ಅಮಾನತು ಪ್ರಕರಣ: ರಾಜ್ಯಸಭಾ ಅಧ್ಯಕ್ಷರ ಕ್ಷಮೆ ಕೇಳಲು ಒಪ್ಪಿದ ರಾಘವ್ ಚಡ್ಡಾ

|

Updated on: Nov 03, 2023 | 4:01 PM

ಸಂಸತ್ತಿನ ಮುಂಗೂರು ಅಧಿವೇಶನದಲ್ಲಿ ರಾಜ್ಯಸಭೆಯಿಂದ ಅಮಾನತುಗೊಂಡ ಎರಡನೇ ಎಎಪಿ ಸಂಸದರಾಗಿದ್ದಾರೆ ಚಡ್ಡಾ. ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 4 ರಂದು ಜಾರಿ ನಿರ್ದೇಶನಾಲಯದಿಂದ ಬಂಧಿಸಲ್ಪಟ್ಟಿದ್ದ ಹಿರಿಯ ನಾಯಕ ಸಂಜಯ್ ಸಿಂಗ್ ಅವರನ್ನು ಜುಲೈ 24 ರಂದು ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿತ್ತು.

ಅಮಾನತು ಪ್ರಕರಣ: ರಾಜ್ಯಸಭಾ ಅಧ್ಯಕ್ಷರ ಕ್ಷಮೆ ಕೇಳಲು ಒಪ್ಪಿದ ರಾಘವ್ ಚಡ್ಡಾ
ರಾಘವ್ ಚಡ್ಡಾ
Follow us on

ದೆಹಲಿ ನವೆಂಬರ್ 03: ಸದನದಿಂದ ಅಮಾನತುಗೊಂಡಿರುವ ಕುರಿತು ರಾಜ್ಯಸಭಾ ಅಧ್ಯಕ್ಷರ ಕ್ಷಮೆಯಾಚಿಸಬೇಕು ಎಂದು ಸುಪ್ರೀಂಕೋರ್ಟ್ (Supreme Court) ಇಂದು (ಶುಕ್ರವಾರ) ಆಪ್ (AAP) ಸಂಸದ ರಾಘವ್ ಚಡ್ಡಾಗೆ (Raghav Chadha) ಹೇಳಿದೆ. ಕ್ಷಮಾಪಣೆಯನ್ನು ಸಹಾನುಭೂತಿಯಿಂದ ಪರಿಗಣಿಸುವಂತೆ ನ್ಯಾಯಾಲಯವು ರಾಜ್ಯಸಭಾ ಅಧ್ಯಕ್ಷರಿಗೂ ಹೇಳಿದೆ. “ವಿಚಾರಣೆಯ ಸಮಯದಲ್ಲಿ, ಎರಡೂ ಕಡೆಯವರಿಗೆ ಮುಂದಿನ ಮಾರ್ಗವನ್ನು ಸೂಚಿಸಲಾಗಿದೆ. ಅರ್ಜಿದಾರರು ಅವರು ಅಪಾಯಿಂಟ್‌ಮೆಂಟ್ ಕೇಳಲು ಮತ್ತು ದಾಖಲೆಯಲ್ಲಿ ಕ್ಷಮೆಯಾಚಿಸಲು ಸೂಚಿಸಿದ್ದಾರೆ, ಇದನ್ನು ರಾಜ್ಯಸಭಾ ಅಧ್ಯಕ್ಷರು ಸಹಾನುಭೂತಿಯಿಂದ ಪರಿಗಣಿಸುತ್ತಾರೆ”ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿದೆ.

ನಾಲ್ವರು ಸಂಸದರು ತಮ್ಮ ಒಪ್ಪಿಗೆಯಿಲ್ಲದೆ ಅವರನ್ನು ಸದನ ಸಮಿತಿಯಲ್ಲಿ ಹೆಸರಿಸುವ ಮೂಲಕ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ರಾಘವ್ ಚಡ್ಡಾ ಅವರನ್ನು ಆಗಸ್ಟ್ 1 ರಂದು “ಸವಲತ್ತು ಉಲ್ಲಂಘನೆ” ಗಾಗಿ ರಾಜ್ಯಸಭೆಯಿಂದ ಅಮಾನತುಗೊಳಿಸಲಾಯಿತು. ಸವಲತ್ತುಗಳ ಸಮಿತಿಯು ತನ್ನ ಸಂಶೋಧನೆಗಳನ್ನು ಸಲ್ಲಿಸುವವರೆಗೆ ಶ ಚಡ್ಡಾ ಅವರನ್ನು ಅಮಾನತುಗೊಳಿಸಲು ಸದನದ ನಾಯಕ ಪಿಯೂಷ್ ಗೋಯಲ್ ಅವರು ಮಂಡಿಸಿದ ನಿರ್ಣಯವನ್ನು ಸಂಸತ್ತಿನ ಮೇಲ್ಮನೆ ಅಂಗೀಕರಿಸಿತು.


ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ರಾಜ್ಯಸಭೆಯಿಂದ ಅಮಾನತುಗೊಂಡ ಎರಡನೇ ಎಎಪಿ ಸಂಸದರಾಗಿದ್ದಾರೆ ಚಡ್ಡಾ. ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 4 ರಂದು ಜಾರಿ ನಿರ್ದೇಶನಾಲಯದಿಂದ ಬಂಧಿಸಲ್ಪಟ್ಟಿದ್ದ ಹಿರಿಯ ನಾಯಕ ಸಂಜಯ್ ಸಿಂಗ್ ಅವರನ್ನು ಜುಲೈ 24 ರಂದು ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿತ್ತು.

ಎಎಪಿ ನಾಯಕರು ರಾಜ್ಯಸಭಾ ಅಧ್ಯಕ್ಷರನ್ನು ಭೇಟಿಯಾಗಿ ವೈಯಕ್ತಿಕವಾಗಿ ಕ್ಷಮೆಯಾಚಿಸಲು ಸಿದ್ಧರಾಗಿದ್ದಾರೆ ಎಂದು ಇಂದಿನ ವಿಚಾರಣೆಯ ಸಂದರ್ಭದಲ್ಲಿ ಚಡ್ಡಾ ಅವರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ: ಮದುವೆ ಆದ ಕೆಲವೇ ದಿನಗಳಲ್ಲಿ ರಾಘವ್ ಚಡ್ಡಾಗೆ ಶಾಕ್; ಮನೆ ಖಾಲಿ ಮಾಡಲು ಆದೇಶಿಸಿದ ಕೋರ್ಟ್

ಕೇಂದ್ರವನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಚಡ್ಡಾ ಕ್ಷಮೆಯಾಚಿಸುವುದು ಉತ್ತಮ ಆಯ್ಕೆಯಾಗಿದೆ ಎಂದು ಒಪ್ಪಿಕೊಂಡರು. ನವೆಂಬರ್ 20 ರಂದುಈ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಲು ಎರಡೂ ಕಡೆಯವರಿಗೆ ಹೇಳಲಾಗಿದೆ.
ಗೌರವಾನ್ವಿತ ಸುಪ್ರೀಂ ಕೋರ್ಟ್‌ನ ಆದೇಶದ ಅನುಸಾರ ಇಂದು ನಾನು ರಾಜ್ಯಸಭೆಯ ಗೌರವಾನ್ವಿತ ಅಧ್ಯಕ್ಷರನ್ನು ಖುದ್ದಾಗಿ ಭೇಟಿ ಮಾಡಲಿದ್ದೇನೆ.ನಾನು ಸಂಸತ್ ಸದಸ್ಯನಾಗಿ ನನ್ನನ್ನು ಅಮಾನತುಗೊಳಿಸಿರುವ ಸಂಬಂಧದಲ್ಲಿ ಪೂರ್ವಭಾವಿ ಸಭೆಗಾಗಿ ಗೌರವಾನ್ವಿತ ಅಧ್ಯಕ್ಷರಿಂದ ಅಪಾಯಿಂಟ್‌ಮೆಂಟ್ ಕೇಳಿದ್ದೇನೆ ಎಂದು ಚಡ್ಡಾ ಟ್ವೀಟ್ ಮಾಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 4:00 pm, Fri, 3 November 23