ಗೋವಾದಿಂದ ಜಾಕ್ ರಸೆಲ್ ಟೆರಿಯರ್ ನಾಯಿಯೊಂದಿಗೆ ದೆಹಲಿಗೆ ಬಂದ ರಾಹುಲ್ ಗಾಂಧಿ

|

Updated on: Aug 04, 2023 | 12:54 PM

ರಾಹುಲ್​​ ಗಾಂಧಿ ಅವರು ಗೋವಾದಿಂದ ದೆಹಲಿಯತ್ತ ಪಯಣ ಬೆಳೆಸಬೇಕಾದರೆ, ತಮ್ಮ ಜತೆಗೆ ಮೂರು ತಿಂಗಳ ಜಾಕ್ ರಸೆಲ್ ಟೆರಿಯರ್ ನಾಯಿಮರಿಯನ್ನು ಕೂಡ ಕರೆದುಕೊಂಡು ಹೋಗಿದ್ದಾರೆ.

ಗೋವಾದಿಂದ ಜಾಕ್ ರಸೆಲ್ ಟೆರಿಯರ್ ನಾಯಿಯೊಂದಿಗೆ ದೆಹಲಿಗೆ ಬಂದ ರಾಹುಲ್ ಗಾಂಧಿ
ರಾಹುಲ್​​ ಗಾಂಧಿ ಜತೆ ಶಿವಾನಿ ಪಿತ್ರೆ ದಂಪತಿ
Follow us on

ದೆಹಲಿ, ಆ.4: ಗೋವಾಕ್ಕೆ ಖಾಸಗಿ ಭೇಟಿ ನೀಡಿದ್ದ ಕಾಂಗ್ರೆಸ್​​ ನಾಯಕ ರಾಹುಲ್​ ಗಾಂಧಿ (Rahul Gandhi) ಅವರು ದೆಹಲಿಯತ್ತ ಪಯಣ ಬೆಳೆಸುವ ಸಂದರ್ಭದಲ್ಲಿ ತಮ್ಮ ಜತೆಗೆ ಮೂರು ತಿಂಗಳ ಜಾಕ್ ರಸೆಲ್ ಟೆರಿಯರ್ ನಾಯಿಮರಿಯನ್ನು ಕೂಡ ಕರೆದುಕೊಂಡು ಹೋಗಿದ್ದಾರೆ. ಬುಧವಾರ (ಆ.2) ರಾತ್ರಿ ಗೋವಾಕ್ಕೆ ಬಂದಿದ್ದ ಅವರು, ಗುರುವಾರ (ಆ.3) ಬೆಳಿಗ್ಗೆ ದೆಹಲಿಯತ್ತ ಪಯಣ ಬೆಳೆಸಿದ್ದರು. ಈ ಸಂದರ್ಭದಲ್ಲಿ ಉತ್ತರ ಗೋವಾದ ಮಾಪುಸಾ ಪಟ್ಟಣದಲ್ಲಿ ದಂಪತಿಗಳಿಬ್ಬರು ನಡೆಸುತ್ತಿದ್ದ ಡಾಗ್ ಕೆನಲ್​​ಗೆ (dog kennel) ​​​ಭೇಟಿ ನೀಡಿದ್ದಾರೆ. ತನ್ನ ಪತಿ ಸ್ಟಾನ್ಲಿ ಬ್ರಗಾಂಕಾ ಜತೆಗೆ ಸೇರಿ ಶಿವಾನಿ ಪಿತ್ರೆ ಅವರು ಈ ಡಾಗ್ ಕೆನಲ್​​ನ್ನು ನಡೆಸುತ್ತಿದ್ದು, ರಾಹುಲ್​​ ಗಾಂಧಿ ಭೇಟಿ ನೀಡಿದ ಸಂದರ್ಭದಲ್ಲಿ ಒಂದು ಶ್ವಾನವನ್ನು ಉಡುಗೊರೆಯಾಗಿ ನೀಡಿದ್ದಾರೆ. ಆದರೆ ಅವರು ಎರಡು ಶ್ವಾನಗಳನ್ನು ನೀಡುವಂತೆ ಕೇಳಿಕೊಂಡಾಗ, ಖಂಡಿತ ಎರಡು ಶ್ವಾನಗಳನ್ನು ನಿಮ್ಮ ಜತೆಗೆ ಕಳುಹಿಸುತ್ತೇವೆ ಎಂದು ದಂಪತಿಗಳು ಹೇಳಿದ್ದಾರೆ.

ಇನ್ನು ರಾಹುಲ್​​ ಗಾಂಧಿ ಅವರು ಈ ಹಿಂದೆಯೇ ದಂಪತಿಗಳು ನಡೆಸುತ್ತಿದ್ದ ಡಾಗ್ ಕೆನಲ್​​ ಬಗ್ಗೆ ತಿಳಿದುಕೊಳ್ಳಲು ತಮ್ಮ ಪ್ರತಿನಿಧಿಯನ್ನು ಇಲ್ಲಿಗೆ ಕಳುಹಿಸಿದ್ದರು, ಆದರೆ ಶಿವಾನಿ ಪಿತ್ರೆ ಅವರು ರಾಹುಲ್​​ ಅವರು ಖುದ್ದಾಗಿ ಬಂದು ನೋಡಬೇಕು ಎಂದು ಹೇಳಿದ್ದರು. ಗುರುವಾರ (ಆ.3) ಬೆಳಿಗ್ಗೆ 9 ಗಂಟೆ ಸುಮಾರಿಗೆ ಉತ್ತರ ಗೋವಾದ ಮೋಪಾದಲ್ಲಿರುವ ಮನೋಹರ್​ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಮಾರ್ಗದಲ್ಲಿ ರಾಹುಲ್ ಗಾಂಧಿ ಅವರು ಮಾಪುಸಾ ಪಟ್ಟಣದಲ್ಲಿರುವ ಡಾಗ್​​ ಕೆನಲ್​​ಗೆ ಭೇಟಿ ನೀಡಿದ್ದಾರೆ.

ಇದನ್ನೂ ಓದಿ: ಭ್ರಷ್ಟಾಚಾರದ ಆರೋಪಗಳ ಬಗ್ಗೆ ರಾಹುಲ್ ಗಾಂಧಿ ಚರ್ಚೆ ಮಾಡಲಿಲ್ಲ: ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ

ರಾಹುಲ್​​ ಗಾಂಧಿ ಅವರ ಈ ನಡೆಗೆ ದಂಪತಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಒಂದು ರಾಷ್ಟ್ರೀಯ ಪಕ್ಷದ ನಾಯಕ ಸಾಮಾನ್ಯ ವ್ಯಕ್ತಿಯಂತೆ ನಡೆದುಕೊಂಡದ್ದು ತುಂಬಾ ಖುಷಿಯಾಗಿದೆ. ರಾಹುಲ್​​ ಗಾಂಧಿ ಅವರು ಡೌನ್​​ ಟು ಅರ್ಥ್ ವ್ಯಕ್ತಿತ್ವವನ್ನು ಹೊಂದಿದ್ದಾರೆ​ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ತಮ್ಮ ಮನೆಗೂ ರಾಹುಲ್​​ ಗಾಂಧಿ ಭೇಟಿ ನೀಡಿ. ಶ್ವಾನಗಳ ಜತೆಗೆ ಕಾಲಕಳೆದು, ನಂತರ ದೆಹಲಿಗೆ ತೆರಳಿದ್ದಾರೆ ಎಂದು ಶಿವಾನಿ ಪಿತ್ರೆ ಹೇಳಿದ್ದಾರೆ. ಗೋವಾದಲ್ಲಿ ರಾಹುಲ್​​ ಗಾಂಧಿ ಅವರು ಕಾಂಗ್ರೆಸ್​ ಶಾಸಕರು ಮತ್ತು ಪಕ್ಷದ ಹಿರಿಯರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 12:49 pm, Fri, 4 August 23