SBI ನಲ್ಲಿ ಮತ್ತೊಂದು ಭಾರೀ ಗೋಲ್‌ಮಾಲ್! ಎಣ್ಣೆ ಕಂಪನಿ ಮೇಲೆ CBI ದಾಳಿ
ಭೋಪಾಲ್: ಭಾರತೀಯ ಸ್ಟೇಟ್ ಬ್ಯಾಂಕ್‌ಗೂ ಹಗರಣಗಳಿಗೂ ಗಳಸ್ಯ-ಕಂಠಸ್ಯ ಅಂತಾ ಕಾಣುತ್ತೆ. ಯಾಕಂದ್ರೆ ಸದಾ ಒಂದಿಲ್ಲೊಂದು ಹಗರಣಗಳಲ್ಲಿ ಬ್ಯಾಂಕಿನ ಹೆಸರು ಥಳಕು ಹಾಕಿಕೊಳ್ಳುತ್ತಲೇ ಇದೆ. ಲೇಟೆಸ್ಟ್ ಸಮಾಚಾರ ಅಂದ್ರೆ ಮಧ್ಯಪ್ರದೇಶದ ಕಂಪನಿಯೊಂದಕ್ಕೆ ನೀಡಿದ ಸಾಲದಲ್ಲಿ ಗೋಲ್‌ಮಾಲ್ ಕಂಡು ಬಂದಿದ್ದು, ಸಿಬಿಐ ಈ ಕಂಪನಿಯ ಮೇಲೆ ದಾಳಿ ನಡೆಸಿದೆ. ಹೌದು ಮಧ್ಯಪ್ರದೇಶದ ಮೊರೆನಾ ನಗರದ ಕೆ ಎಸ್ ಆಯಿಲ್ಸ್ ಲಿಮಿಟೆಡ್ ಕಂಪನಿ ಸ್ಟೇಟ್ ಬ್ಯಾಂಕ್‌ನಿಂದ ಸಾಲ ಪಡೆಯುವಾಗ ತನ್ನ ಬಳಿ ಇರುವ ಸ್ವತ್ತುಗಳು ಮತ್ತು ವ್ಯಾಪಾರ ವಹಿವಾಟಿನ ಬಗ್ಗೆ ಸುಳ್ಳು […]
ಭೋಪಾಲ್: ಭಾರತೀಯ ಸ್ಟೇಟ್ ಬ್ಯಾಂಕ್‌ಗೂ ಹಗರಣಗಳಿಗೂ ಗಳಸ್ಯ-ಕಂಠಸ್ಯ ಅಂತಾ ಕಾಣುತ್ತೆ. ಯಾಕಂದ್ರೆ ಸದಾ ಒಂದಿಲ್ಲೊಂದು ಹಗರಣಗಳಲ್ಲಿ ಬ್ಯಾಂಕಿನ ಹೆಸರು ಥಳಕು ಹಾಕಿಕೊಳ್ಳುತ್ತಲೇ ಇದೆ. ಲೇಟೆಸ್ಟ್ ಸಮಾಚಾರ ಅಂದ್ರೆ ಮಧ್ಯಪ್ರದೇಶದ ಕಂಪನಿಯೊಂದಕ್ಕೆ ನೀಡಿದ ಸಾಲದಲ್ಲಿ ಗೋಲ್‌ಮಾಲ್ ಕಂಡು ಬಂದಿದ್ದು, ಸಿಬಿಐ ಈ ಕಂಪನಿಯ ಮೇಲೆ ದಾಳಿ ನಡೆಸಿದೆ.
ಹೌದು ಮಧ್ಯಪ್ರದೇಶದ ಮೊರೆನಾ ನಗರದ ಕೆ ಎಸ್ ಆಯಿಲ್ಸ್ ಲಿಮಿಟೆಡ್ ಕಂಪನಿ ಸ್ಟೇಟ್ ಬ್ಯಾಂಕ್‌ನಿಂದ ಸಾಲ ಪಡೆಯುವಾಗ ತನ್ನ ಬಳಿ ಇರುವ ಸ್ವತ್ತುಗಳು ಮತ್ತು ವ್ಯಾಪಾರ ವಹಿವಾಟಿನ ಬಗ್ಗೆ ಸುಳ್ಳು ದಾಖಲೆ ನೀಡಿದೆ. ಹೀಗೆ ಸುಳ್ಳು ಮಾಹಿತಿ ನೀಡಿ ಪಡೆದ ಸಾಲ ಬರೋಬ್ಬರಿ 938 ಕೋಟಿ ರೂ.ಗಳು.
ಯಾವಾಗ ಸರಿಯಾಗಿ ಸಾಲ ವಸೂಲಾತಿಯಾಗಿಲ್ಲವೋ ಬ್ಯಾಂಕ್ ಆಡಿಟರ್‌ಗಳಿಗೆ ಅನುಮಾನ ಬಂದು ಕ್ರಾಸ್ ಚೆಕ್ ಮಾಡಿದ್ದಾರೆ. ಆಗ ಗೊತ್ತಾಗಿದೆ ಕಂಪನಿಯ ಅಸಲಿ ಗೋಲ್‌ಮಾಲ್. ಕೆಎಸ್ ಆಯಿಲ್ ಕಂಪನಿ ಮತ್ತು ಅದರ ಮ್ಯಾನೆಜಿಂಗ್ ಡೈರೆಕ್ಟರ್ ರಮೇಶ್ ಚಂದ್ರ ಗರ್ಗ್ ಮತ್ತು ಇತರ ನಿರ್ದೇಶಕರು ಸೇರಿ ಎಸ್‌ಬಿಐ ಬ್ಯಾಂಕ್‌ಗೆ ವ್ಯಾಪಾರ ವಹಿವಾಟಿನ ಬಗ್ಗೆ ಒಂದಕ್ಕೆ ಹತ್ತು ಸೇರಿಸಿ ತಪ್ಪು ಲೆಕ್ಕಾಚಾರ ಕೊಟ್ಟು ಉಂಡೆನಾಮ ತಿಕ್ಕಿರೋದು.
ಇದು ಗೊತ್ತಾಗುತ್ತಿದ್ದಂತೆ ಈ ಗೋಲ್‌ಮಾಲ್ ಬಗ್ಗೆ ಸಿಬಿಐ ತನಿಖೆಗೆ ವಹಿಸಲಾಗಿದೆ. ಈ ಸಂಬಂಧ ಈಗ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಇತರ ನಿರ್ದೇಶಕರ ಮೊರೆನಾ ಮತ್ತು ದೆಹಲಿ ನಿವಾಸಗಳ ಮೇಲೆ ದಾಳಿ ನಡೆಸಿರುವ ಸಿಬಿಐ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ.