ವರ್ಷದಲ್ಲಿ ಈ 3 ದಿನ ಮಹಿಳೆಯರು ಬರಿಗಾಲಲ್ಲಿ ನಡೀತಾರೆ, ಒಂದು ಕೆಲಸವನ್ನೂ ಮಾಡಲ್ಲ, ಪುರುಷರೇ ಎಲ್ಲಾ ಕೆಲಸ ಮಾಡ್ತಾರೆ!

|

Updated on: Jun 14, 2024 | 11:00 AM

Raja Parba Festival: ಒಡಿಶಾದಲ್ಲಿ ವರ್ಷದ ಮೂರು ದಿನ ಮಹಿಳೆಯರು ಏನೂ ಕೆಲಸ ಮಾಡುವುದಿಲ್ಲ ರಾಣಿಯಂತೆ ಇರ್ತಾರೆ, ಊಟ ಅವರಿದ್ದಲ್ಲಿಗೆ ಬರುತ್ತೆ, ಬರಿಗಾಲಿನಲ್ಲಿಯೇ ನಡೆಯುತ್ತಾರೆ. ಇದಕ್ಕೆ ಕಾರಣವೇನು ಎಂಬ ಮಾಹಿತಿ ಇಲ್ಲಿದೆ.

ವರ್ಷದಲ್ಲಿ ಈ 3 ದಿನ  ಮಹಿಳೆಯರು ಬರಿಗಾಲಲ್ಲಿ ನಡೀತಾರೆ, ಒಂದು ಕೆಲಸವನ್ನೂ ಮಾಡಲ್ಲ, ಪುರುಷರೇ ಎಲ್ಲಾ ಕೆಲಸ ಮಾಡ್ತಾರೆ!
ರಾಜಪರ್ವ
Follow us on

ಒಡಿಶಾದ ಮಹಿಳೆಯರು ವರ್ಷದ ಈ ಮೂರು ದಿನ ಬರಲಿಗಾಲಿನಲ್ಲಿಯೇ ನಡೀತಾರೆ, ಒಂದು ಕೆಲಸವನ್ನೂ ಮಾಡುವುದಿಲ್ಲ, ಅಡುಗೆ ಸೇರಿದಂತೆ ಎಲ್ಲಾ ಕೆಲಸವನ್ನು ಪುರುಷರೇ ಮಾಡ್ತಾರೆ. ಹಾಗಾದರೆ ಈ ಪದ್ಧತಿ ಏಕೆ ಎನ್ನುವ ಆಲೋಚನೆ ನಿಮ್ಮ ಮನಸ್ಸಿಗೆ ಬಂದಿರಬೇಕು. ಇದೊಂದು ಆಚರಣೆ, ಜೂನ್​ 14ರಿಂದ ಒಡಿಶಾದಲ್ಲಿ ರಾಜಪರ್ವ ಆರಂಭವಾಗಲಿದೆ ಅದನ್ನು ರಾಜಪರ್ಬ ಎಂದೂ ಕರೆಯುತ್ತಾರೆ.

ಜೂನ್ 14ರಿಂದ 16ರವರೆಗೆ ಒಡಿ ಶಾದಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಮೂರು ದಿನ ಮಹಿಳೆಯರು ಯಾವ ಕೆಲಸವನ್ನೂ ಮಾಡುವುದಿಲ್ಲ, ಪುರುಷರು ಅಡುಗೆ ಸೇರಿದಂತೆ ಮನೆ ಕೆಲಸವನ್ನೆಲ್ಲಾ ಮಾಡುತ್ತಾರೆ, ಮೂರು ದಿನಗಳ ಕಾಲ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿರುತ್ತಾರೆ. ನೃತ್ಯ, ಹಾಡು ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಇದೊಂದು ಜಾನಪದ ಹಬ್ಬ ಎಂದೇ ಹೇಳಬಹುದು, ಹೆಣ್ಣುಮಕ್ಕಳಿಗೆ ಋತುಸ್ರಾವವಾಗುವುದು ದೇಹದ ಬೆಳವಣಿಗೆಯ ಪ್ರತೀಕ ಎಂದೇ ಹೇಳಲಾಗುತ್ತದೆ. ಅದೇ ಈ ಮುಟ್ಟನ್ನು ಪ್ರತಿ ವರ್ಷ ಒಡಿಶಾದಲ್ಲಿ ಹಬ್ಬದಂತೆ ಆಚರಿಸಲಾಗುತ್ತದೆ ಮುಟ್ಟಿನ ಮಹತ್ವವನ್ನು ಸಾರಲಾಗುತ್ತದೆ. ಆ ದಿನ ಸೂರ್ಯದೇವನ ಆರಾಧನೆ ನಡೆಯುತ್ತದೆ.

ಮತ್ತಷ್ಟು ಓದಿ:
ಮೈಸೂರು: ಉತ್ತಮ ಮಳೆ, ಬೆಳೆಗಾಗಿ ವಿಶೇಷ ಓಕುಳಿ ಹಬ್ಬ ಆಚರಣೆ

ಈ ಮೂರು ದಿನ ಮಹಿಳೆಯರಿಗೆ ರೆಸ್ಟ್​, ಮಹಿಳೆಯರು ಕೈಗೆ ಮೆಹಂದಿ ಹಚ್ಚಿಕೊಂಡು, ಸುಂದರವಾದ ಉಡುಪು ಧರಿಸಿ ನೃತ್ಯಗಳನ್ನು ಮಾಡುತ್ತಾ ಸಮಯ ಕಳೆಯುತ್ತಾರೆ. ಮಳೆಯ ಆಗಮನಕ್ಕೆ ಭೂಮಿ ಹೇಗೆ ತನ್ನನ್ನು ತಾನು ಸಿದ್ಧಪಡಿಸಿಕೊಳ್ಳುತ್ತದೆಯೋ ಅದೇ ರೀತಿ ಹೆಣ್ಣುಮಕ್ಕಳು ಮೊದಲ ಋತುಸ್ರಾವಕ್ಕೆ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳುತ್ತಾರೆ ಎಂದು ನಂಬಲಾಗಿದೆ.

ಬೆಳಗ್ಗೆ ಎದ್ದ ನಂತರ ಅರಿಶಿನ-ಗಂಧದ ಪೇಸ್ಟ್ ಅನ್ನು ಮೈಮೇಲೆ ಹಚ್ಚಿಕೊಳ್ಳುತ್ತಾಳೆ. ಪವಿತ್ರ ಸ್ನಾನ ಮಾಡುತ್ತಾರೆ. ಮಹಾಪ್ರಭು ಜಗನ್ನಾಥನನ್ನು ಪೂಜಿಸುತ್ತಾರೆ. ಆಕೆಯ ಭವಿಷ್ಯದ ಸಂತೋಷದ ಜೀವನಕ್ಕಾಗಿ ಅವಳು ಜಗನ್ನಾಥನನ್ನು ಪ್ರಾರ್ಥಿಸುತ್ತಾಳೆ.

ಮಹಿಳೆಯರು ಮೂರು ದಿನಗಳವರೆಗೆ ಬೇಯಿಸದ ಆಹಾರವನ್ನು ಸೇವಿಸುತ್ತಾರೆ. ಅವಳು ತನ್ನ ಆಹಾರದಲ್ಲಿ ಉಪ್ಪನ್ನು ಸಹ ತೆಗೆದುಕೊಳ್ಳುವುದಿಲ್ಲ. ಮುಟ್ಟಿನ ಸಮಯದಲ್ಲಿ ಮಹಿಳೆಯರು ಹಲಸು, ಮಾವು, ಬಾಳೆಹಣ್ಣು, ಲಿಚಿ ಮತ್ತು ಅನಾನಸ್ ಮುಂತಾದ ಋತುಮಾನದ ಹಣ್ಣುಗಳನ್ನು ತಿನ್ನುತ್ತಾರೆ.

ಅವರು ಒಡಿಶಾದ ಪುಡ್-ಪೀಠ ಎಂಬ ಸಾಂಪ್ರದಾಯಿಕ ಆಹಾರವನ್ನು ತಿನ್ನುತ್ತಾರೆ. ಕಾಲಿಗೆ ಚಪ್ಪಲಿ ಕೂಡ ಹಾಕಿಕೊಳ್ಳುವುದಿಲ್ಲ. ಸತತ ಮೂರು ದಿನ ಮನೆಯಲ್ಲಿ ಯಾವ ಕೆಲಸವನ್ನೂ ಮಾಡುವುದಿಲ್ಲ. ಈ ಮೂರು ದಿನಗಳ ಕಾಲ ಒಡಿಶಾದಲ್ಲಿ ಭೂಮಿಯನ್ನು ಅಗೆಯುವುದಿಲ್ಲ ಎಂಬುದು ಅತ್ಯಂತ ಆಸಕ್ತಿದಾಯಕ ಸಂಗತಿಯಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ