ಮದುವೆ ಆದ ಕೆಲವೇ ದಿನಗಳಲ್ಲಿ ರಾಘವ್ ಚಡ್ಡಾಗೆ ಶಾಕ್; ಮನೆ ಖಾಲಿ ಮಾಡಲು ಆದೇಶಿಸಿದ ಕೋರ್ಟ್
ಈ ಬಂಗಲೆ ಖಾಲಿ ಮಾಡುವಂತೆ ಮಾರ್ಚ್ನಲ್ಲೇ ರಾಘವ್ ಚಡ್ಡಾಗೆ ರಾಜ್ಯಸಭಾ ಕಾರ್ಯದರ್ಶಿ ಸೂಚನೆ ನೀಡಿದ್ದರು. ಜೊತೆಗೆ ಬೇರೆ ಫ್ಲಾಟ್ನ ಅವರಿಗೆ ನಿಗದಿಪಡಿಸಲಾಗಿತ್ತು. ಆದಾಗ್ಯೂ ಅವರು ಇದನ್ನು ಖಾಲಿ ಮಾಡಿರಲಿಲ್ಲ.
ಆಪ್ ನಾಯಕ, ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ (Raghav Chadha) ಹಾಗೂ ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಇತ್ತೀಚೆಗಷ್ಟೇ ಮದುವೆ ಆದರು. ಅದ್ದೂರಿ ಮದುವೆಯಲ್ಲಿ ಸಾಕಷ್ಟು ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ಇದಾದ ಕೆಲವೇ ದಿನಗಳಲ್ಲಿ ರಾಘವ್ ಚಡ್ಡಾಗೆ ಕೋರ್ಟ್ ಛಾಟಿ ಬೀಸಿದೆ. ಅವರಿಗೆ ನೀಡಿದ್ದ ಸರ್ಕಾರಿ ಬಂಗಲೆಯನ್ನು ಶೀಘ್ರವೇ ಖಾಲಿ ಮಾಡುವಂತೆ ಕೋರ್ಟ್ ಸೂಚನೆ ನೀಡಿದೆ. ಅಷ್ಟಕ್ಕೂ ಏನಿದು ಪ್ರಕರಣ ಎನ್ನುವ ಬಗ್ಗೆ ಇಲ್ಲಿದೆ ವಿವರ.
ರಾಘವ್ ಚಡ್ಡಾಗೆ 2022ರ ಜುಲೈನಲ್ಲಿ ಟೈಪ್ 6 ಬಂಗಲೆಯನ್ನು ನೀಡಲಾಯಿತು. ಈ ವೇಳೆ ರಾಜ್ಯಸಭಾ ಅಧ್ಯಕ್ಷರ ಬಳಿ ರಾಘವ್ ಅವರು ವಿಶೇಷ ಮನವಿ ಮಾಡಿಕೊಂಡರು. ತಮಗೆ ಟೈಪ್ 7 ಬಂಗಲೆ ನೀಡುವಂತೆ ಬೇಡಿಕೆ ಇಟ್ಟರು. ಅಂತೆಯೇ ದೆಹಲಿಯ ಪಾಂಡಾರ ರಸ್ತೆಯಲ್ಲಿರುವ ಟೈಪ್ 7 ಬಂಗಲೆಯನ್ನು ನೀಡಲಾಯಿತು. ಈ ಬಂಗಲೆ ಖಾಲಿ ಮಾಡುವಂತೆ ಮಾರ್ಚ್ನಲ್ಲೇ ರಾಘವ್ ಚಡ್ಡಾಗೆ ರಾಜ್ಯಸಭಾ ಕಾರ್ಯದರ್ಶಿ ಸೂಚನೆ ನೀಡಿದ್ದರು. ಜೊತೆಗೆ ಬೇರೆ ಫ್ಲಾಟ್ನ ಅವರಿಗೆ ನಿಗದಿಪಡಿಸಲಾಗಿತ್ತು. ಆದಾಗ್ಯೂ ಅವರು ಇದನ್ನು ಖಾಲಿ ಮಾಡಿರಲಿಲ್ಲ.
ಸಾಮಾನ್ಯವಾಗಿ ಟೈಪ್-7 ಸರ್ಕಾರಿ ಬಂಗಲೆಯನ್ನು ಮಾಜಿ ಸಚಿವರು, ಮುಖ್ಯಮಂತ್ರಿ ಅಥವಾ ಗವರ್ನರ್ಗಳಿಗೆ ನೀಡಲಾಗುತ್ತದೆ. ರಾಘವ್ ಚಡ್ಡಾ ಮೊದಲ ಬಾರಿಗೆ ಸಂಸದರಾಗಿರುವುದು. ಅವರಿಗೆ ಈ ಬಂಗಲೆಯನ್ನು ನೀಡಿದ ಬಗ್ಗೆ ಪ್ರಶ್ನೆ ಎದ್ದಿತ್ತು. ಬಂಗಲೆಯನ್ನು ಖಾಲಿ ಮಾಡುವ ಆದೇಶವ ನೀಡಲಾಯಿತು. ಇದನ್ನು ರಾಘವ್ ಅವರು ದೆಹಲಿಯ ಪಟಿಯಾಲಾ ಕೋರ್ಟ್ನಲ್ಲಿ ಪ್ರಶ್ನೆ ಮಾಡಿದ್ದರು. ಈ ವೇಳೆ ರಾಘವ್ ಪರವಾಗಿ ಆದೇಶ ಬಂದಿತ್ತು. ಇದನ್ನು ದೆಹಲಿ ಕೋರ್ಟ್ನಲ್ಲಿ ಪ್ರಶ್ನೆ ಮಾಡಲಾಯಿತು.
ಇದನ್ನೂ ಓದಿ: ಪರಿಣೀತಿ ಚೋಪ್ರಾ-ರಾಘವ್ ಚಡ್ಡಾ ಮದುವೆಗೆ ಕ್ಷಣಗಣನೆ; ಮೊಬೈಲ್ ಬಳಕೆ ಬ್ಯಾನ್
ಅರ್ಜಿ ವಿಚಾರಣೆ ನಡೆಸಿರುವ ಕೋರ್ಟ್, ‘ನಿಮಗೆ ನೀಡಿದ ಸವಲತ್ತುಗಳ ಮೇಲೆ ಸಂಪೂರ್ಣವಾಗಿ ಹಕ್ಕು ಸಾಧಿಸೋಕೆ ಬರಲ್ಲ. ಕೊಟ್ಟಿರುವ ಬಂಗಲೆ ರದ್ದಾದ ನಂತರವೂ ಅದರಲ್ಲಿ ಮುಂದುವರಿಯಲು ನಿಮಗೆ ಹಕ್ಕಿಲ್ಲ’ ಎಂದು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಸುಧಾನ್ಶು ಕೌಶಿಕ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ