾಂತಿ, ಭದ್ರತೆ ಕ್ಷೇತ್ರದಲ್ಲಿ ಬಹುದೊಡ್ಡ ಸವಾಲಿದೆ. ಅದಕ್ಕೆ ಇತ್ತೀಚೆಗೆ ಅಫ್ಘಾನಿಸ್ತಾನದಲ್ಲಿ ನಡೆದ ಬೆಳವಣಿಗೆಯೇ ಪ್ರಮುಖ ಸಾಕ್ಷಿ. ತೀವ್ರವಾದದ ವಿರುದ್ಧ ಹೋರಾಡಲು ಯಾವುದೇ ಒಂದು ದೇಶದಿಂದ, ಒಬ್ಬರಿಂದ ಸಾಧ್ಯವಿಲ್ಲ. ಎಲ್ಲರೂ ಒಗ್ಗಟ್ಟಾಗಬೇಕು ಎಂದು ಹೇಲಿದರು. ಹಾಗೇ, ಶಾಂಘೈ ಸಂಘಟನೆಗೆ ಈ ಬಾರಿ ಹೊಸದಾಗಿ ಸೇರ್ಪಡೆಯಾದ ಇರಾನ್ಗೆ ಸ್ವಾಗತಕೋರಿದರು.
ಇದನ್ನೂ ಓದಿ: ರವಿಚಂದ್ರನ್ ತಾಯಿ ಬಗ್ಗೆ ಡಾಕ್ಟರ್ ಹೇಳಿದ್ದೇ ಸುಳ್ಳಾಯ್ತು; ಅಮ್ಮನನ್ನು ಬದುಕಿಸಿದ ಆ ಶಕ್ತಿ ಯಾವುದು?
Vaccination: ದೇಶದಲ್ಲಿ ಇಂದು ಬೃಹತ್ ಲಸಿಕೆ ಮೇಳ; ಈಗಾಗಲೇ 1 ಕೋಟಿ ಡೋಸ್ ಲಸಿಕೆ ನೀಡಿ ದಾಖಲೆ