2019-20 ನೇ ಸಾಲಿನಲ್ಲಿ ಸುಮಾರು ಒಂದು ಕೋಟಿಗೂ ಅಧಿಕ ಪ್ರಯಾಣಿಕರು, ರೈಲಿನಲ್ಲಿ ಟಿಕೆಟ್ ಪಡೆಯದೆ ಪ್ರಯಾಣಿಸಿದ್ದಾರೆ. ಈ ಹಿನ್ನಲೆಯಲ್ಲಿ ರೈಲ್ವೆ ಅಧಿಕಾರಿಗಳು ಟಿಕೆಟ್ ರಹಿತ ಪ್ರಯಾಣಿಕರಿಗೆ ವಿಧಿಸಿದ ದಂಡದಿಂದ ರೈಲ್ವೆ ಇಲಾಖೆ 561.73 ಕೋಟಿ ರೂ ಲಾಭ ಗಳಿಸಿದೆ. ಮಧ್ಯಪ್ರದೇಶ ಮೂಲದ RTI ಕಾರ್ಯಕರ್ತ ಚಂದ್ರಶೇಖರ್ ಗೌರ್ ಸಲ್ಲಿಸಿದ ಆರ್‌ಟಿಐ ಅರ್ಜಿಗೆ,ಸಂಬಂದಪಟ್ಟ ಇಲಾಖೆ ನೀಡಿದ ಮಾಹಿತಿಯಿಂದಾಗಿ ಈ ವಿಚಾರ ಬಹಿರಂಗಗೊಂಡಿದೆ.
ವರ್ಷ ವರ್ಷವೂ ಹೆಚ್ಚಾಗ್ತಿದ್ದಾರೆ ಟಿಕೆಟ್ ರಹಿತ ಪ್ರಯಾಣಿಕರು..!
ರೈಲ್ವೆ 2016-17ರಲ್ಲಿ ಟಿಕೆಟ್ ರಹಿತ ಪ್ರಯಾಣಿಕರಿಂದ ದಂಡವಾಗಿ 405.30 ಕೋಟಿ ರೂ, 2017-18ರಲ್ಲಿ 441.62 ಕೋಟಿ ರೂ, ಮತ್ತು 2018-19ರಲ್ಲಿ 530.06 ಕೋಟಿ ರೂ. ಲಾಭಗಳಿಸಿದೆ. 2019-2020ರಲ್ಲಿ 1.10 ಕೋಟಿ ಪ್ರಯಾಣಿಕರು ಮಾನ್ಯ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿರುವುದು ಕಂಡುಬಂದಿದೆ.
ಟಿಕೆಟ್ ರಹಿತ ಪ್ರಯಾಣವನ್ನು ತಡೆಯಲು ಭಾರತೀಯ ರೈಲ್ವೆ ನಿಯಮಗಳನ್ನು ರೂಪಿಸಿದ್ದು, ಟಿಕೆಟ್ ಇಲ್ಲದೆ ಪ್ರಯಾಣಿಸುವ ಪ್ರಯಾಣಿಕ ಟಿಕೆಟ್ ವೆಚ್ಚದ ಜೊತೆಗೆ ಕನಿಷ್ಠ 250 ರೂ ದಂಡ ಕಟ್ಟಬೇಕು.ಅಥವಾ ಪ್ರಯಾಣಿಕ ದಂಡ ಪಾವತಿಸಲು ನಿರಾಕರಿಸಿದರೆ, ವ್ಯಕ್ತಿಯನ್ನು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್ಪಿಎಫ್) ಗೆ ಹಸ್ತಾಂತರಿಸಲಾಗುತ್ತದೆ. ಮತ್ತು ರೈಲ್ವೆ ಕಾಯ್ದೆಯ ಸೆಕ್ಷನ್ 137 ರ ಅಡಿಯಲ್ಲಿ ಕೇಸ್ ಬುಕ್ ಮಾಡಲಾಗುತ್ತದೆ.
ಬಳಿಕ ವ್ಯಕ್ತಿಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗುತ್ತದೆ. ಮ್ಯಾಜಿಸ್ಟ್ರೇಟ್ ಅವನಿಗೆ 1,000 ರೂ ದಂಡ ಕಟ್ಟಬೇಕು. ಒಂದು ವೇಳೆ ವ್ಯಕ್ತಿ ದಂಡವನ್ನು ಪಾವತಿಸಲು ನಿರಾಕರಿಸಿದರೆ, ಅವನು ಅಥವಾ ಅವಳು ಆರು ತಿಂಗಳವರೆಗೆ ಜೈಲುವಾಸ ಅನುಭವಿಸಬೇಕು ಎಂದು ಫರ್ಮಾನು ಹೊರಡಿಸುತ್ತಾರೆ!
Published On - 1:48 pm, Mon, 24 August 20